Shah Rukh Khan: ಕೊನೆಗೂ ‘ಮನ್ನತ್​’ನಿಂದ ಹೊರಬಂದ ಶಾರುಖ್; ಆರ್ಥರ್ ರೋಡ್ ಜೈಲಿನಲ್ಲಿ ಪುತ್ರನನ್ನು ಭೇಟಿಯಾದ ನಟ

Aryan Khan: ಜಾಮೀನು ಸಿಗದೇ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್​ ಖಾನ್​ರನ್ನು ನೋಡಲು ಶಾರುಖ್ ಖಾನ್ ಜೈಲಿಗೆ ಆಗಮಿಸಿದ್ದಾರೆ. ಆರ್ಯನ್ ಬಂಧನದ ಬಳಿಕ ಮೊದಲ ಬಾರಿಗೆ ಶಾರುಖ್ ಮಗನನ್ನು ಭೇಟಿಯಾಗಿದ್ದಾರೆ.

Shah Rukh Khan: ಕೊನೆಗೂ ‘ಮನ್ನತ್​’ನಿಂದ ಹೊರಬಂದ ಶಾರುಖ್; ಆರ್ಥರ್ ರೋಡ್ ಜೈಲಿನಲ್ಲಿ ಪುತ್ರನನ್ನು ಭೇಟಿಯಾದ ನಟ
ಆರ್ಯನ್ ಖಾನ್, ಶಾರುಖ್ ಖಾನ್
Follow us
TV9 Web
| Updated By: shivaprasad.hs

Updated on:Oct 21, 2021 | 10:21 AM

ಮುಂಬೈ: ಪುತ್ರ ಆರ್ಯನ್ ಖಾನ್ ಬಂಧನದ ನಂತರ ತಮ್ಮ ನಿವಾಸ ‘ಮನ್ನತ್’ನಿಂದ ಹೊರಬಂದಿರದ ಶಾರುಖ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಆರ್ಥರ್ ರೋಡ್ ಜೈಲಿಗೆ ತೆರಳಿ ಅವರು ಆರ್ಯನ್​ ಖಾನ್​ರನ್ನು ಭೇಟಿಯಾಗಿದ್ದಾರೆ. ಕ್ರೂಸ್ ಶಿಪ್​ನಲ್ಲಿ ನಡೆದಿದ್ದ ಡ್ರಗ್ ಪಾರ್ಟಿಯಲ್ಲಿ ಭಾಗಿಯಾದ ಆರೋಪದ ಮೇಲೆ ಆರ್ಯನ್​ ಖಾನ್​ ಬಂಧನಕ್ಕೊಳಗಾಗಿದ್ಇಂದರು. ಪ್ರಸ್ತುತ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್​ರನ್ನು ನೋಡಲು, ಶಾರುಖ್ ತೆರಳಿದ್ಧಾರೆ. ಆರ್ಯನ್ ಬಂಧನದ ಬಳಿಕ ಮೊದಲ ಬಾರಿಗೆ ಶಾರುಖ್ ಹಾಗೂ ಆರ್ಯನ್​ ಪರಸ್ಪರ ಭೇಟಿಯಾಗಿದ್ದಾರೆ.

ನಟ ಶಾರುಖ್ ಖಾನ್ ಪುತ್ರ ಆರ್ಯನ್ ಬಂಧನದ ನಂತರ ಇದುವರೆಗೆ ತಮ್ಮ ಮನೆಯಿಂದ ಹೊರಬಂದಿರಲಿಲ್ಲ. ನಿನ್ನೆ (ಅಕ್ಟೋಬರ್ 20) ನಡೆದ ಜಾಮೀನು ಅರ್ಜಿಯ ತೀರ್ಪಿನಲ್ಲಿ, ಆರ್ಯನ್​ಗೆ ಬೇಲ್ ಸಿಗುವ ವಿಶ್ವಾಸ ಇಟ್ಟುಕೊಂಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬಂಧನದ ಬಳಿಕ ಮೊದಲ ಬಾರಿಗೆ ಪುತ್ರನನ್ನು ನೋಡಲು ಶಾರುಖ್ ಜೈಲಿಗೆ ಆಗಮಿಸಿ, ಒಂದು ಸಣ್ಣ ಭೇಟಿಯ ನಂತರ ನಿರ್ಗಮಿಸಿದ್ದಾರೆ. ಈ ವೇಳೆ ಅವರು ಮಾಧ್ಯಮಗಳಿಂದ ಅಂತರ ಕಾಪಾಡಿಕೊಂಡಿದ್ದಾರೆ.

ಶಾರುಖ್ ಜೈಲಿನಿಂದ ಮರಳುತ್ತಿರುವುದರ ಕುರಿತು ಎಎನ್​ಐ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:

ಆರ್ಯನ್ ಜಾಮೀನಿಗಾಗಿ ಹೈಕೋರ್ಟ್​ನಲ್ಲಿ ಅರ್ಜಿ: ಆರ್ಯನ್ ಖಾನ್ ಪರ ವಕೀಲರು ಎನ್​ಡಿಪಿಎಸ್ ನ್ಯಾಯಾಲಯದಲ್ಲಿ ಜಾಮೀನು ಸಿಗದ ಕಾರಣ, ಹೈಕೋರ್ಟ್​ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ. ಈ ಕುರಿತ ವಿಚಾರಣೆಗಳು ಇನ್ನಷ್ಟೇ ನಡೆಯಬೇಕಿದೆ. ಆರ್ಯನ್ ಪರ ಖ್ಯಾತ ವಕೀಲರಾದ ಸತೀಶ್ ಮಾನೆಶಿಂಧೆ ಹಾಗೂ ಅಮಿತ್ ದೇಸಾಯಿ ವಾದ ಮಂಡಿಸಿದ್ದರು. ಎನ್​ಸಿಬಿ ಪರ ವಕೀಲರು ಆರ್ಯನ್ ಹೈಪ್ರೊಫೈಲ್ ಕುಟುಂಬದ ವ್ಯಕ್ತಿಯಾಗಿರುವ ಕಾರಣ, ಜಾಮೀನು ನೀಡಿದರೆ ಸಾಕ್ಷ್ಯ ನಾಶವಾಗುವ ಆತಂಕ ವ್ಯಕ್ತಪಡಿಸಿದ್ದರು. ಜೊತೆಗೆ ಆರ್ಯನ್ ವಾಟ್ಸಾಪ್ ಚಾಟ್​ಗಳನ್ನು ಹಾಜರುಪಡಿಸಿ, ಪ್ರಕರಣದಲ್ಲಿ ಆರ್ಯನ್ ಸಂಬಂಧವನ್ನು ವಿವರಿಸಿದ್ದರು. ನ್ಯಾಯಾಲಯ ಇದನ್ನು ಪರಿಗಣಿಸಿ ಜಾಮೀನು ನೀಡಿರಲಿಲ್ಲ.

ಇದನ್ನೂ ಓದಿ:

ಆರ್ಯನ್​ಗೆ ಜಾಮೀನು ನೀಡೋಕೆ ಸಾಧ್ಯವೇ ಇಲ್ಲ ಎಂದ ಎನ್​ಡಿಪಿಎಸ್​ ಕೋರ್ಟ್​

Donald Trump: ಟ್ವಿಟರ್​, ಫೇಸ್​ಬುಕ್​ಗೆ ಸಡ್ಡು ಹೊಡೆಯಲು ಮುಂದಾದ ಟ್ರಂಪ್; ಸ್ವಂತ ಸಾಮಾಜಿಕ ಜಾಲತಾಣ ಘೋಷಣೆ

Published On - 10:16 am, Thu, 21 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ