Ananya Pandey: ಚಿತ್ರರಂಗದಲ್ಲಿ ಬೆಳೆಯುವುದಕ್ಕೂ ಮುನ್ನವೇ ಕುಖ್ಯಾತಿ ಪಡೆದ ಅನನ್ಯಾ ಪಾಂಡೆಗೆ ಆರ್ಯನ್ ಜತೆ ಏನು ನಂಟು?
NCB raid: ಎನ್ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಇಂದು (ಅ.21) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಅವರ ವಿರುದ್ಧ ಸೂಕ್ತ ಸಾಕ್ಷಿ ಸಿಕ್ಕರೆ ಬಂಧನ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರಿಗೆ ಸದ್ಯಕ್ಕಂತೂ ಸಂಕಷ್ಟ ತಪ್ಪಿಲ್ಲ. ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ಅವರಿಗೆ ಜಾಮೀನು ಸಿಗುತ್ತಿಲ್ಲ. ಅದರ ಜತೆಗೆ ಎನ್ಸಿಬಿ ಅಧಿಕಾರಿಗಳು ತನಿಖೆ ಇನ್ನಷ್ಟು ಚುರುಕುಗೊಳಿಸಿದ್ದಾರೆ. ಶಾರುಖ್ ಖಾನ್ ಮನೆ ಮೇಲೆ ದಾಳಿ ಮಾಡಲಾಗಿದೆ. ಅಲ್ಲದೇ ಉದಯೋನ್ಮುಖ ನಟಿ ಅನನ್ಯಾ ಪಾಂಡೆ ನಿವಾಸದ ಮೇಲೂ ದಾಳಿ ನಡೆದಿದ್ದು, ಡ್ರಗ್ಸ್ ಕೇಸ್ ಸುಳಿಯಲ್ಲಿ ಅವರೂ ಸಿಕ್ಕಿಕೊಂಡಿದ್ದಾರೆ. ಡ್ರಗ್ಸ್ ವ್ಯವಹಾರದಲ್ಲಿ ಅನನ್ಯಾ ಪಾತ್ರ ಏನು ಎಂಬ ಪ್ರಶ್ನೆ ಈಗ ಮೂಡಿದೆ.
ಬಾಲಿವುಡ್ನ ಖ್ಯಾತ ನಟ ಚಂಕಿ ಪಾಂಡೆ ಅವರ ಪುತ್ರಿಯೇ ಅನನ್ಯಾ ಪಾಂಡೆ. ನೂರಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಚಂಕಿ ಪಾಂಡೆ ಅವರಿಗೆ ಸಲ್ಲುತ್ತದೆ. ಆದರೆ ಅವರ ಮಗಳು ಅನನ್ಯಾ ಈಗ ತಾನೇ ಬಾಲಿವುಡ್ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಈಗಿನ್ನೂ ಅವರಿಗೆ 22ರ ಪ್ರಾಯ. 2019ರಲ್ಲಿ ತೆರೆಕಂಡ ‘ಸ್ಟೂಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟ ಅವರಿಗೆ ಮೊದಲ ಸಿನಿಮಾದಲ್ಲೇ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತು. ‘ಪತಿ ಪತ್ನಿ ಔರ್ ವೋ’, ‘ಖಾಲಿ ಪೀಲಿ’ ಸಿನಿಮಾದಲ್ಲಿ ಅವರು ನಟಿಸಿದರು. ಸದ್ಯ ವಿಜಯ್ ದೇವರಕೊಂಡ ಜೊತೆ ‘ಲೈಗರ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಷ್ಟರಲ್ಲಾಗಲೇ ಅವರ ಹೆಸರು ಡ್ರಗ್ಸ್ ಜಾಲದ ಜೊತೆ ತಳುಕು ಹಾಕಿಕೊಂಡಿದೆ.
ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬ ಮಾತು ಅನೇಕ ಬಾರಿ ಸಾಬೀತಾಗಿದೆ. ಖಚಿತ ಮಾಹಿತಿ ಮೇರೆಗೆ ಎನ್ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆ ಮನೆ ಮೇಲೆ ದಾಳಿ ಮಾಡಿದ್ದಾರೆ. ಏಕಕಾಲಕ್ಕೆ ಶಾರುಖ್ ಖಾನ್ ಮತ್ತು ಅನನ್ಯಾ ಪಾಂಡೆ ನಿವಾಸದ ಮೇಲೆ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣ ಆಗಿದೆ. ಶಾರುಖ್ ಪುತ್ರ ಆರ್ಯನ್ ಖಾನ್ ಮತ್ತು ಅನನ್ಯಾ ನಡುವೆ ಡ್ರಗ್ಸ್ ವಿಚಾರದಲ್ಲಿ ವ್ಯವಹಾರ ಇತ್ತಾ? ವಿಚಾರಣೆ ವೇಳೆ ಈ ವಿಷಯವನ್ನು ಆರ್ಯನ್ ಖಾನ್ ಬಾಯಿ ಬಿಟ್ಟಿರಬಹುದೇ ಎಂಬ ಪ್ರಶ್ನೆ ಈಗ ಮೂಡಿದೆ.
ಸದ್ಯ ಎನ್ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಇಂದು (ಅ.21) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಅವರ ವಿರುದ್ಧ ಸೂಕ್ತ ಸಾಕ್ಷಿ ಸಿಕ್ಕರೆ ಬಂಧನ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ:
ಇಲ್ಲೊಬ್ಬ ಬಡಪಾಯಿ, ನಕಲಿ ಶಾರುಖ್ ಖಾನ್ಗೆ ಮಕ್ಕಳ ಶಾಲೆ ಫೀಸ್ ಕಟ್ಟಲು ದುಡ್ಡಿಲ್ಲ; ಯಾರಿದು?
Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್ ಖಾನ್; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್ ಮಗನ ವರ್ತನೆ