Shah Rukh Khan: ಬಾಲಿವುಡ್​ ನಟ ಶಾರುಖ್​ ಖಾನ್, ನಟಿ ಅನನ್ಯಾ ಪಾಂಡೆ ನಿವಾಸದ ಮೇಲೆ NCB ದಾಳಿ?; ಇಲ್ಲಿದೆ ಅಸಲಿ ಮಾಹಿತಿ

NCB Raids Ananya Pandey: ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ಅನನ್ಯಾ ಪಾಂಡೆ ನಿವಾಸದ ಮೇಲೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆಯೇ? ಇಲ್ಲಿದೆ ಅಸಲಿ ಮಾಹಿತಿ.

Shah Rukh Khan: ಬಾಲಿವುಡ್​ ನಟ ಶಾರುಖ್​ ಖಾನ್, ನಟಿ ಅನನ್ಯಾ ಪಾಂಡೆ ನಿವಾಸದ ಮೇಲೆ NCB ದಾಳಿ?; ಇಲ್ಲಿದೆ ಅಸಲಿ ಮಾಹಿತಿ
ಶಾರುಖ್ ಖಾನ್

ಮುಂಬೈ: ಮುಂಬೈನಲ್ಲಿ ಬಾಲಿವುಡ್​ ನಟ, ನಟಿಯರ ಮನೆಗಳ ಮೇಲೆ ಎನ್​ಸಿಬಿ ದಾಳಿ ನಡೆಸಿದೆ. ಅದರಲ್ಲಿ ಮುಂಬೈನ ಬಾಂದ್ರಾದಲ್ಲಿರುವ ನಟ ಶಾರುಖ್​ ಖಾನ್ ನಿವಾಸ ‘ಮನ್ನತ್’ಗೆ ತೆರಳಿ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ವರದಿಯಾಗಿತ್ತು. ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿರುವ ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್​ಸಿಬಿ ಅಧಿಕಾರಿಗಳು ತನಿಖೆಗಾಗಿ ಶೋಧ ನಡೆಸಲು ಶಾರುಖ್ ನಿವಾಸಕ್ಕೆ ತೆರಳಿದ್ದಾರೆ ಎಂದೂ ಇದೇ ವೇಳೆ ಹೇಳಲಾಗಿತ್ತು. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ, ಶಾರುಖ್ ಮನೆಗೆ ಎನ್​ಸಿಬಿ ಅಧಿಕಾರಿಗಳು ಪೇಪರ್​ ವರ್ಕ್​ ಕೆಲಸಕ್ಕಾಗಿ ತೆರಳಿದ್ದರು. ಎನ್​ಸಿಬಿಯ ಮತ್ತೊಂದು ತಂಡ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮನೆಗೆ ತೆರಳಿತ್ತು. ಇದೇ ವೇಳೆ ಎನ್​ಸಿಬಿ ಅನನ್ಯಾ ಪಾಂಡೆಗೆ ಸಮನ್ಸ್ ಜಾರಿ ಮಾಡಿದೆ.

‘ಮನ್ನತ್​’ಗೆ ತೆರಳುತ್ತಿರುವ ಎನ್​ಸಿಬಿ ಅಧಿಕಾರಿಗಳು:


ನಟಿ ಅನನ್ಯಾ ಪಾಂಡೆ ಮನೆಗೆ ಎನ್​ಸಿಬಿ ಅಧಿಕಾರಿಗಳು ತೆರಳುತ್ತಿರುವ ದೃಶ್ಯ:

ಇಂದು ಮುಂಜಾನೆ ನಟ ಶಾರುಖ್ ಆರ್ಥರ್ ರೋಡ್ ಜೈಲಿಗೆ ತೆರಳಿ ಆರ್ಯನ್​ರನ್ನು ಭೇಟಿಯಾಗಿದ್ದರು. ಪ್ರಸ್ತುತ ಆರ್ಯನ್ ಖಾನ್ ನ್ಯಾಯಾಂಗ ಬಂಧನದಲ್ಲಿದ್ದು, ಹೈಕೋರ್ಟ್​ನಲ್ಲಿ ಅಕ್ಟೋಬರ್ 26ರಂದು ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.

ಶಾರುಖ್ ಮನೆಯಲ್ಲಿ ಶೋಧ ನಡೆದಿಲ್ಲ: ಮೂಲಗಳ ಮಾಹಿತಿ

ಶಾರುಖ್ ಖಾನ್ ಮನೆಯಲ್ಲಿ ಎನ್‌ಸಿಬಿ ಶೋಧ ಮಾಡಿಲ್ಲ ಹಾಗೂ ಶಾರುಖ್ ಖಾನ್‌ಗೆ ಯಾವುದೇ ಸಮನ್ಸ್ ಕೂಡ ನೀಡಿಲ್ಲ ಎಂದು ಮೂಲಗಳು ಮಾಹಿತಿ ನೀಡಿದೆ. ಕೇವಲ ಪೇಪರ್ ವರ್ಕ್‌ಗಾಗಿ ಶಾರುಖ್ ಮನೆಗೆ ಭೇಟಿ ನೀಡಿ, ಎನ್​ಸಿಬಿ ಅಧಿಕಾರಿಗಳು ವಾಪಸ್ಸಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ:

Shah Rukh Khan: ಕೊನೆಗೂ ‘ಮನ್ನತ್​’ನಿಂದ ಹೊರಬಂದ ಶಾರುಖ್; ಆರ್ಥರ್ ರೋಡ್ ಜೈಲಿನಲ್ಲಿ ಪುತ್ರನನ್ನು ಭೇಟಿಯಾದ ನಟ

ಆರ್ಯನ್​ಗೆ ಜಾಮೀನು ನೀಡೋಕೆ ಸಾಧ್ಯವೇ ಇಲ್ಲ ಎಂದ ಎನ್​ಡಿಪಿಎಸ್​ ಕೋರ್ಟ್​

Click on your DTH Provider to Add TV9 Kannada