AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World cup: ಕೊಹ್ಲಿ, ರೋಹಿತ್ ಅಲ್ಲ: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಗೇಮ್ ಚೇಂಜರ್ಸ್ ಇವರೇ ನೋಡಿ

KL Rahul: ಟಿ20 ವಿಶ್ವಕಪ್ ಅನ್ನು ಬೊಂಬಾಟ್ ಆಗಿ ಆರಂಭಿಸಿರುವ ಕನ್ನಡಿದ ಕೆ. ಎಲ್ ರಾಹುಲ್ ಮೊದಲ ಅಭ್ಯಾಸ ಪಂದ್ಯದಲ್ಲೇ ಸ್ಪೋಟಕ ಅರ್ಧಶತಕ ಸಿಡಿಸಿದ್ದರು. ಇವರು ಟೀಮ್ ಇಂಡಿಯಾದ ಪ್ರಮುಖ ಗೇಮ್ ಚೇಂಜರ್ ಆಗಿದ್ದಾರೆ.

T20 World cup: ಕೊಹ್ಲಿ, ರೋಹಿತ್ ಅಲ್ಲ: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಗೇಮ್ ಚೇಂಜರ್ಸ್ ಇವರೇ ನೋಡಿ
Team India T20 World Cup
TV9 Web
| Updated By: Vinay Bhat|

Updated on: Oct 22, 2021 | 10:28 AM

Share

ಟಿ20 ವಿಶ್ವಕಪ್ ಕೂಟದಲ್ಲಿ (ICC T20 World Cup) ಇದೇ ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ (India) ತನ್ನ ಅಭಿಯಾನವನ್ನು ಆರಂಭಿಸಲಿದೆ. ವಿರಾಟ್ ಕೊಹ್ಲಿ (Virat Kohli) ಪಡೆ ಐಸಿಸಿ ಪ್ರಶಸ್ತಿ ಗೆದ್ದು 8 ವರ್ಷಗಳಾಗಿದ್ದು, ಹೀಗಾಗಿ ಈ ಬಾರಿ ಟೀಮ್ ಇಂಡಿಯಾ (Team India) ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅದರಂತೆ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಮೂಲಕ ಭರ್ಜರಿ ಸಿದ್ಧತೆ ನಡೆಸಿದೆ. ಬ್ಯಾಟಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಆಟಗಾರರು ದೊಡ್ಡ ಮೊತ್ತದ ಟಾರ್ಗೆಟ್ ಇದ್ದರೂ ಚೇಸ್ ಮಾಡುವ ಸಾಮರ್ಥ್ಯವಿರುವಂತೆ ಕಾಣಿಸಿಕೊಂಡಿದ್ದಾರೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಸ್ಪಿನ್ನರ್​ಗಳು ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸಲಿಲ್ಲ. ಆದರೆ, ಎರಡನೇ ಪ್ರ್ಯಾಕ್ಟೀಸ್ ಮ್ಯಾಚ್​ನಲ್ಲಿ (Warm-Up match) ಅರ್. ಅಶ್ವಿನ್ ಹಾಗೂ ರಾಹುಲ್ ಚಹಾರ್ ಕಮ್​ಬ್ಯಾಕ್ ಮಾಡಿದ್ದು ಸ್ಪಿನ್ ವಿಭಾಗದಲ್ಲಿ ಬಲಿಷ್ಠವಾಗಿದೆ. ಸದ್ಯ ಈ ಬಾರಿಯ ವಿಶ್ವಕಪ್​ನಲ್ಲಿ ಭಾರತದ ಮೂವರು ಆಟಗಾರರು ಗೇಮ್ ಚೇಂಜರ್ಸ್ (Game Changers) ಆಗಲಿದ್ದಾರಂತೆ.

ಕೆ. ಎಲ್ ರಾಹುಲ್: ಟಿ20 ವಿಶ್ವಕಪ್ ಅನ್ನು ಬೊಂಬಾಟ್ ಆಗಿ ಆರಂಭಿಸಿರುವ ಕನ್ನಡಿದ ಕೆ. ಎಲ್ ರಾಹುಲ್ ಮೊದಲ ಅಭ್ಯಾಸ ಪಂದ್ಯದಲ್ಲೇ ಸ್ಪೋಟಕ ಅರ್ಧಶತಕ ಸಿಡಿಸಿದ್ದರು. ಭರ್ಜರಿ ಫಾರ್ಮ್​ನಲ್ಲಿರುವ ಇವರು ಇತ್ತೀಚೆಗಷ್ಟೆ ಮುಕ್ತಾಯಗೊಂಡ ಐಪಿಎಲ್​ನಲ್ಲಿ 13 ಪಂದ್ಯಗಳಿಂದ ಬರೋಬ್ಬರಿ 626 ರನ್ ಸಿಡಿಸಿದ್ದರು. 6 ಅರ್ಧಶತಕ ಕೂಡ ಬಾರಿಸಿದ್ದರು. ಇವರು ಟೀಮ್ ಇಂಡಿಯಾದ ಪ್ರಮುಖ ಗೇಮ್ ಚೇಂಜರ್ ಆಗಿದ್ದಾರೆ.

ವರುಣ್ ಚಕ್ರವರ್ತಿ: ಸ್ಪಿನ್ ಮಾಂತ್ರಿಕ ವರುಣ್ ಚಕ್ರವರ್ತಿಗೆ ಇದು ಚೊಚ್ಚಲ ವಿಶ್ವಕಪ್. ಹೀಗಾಗಿ ಇವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇವರು ಭಾರತದ ಟ್ರಂಪ್ ಕಾರ್ಡ್ ಆಗಿದ್ದಾರೆ. ಐಪಿಎಲ್ 2021ರ 17 ಪಂದ್ಯಗಳಲ್ಲಿ ಇವರು 149 ಡಾಟ್ ಬಾಲ್ ಹಾಕಿದ್ದಾರೆ. 18 ವಿಕೆಟ್ ಕಬಳಿಸಿದ್ದಾರೆ.

ಜಸ್​ಪ್ರೀತ್ ಬುಮ್ರಾ: ಯಾರ್ಕರ್ ಕಿಂಗ್ ಜಸ್​ಪ್ರೀತ್ ಬುಮ್ರಾ ಯಾವುದೇ ಮಾದರಿಯ ಕ್ರಿಕೆಟ್​ನಲ್ಲಾದರು ಗೇಮ್ ಚೇಂಜರ್ ಆಗಿದ್ದಾರೆ. ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ ಇವರು ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅಭ್ಯಾಸ ಪಂದ್ಯದಲ್ಲೂ ಪರಿಣಾಮಕಾರಿಯಾಗಿ ಗೋಚರಿಸಿದ್ದರು. ಹೀಗಾಗಿ ಇವರ ಮೇಲೂ ಸಾಕಷ್ಟು ನಿರೀಕ್ಷೆಗಳಿದ್ದು, ಗೇಮ್ ಚೇಂಜ್ ಆಗುವುದ ಖಚಿತ.

ಟಿ20 ವಿಶ್ವಕಪ್ ಟೂರ್ನಿಯ ಕಾವು ಏರುತ್ತಿದೆ. ಈ ವಾರಾಂತ್ಯದಲ್ಲಿ ಟೂರ್ನಿಯ ಸೂಪರ್‌ 12ರ ಹಂತದ ಪಂದ್ಯಗಳು ಶುರುವಾಗಲಿವೆ. ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧ ಕ್ರಮವಾಗಿ ಎರಡು ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಗೆಲುವು ಪಡೆಯುವ ಮೂಲಕ ಟೀಮ್‌ ಇಂಡಿಯಾ ಸೂಪರ್ 12 ರ ಹಂತದ ಪಂದ್ಯಗಳಿಗೆ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಅಕ್ಟೋಬರ್‌ 24ರಂದು ಭಾನುವಾರ ಪಾಕಿಸ್ತಾನದ ವಿರುದ್ಧ ಭಾರತ ಟೂರ್ನಿಯ ಅಭಿಯಾನವನ್ನು ಆರಂಭಿಸಲಿದೆ.

India vs Pakistan: ಭಾರತ-ಪಾಕಿಸ್ತಾನ ನಡುವಣ ಫೈಟ್​ನಲ್ಲಿ ಅಬ್ಬರಿಸಿದ ಬ್ಯಾಟರ್​​ಗಳು ಯಾರು ಗೊತ್ತಾ?: ಇಲ್ಲಿದೆ ನೋಡಿ

Kane Williamson: ಟಿ20 ವಿಶ್ವಕಪ್​ನಲ್ಲಿ ಅಭಿಯಾನ ಆರಂಭಿಸುವ ಮುನ್ನವೇ ನ್ಯೂಜಿಲೆಂಡ್​ಗೆ ಬಿಗ್ ಶಾಕ್

(KL Rahul and other 2 cricketers who can be game-changers for India in T20 World Cup)