Ananya Panday: ‘ಶಾರುಖ್​ ಖಾನ್​ ನನ್ನ 2ನೇ ಅಪ್ಪ’ ಎಂದಿದ್ದ ಅನನ್ಯಾ ಪಾಂಡೆ; ಡ್ರಗ್ಸ್​ ಸುಳಿಯಲ್ಲಿ ನಟಿ

Shah Rukh Khan: ಶಾರುಖ್​ ಖಾನ್​ ಫ್ಯಾಮಿಲಿ ಜೊತೆ ಅನನ್ಯಾ ಪಾಂಡೆ ಆಪ್ತವಾಗಿದ್ದಾರೆ ಎಂಬುದು ಸ್ಪಷ್ಟ. ಸದ್ಯಕ್ಕೆ ಶಾರುಖ್​ ಪುತ್ರ ಆರ್ಯನ್​ ಖಾನ್​ ಆರ್ಥರ್​ ರೋಡ್​ ಜೈಲಿನಲ್ಲಿದ್ದಾರೆ. ಎಷ್ಟೇ ಪ್ರಯತ್ನ ಮಾಡಿದರೂ ಅವರಿಗೆ ಜಾಮೀನು ಸಿಗುತ್ತಿಲ್ಲ.

Ananya Panday: ‘ಶಾರುಖ್​ ಖಾನ್​ ನನ್ನ 2ನೇ ಅಪ್ಪ’ ಎಂದಿದ್ದ ಅನನ್ಯಾ ಪಾಂಡೆ; ಡ್ರಗ್ಸ್​ ಸುಳಿಯಲ್ಲಿ ನಟಿ
ಶಾರುಖ್​ ಖಾನ್​, ಅನನ್ಯಾ ಪಾಂಡೆ
Follow us
TV9 Web
| Updated By: ಮದನ್​ ಕುಮಾರ್​

Updated on: Oct 21, 2021 | 3:10 PM

ನಟಿ ಅನನ್ಯಾ ಪಾಂಡೆ ಮನೆ ಮೇಲೆ ಎನ್​ಸಿಬಿ ಅಧಿಕಾರಿಗಳು ದಾಳಿ ಮಾಡಿರುವುದು ಕುತೂಹಲಕ್ಕೆ ಕಾರಣ ಆಗಿದೆ. ವಿಜಯ್​ ದೇವರಕೊಂಡ ಜೊತೆ ‘ಲೈಗರ್​’ ಸಿನಿಮಾದಲ್ಲಿ ನಟಿಸುತ್ತಿರುವ ಅನನ್ಯಾ ಪಾಂಡೆ ಈಗ ವಿಚಾರಣೆಯಲ್ಲಿ ಹಾಜರಾಗಬೇಕಿದೆ. ಅವರ ವಿರುದ್ಧ ಸೂಕ್ತ ಸಾಕ್ಷಿಗಳು ಸಿಕ್ಕರೆ ಬಂಧನದ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಅನೇಕರಿಗೆ ಗೊತ್ತಿರದ ವಿಚಾರ ಏನೆಂದರೆ, ಶಾರುಖ್​ ಖಾನ್​ ಕುಟುಂಬದ ಜೊತೆಗೆ ಅನನ್ಯಾ ಪಾಂಡೆಗೆ ಆಪ್ತ ಒಡನಾಟ ಇದೆ. ಶಾರುಖ್​ ಮಕ್ಕಳಾದ ಸುಹಾನಾ ಖಾನ್​ ಮತ್ತು ಆರ್ಯನ್​ ಖಾನ್​ ಅವರು ಅನನ್ಯಾಗೆ ಕ್ಲೋಸ್​ ಫ್ರೆಂಡ್ಸ್.

ಈ ಹಿಂದೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಅನನ್ಯಾ ಪಾಂಡೆ ಹೇಳಿಕೊಂಡಿದ್ದರು. ಶಾರುಖ್​ ಖಾನ್​ ಕುಟುಂಬದ ಜೊತೆ ತಮ್ಮ ಸಂಬಂಧ ಹೇಗಿದೆ ಎಂಬುದನ್ನು ಅವರು ವಿವರಿಸಿದ್ದರು. ‘ಶಾರುಖ್​ ಖಾನ್​ ನನಗೆ ಎರಡನೇ ಅಪ್ಪ ಇದ್ದಂತೆ. ಅವರು ನನ್ನ ಆಪ್ತ ಸ್ನೇಹಿತೆಯ ತಂದೆ. ಅವರ ಜೊತೆ ನಾವು ಐಪಿಎಲ್​ ಮ್ಯಾಚ್​ ನೋಡಲು ಹೋಗುತ್ತಿದ್ದೆವು’ ಎಂದು ಅನನ್ಯಾ ಪಾಂಡೆ ಹೇಳಿದ್ದರು.

ಶಾರುಖ್​ ಪುತ್ರಿ ಸುಹಾನಾ ಖಾನ್​, ಸಂಜಯ್​ ಕಪೂರ್​ ಮಗಳು ಶನಾಯಾ ಹಾಗೂ ಅನನ್ಯಾ ಪಾಂಡೆ ಬೆಸ್ಟ್​ ಫ್ರೆಂಡ್ಸ್​. ‘ಚಿಕ್ಕವರಿದ್ದಾಗ ನಾವೆಲ್ಲ ವಿಚಿತ್ರ ಕೆಲಸಗಳನ್ನು ಮಾಡುತ್ತಿದ್ದವು. ಅದಕ್ಕೆಲ್ಲ ಶಾರುಖ್ ಖಾನ್​ ಪ್ರೋತ್ಸಾಹ ನೀಡುತ್ತಿದ್ದರು. ಅವರು ನಮ್ಮ ಫೋಟೋಶೂಟ್​ ಮಾಡುತ್ತಿದ್ದರು. ನಮ್ಮ ವಿಡಿಯೋಗಳನ್ನು ಚಿತ್ರಿಸಿ ನಮ್ಮನ್ನು ಅತ್ಯುತ್ತಮ ನಟರು ಎಂಬಂತೆ ಟ್ರೀಟ್​ ಮಾಡುತ್ತಿದ್ದರು. ಅದನ್ನು ಎಲ್ಲರಿಗೂ ತೋರಿಸುತ್ತಿದ್ದರು’ ಎಂದು ಅನನ್ಯಾ ಹೇಳಿಕೊಂಡಿದ್ದರು.

ಒಟ್ಟಿನಲ್ಲಿ ಶಾರುಖ್​ ಖಾನ್​ ಫ್ಯಾಮಿಲಿ ಜೊತೆ ಅನನ್ಯಾ ಪಾಂಡೆ ಆಪ್ತವಾಗಿದ್ದಾರೆ ಎಂಬುದು ಸ್ಪಷ್ಟ. ಸದ್ಯಕ್ಕೆ ಶಾರುಖ್​ ಪುತ್ರ ಆರ್ಯನ್​ ಖಾನ್​ ಆರ್ಥರ್​ ರೋಡ್​ ಜೈಲಿನಲ್ಲಿದ್ದಾರೆ. ಎಷ್ಟೇ ಪ್ರಯತ್ನ ಮಾಡಿದರೂ ಅವರಿಗೆ ಜಾಮೀನು ಸಿಗುತ್ತಿಲ್ಲ. ಹಾಗಾಗಿ ಅವರ ಪರ ವಕೀಲರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂದರ್ಭಕ್ಕೆ ಸರಿಯಾಗಿ ಅನನ್ಯಾ ಪಾಂಡೆ ಮನೆ ಮೇಲೆ ಎನ್​ಸಿಬಿ ದಾಳಿ ನಡೆದಿದೆ. ಎನ್​ಸಿಬಿ ಅಧಿಕಾರಿಗಳು ಅನನ್ಯಾ ಅವರ ಮೊಬೈಲ್​ ಫೋನ್​ ವಶಕ್ಕೆ ಪಡೆದುಕೊಂಡು, ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ:

Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್​ ಖಾನ್​; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್​ ಮಗನ ವರ್ತನೆ

‘ಇನ್ಮೇಲೆ ಒಳ್ಳೇ ಮನುಷ್ಯ ಆಗ್ತೀನಿ’; ಎನ್​ಸಿಬಿ ಅಧಿಕಾರಿಗಳಿಗೆ ಭರವಸೆ ನೀಡಿದ ಶಾರುಖ್​ ಪುತ್ರ ಆರ್ಯನ್​ ಖಾನ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ