Anushka Sharma: ಒಂದೇ ಒಂದು ಚಿತ್ರದಿಂದ ಅಭಿಮಾನಿಗಳ ಮನಗೆದ್ದ ಅನುಷ್ಕಾ; ಅಂಥದ್ದೇನಿದೆ ಅದರಲ್ಲಿ?

Virat Kohli: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರಸ್ತುತ ಪತಿ ವಿರಾಟ್ ಕೊಹ್ಲಿಯೊಂದಿಗೆ ದುಬೈನಲ್ಲಿದ್ದಾರೆ. ಇತ್ತೀಚೆಗೆ ಅವರು ಹಂಚಿಕೊಂಡ ಚಿತ್ರಗಳು ಸುದ್ದಿಯಾಗಿವೆ.

Anushka Sharma: ಒಂದೇ ಒಂದು ಚಿತ್ರದಿಂದ ಅಭಿಮಾನಿಗಳ ಮನಗೆದ್ದ ಅನುಷ್ಕಾ; ಅಂಥದ್ದೇನಿದೆ ಅದರಲ್ಲಿ?
ಅನುಷ್ಕಾ ಶರ್ಮಾ
TV9kannada Web Team

| Edited By: shivaprasad.hs

Oct 22, 2021 | 12:12 PM

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರಸ್ತುತ ಮಗಳು ವಮಿಕಾಳೊಂದಿಗೆ ದುಬೈಗೆ ತೆರಳಿದ್ದಾರೆ. ಪತಿ ವಿರಾಟ್ ಕೊಹ್ಲಿ ಟಿ20 ಅಂತರಾಷ್ಟ್ರೀಯ ವಿಶ್ವಕಪ್​ನಲ್ಲಿ ಭಾಗವಹಿಸುತ್ತಿದ್ದು, ಅನುಷ್ಕಾ ಅವರಿಗೆ ಸಾಥ್ ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಕ್ವಾರಂಟೈನ್​ ಸಮಯದಲ್ಲಿ ತೆಗೆದ ಚಿತ್ರಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ವಿರಾಟ್ ಒಂದೇ ಹೋಟೆಲ್​ನಲ್ಲಿ ಇದ್ದರೂ ಬಹುದೂರ ನಿಂತು ಮಗಳು ವಮಿಕಾಳಿಗೆ ‘ಹಾಯ್’ ಮಾಡುತ್ತಿದ್ದರು. ಅದಕ್ಕೆ ಕ್ಯಾಪ್ಶನ್ ನೀಡಿದ್ದ ಅನುಷ್ಕಾ, ಕ್ವಾರಂಟೈನ್ ಸಮಯದಲ್ಲಿ ಪ್ರೀತಿ ಹೀಗಿರುತ್ತದೆ ಎಂದು ಬರೆದಿದ್ದರು. ಪ್ರಸ್ತುತ ಅವರು ಮತ್ತೊಂದು ಹೊಸ ಚಿತ್ರವನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ಅನುಷ್ಕಾ ದುಬೈನಲ್ಲಿ ಮುಂಜಾನೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಯಾವುದೇ ಮೇಕಪ್ ಧರಿಸದೇ ಇರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಜೊತೆಗೆ ಇದಕ್ಕೆ ಭರಪೂರ ಮೆಚ್ಚುಗೆಯೂ ವ್ಯಕ್ತವಾಗಿದೆ. ಅನುಷ್ಕಾ ಇನ್ಸಟಾಗ್ರಾಂ ಸ್ಟೋರಿಯಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ ಹಂಚಿಕೊಂಡಿರುವ ಚಿತ್ರ ಇಲ್ಲಿದೆ.

Anushka Sharma

ಅನುಷ್ಕಾ ಹಂಚಿಕೊಂಡಿರುವ ಚಿತ್ರ

ಇತ್ತೀಚೆಗಷ್ಟೇ ಅನುಷ್ಕಾ, ವಿರಾಟ್ ಕೊಹ್ಲಿ ವಮಿಕಾಳೊಂದಿಗೆ ಮಾತನಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದರು. ಆ ಚಿತ್ರಗಳು ಸಖತ್ ವೈರಲ್ ಆಗಿದ್ದವು. ಅನುಷ್ಕಾ ಹಾಗೂ ವಿರಾಟ್ ದಂಪತಿ ಕೆಲ ಸಮಯದವರೆಗೆ ವಮಿಕಾಳ ಮುಖವನ್ನು ಬಹಿರಂಗಗೊಳಿಸದಿರಲು ನಿರ್ಧರಿಸಿದ್ದಾರೆ. ಆದ್ದರಿಂದ ಹಿಂದಿನಿಂದ ತೆಗೆದ ಚಿತ್ರವನ್ನು ಅವರು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ವಮಿಕಾ ಆಟವಾಡುತ್ತಿರುವಾಗ ವಿರಾಟ್ ಮಾತನಾಡಿಸುತ್ತಿರುವ ಮುದ್ದಾದ ಚಿತ್ರ ಎಲ್ಲರ ಮನಗೆದ್ದಿತ್ತು.

ಇದರೊಂದಿಗೆ ವಿರಾಟ್ ಕೊಹ್ಲಿ ಕೂಡ ಒಂದು ಚಿತ್ರ ಹಂಚಿಕೊಂಡಿದ್ದರು. ಅದರಲ್ಲಿ ಅನುಷ್ಕಾ ಹಾಗೂ ವಿರಾಟ್ ಜೊತೆಯಲ್ಲಿ  ವಮಿಕಾಳೂ ಕೂತಿದ್ದಳು. ಆ ಚಿತ್ರವೂ ಎಲ್ಲರ ಪ್ರೀತಿ ಗಳಿಸಿತ್ತು. ವಿರಾಟ್ ಹಂಚಿಕೊಂಡಿರುವ ಚಿತ್ರ ಇಲ್ಲಿದೆ.

View this post on Instagram

A post shared by Virat Kohli (@virat.kohli)

ಪ್ರಸ್ತುತ ದುಬೈನಲ್ಲಿರುವ ಅನುಷ್ಕಾ ಹಂಚಿಕೊಳ್ಳುತ್ತಿರುವ ಈ ಚಿತ್ರಗಳು ಅಭಿಮಾನಿಗಳ ಮನಗೆದ್ದಿವೆ. ಅಲ್ಲದೇ ಇನ್ನು ವಿಶ್ವಕಪ್ ಆರಂಭವಾಗುವುದರಿಂದ ಆಟದ ಸಂದರ್ಭದ, ಗೆಲುವಿನ ಸಂದರ್ಭದ ಚಿತ್ರಗಳನ್ನೂ ಅಭಿಮಾನಿಗಳು ಅನುಷ್ಕಾರಿಂದ ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ:

ರಂಗೀಲಾದ ರಂಭೆ ಊರ್ಮಿಳಾ ಮಾತೊಂಡ್ಕರ್ ಚೆಲುವಿನ್ನೂ ಮಾಸಿಲ್ಲ, ಮಾಸುವ ಲಕ್ಷಣಗಳೂ ಇಲ್ಲ ಬಿಡಿ!

T20 World cup: ಕೊಹ್ಲಿ, ರೋಹಿತ್ ಅಲ್ಲ: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಗೇಮ್ ಚೇಂಜರ್ಸ್ ಇವರೇ ನೋಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada