ಆರ್ಯನ್​ ಖಾನ್​ಗೆ ಡ್ರಗ್​ ಸಪ್ಲೈ ಮಾಡಿದ್ದು ಅನನ್ಯಾ ಪಾಂಡೆ? ವಾಟ್ಸಾಪ್ ಚಾಟ್​​​ನಿಂದ ಹೊರ ಬಿತ್ತು ರಹಸ್ಯ

ಆರ್ಯನ್​ ಖಾನ್​ ಬಂಧನದ ನಂತರದಲ್ಲಿ ಅವರ ಮೊಬೈಲ್​ ವಶಕ್ಕೆ ಪಡೆಯಲಾಗಿತ್ತು. ಮೊಬೈಲ್​ನಲ್ಲಿ ವಾಟ್ಸಾಪ್ ಸಂದೇಶಗಳನ್ನು ಎನ್​ಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಆರ್ಯನ್​ ಖಾನ್​ಗೆ ಡ್ರಗ್​ ಸಪ್ಲೈ ಮಾಡಿದ್ದು ಅನನ್ಯಾ ಪಾಂಡೆ? ವಾಟ್ಸಾಪ್ ಚಾಟ್​​​ನಿಂದ ಹೊರ ಬಿತ್ತು ರಹಸ್ಯ
ಆರ್ಯನ್​ ಜತೆ ಅನನ್ಯಾ ಪಾಂಡೆ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 22, 2021 | 5:47 PM

ಹೈ ಪ್ರೊಫೈಲ್​ ಪ್ರಕರಣದಲ್ಲಿ ಯಾರನ್ನೂ ಸುಖಾಸುಮ್ಮನೆ ವಿಚಾರಣೆ ಮಾಡೋಕೆ ಅಥವಾ ಬಂಧಿಸೋಕೆ ಸಾಧ್ಯವಾಗುವುದಿಲ್ಲ. ಈಗ ಡ್ರಗ್​ ಕೇಸ್​ನಲ್ಲಿ ಸ್ಟಾರ್​ ಕಿಡ್​​ಗಳ ಹೆಸರು ಮುಂಚೂಣಿಯಲ್ಲಿದೆ. ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಬಂಧನದ ನಂತರದಲ್ಲಿ ನಟಿ ಅನನ್ಯಾ ಪಾಂಡೆ ಮೇಲೂ ಅನುಮಾನ ಶುರುವಾಗಿದೆ. ಈ ಕಾರಣಕ್ಕೆ ಎನ್​ಸಿಬಿ ಅಧಿಕಾರಿಗಳು ಅವರನ್ನು ಕರೆಸಿ ವಿಚಾರಣೆ ಮಾಡುತ್ತಿದ್ದಾರೆ. ಈ ಮಧ್ಯೆ ವಾಟ್ಸಾಪ್​ ಚಾಟ್​ನಿಂದ ಎನ್​ಸಿಬಿ ಅಧಿಕಾರಿಗಳಿಗೆ ಕೆಲ ಮಹತ್ವದ ವಿಚಾರಗಳು ಗೊತ್ತಾಗಿವೆ ಎನ್ನಲಾಗುತ್ತಿದೆ.

ಆರ್ಯನ್​ ಖಾನ್​ ಬಂಧನದ ನಂತರದಲ್ಲಿ ಅವರ ಮೊಬೈಲ್​ ವಶಕ್ಕೆ ಪಡೆಯಲಾಗಿತ್ತು. ಮೊಬೈಲ್​ನಲ್ಲಿ ವಾಟ್ಸಾಪ್ ಸಂದೇಶಗಳನ್ನು ಎನ್​ಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನನ್ಯಾ ಮತ್ತು ಆರ್ಯನ್​ ಮಧ್ಯೆ ನಡೆದ ಚಾಟ್ಅನ್ನು ಅಧಿಕಾರಿಗಳ ಹುಬ್ಬೇರಿಸುವಂತೆ ಮಾಡಿದೆಯಂತೆ. ಈ ಚಾಟ್​ನಲ್ಲಿ  ಡ್ರಗ್​ಗೆ ಸಂಬಂಧಿಸಿ ಅನನ್ಯಾ ಮತ್ತು ಆರ್ಯನ್​ ಮಾತುಕತೆ ನಡೆಸಿದ್ದಾರೆ.

ಆರ್ಯನ್​ ಖಾನ್​ಗೆ ಅನನ್ಯಾ ಪಾಂಡೆ ಗಾಂಜಾ ಪೂರೈಕೆ ಮಾಡುತ್ತಿದ್ದರು ಎಂಬರ್ಥದಲ್ಲಿ ವಾಟ್ಸಾಪ್​ ಚಾಟ್​​ಗಳು ಇರುವುದು ಕಂಡು ಬಂದಿದೆ. ಈ ಕಾರಣಕ್ಕೆ ಅನನ್ಯಾ ಅವರನ್ನು ವಿಚಾರಣೆಗೆ ಕರೆಸಲಾಗಿದೆ ಎಂದು ಎನ್​ಸಿಬಿ ಮೂಲಗಳು ತಿಳಿಸಿವೆ. ಡ್ರಗ್ಸ್​ ತೆಗೆದುಕೊಳ್ಳುವುದರ ಜತೆಗೆ ಅದನ್ನು ಪೂರೈಕೆ ಮಾಡುವುದು ಕೂಡ ಅಪರಾಧವೇ. ಹೀಗಾಗಿ, ಅನನ್ಯಾ ಪಾಂಡೆ ವಿರುದ್ಧ ಈ ರೀತಿಯ ಸಾಕ್ಷ್ಯಗಳು ಸಿಕ್ಕರೆ ಎನ್​ಸಿಬಿ ಅವರನ್ನು ಬಂಧಿಸಬಹುದು. ಎಲ್ಲಾ ರೀತಿಯಿಂದಲೂ ತನಿಖೆ ನಡೆಸಲಾಗುತ್ತಿದೆ.

ಬಾಲಿವುಡ್​ನಲ್ಲಿ ಚಂಕಿ ಪಾಂಡೆ ಬೇಡಿಕೆಯ ನಟ ಆಗಿದ್ದರು. ನೂರಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗಿದೆ. ಶಾರುಖ್​ ಮಗ ಆರ್ಯನ್​ಗೂ ಚಂಕಿ ಪಾಂಡೆ ಮಗಳು ಅನನ್ಯಾ ನಡುವೆ ಒಳ್ಳೆಯ ಗೆಳೆತನ ಇತ್ತು. ಇದು ಅವರಿಗೆ ಸಂಕಷ್ಟ ತಂದಿಟ್ಟಿದ್ದೆ.  ‘ಚಿಕ್ಕವರಿದ್ದಾಗ ನಾವೆಲ್ಲ ವಿಚಿತ್ರ ಕೆಲಸಗಳನ್ನು ಮಾಡುತ್ತಿದ್ದವು. ಅದಕ್ಕೆಲ್ಲ ಶಾರುಖ್ ಖಾನ್​ ಪ್ರೋತ್ಸಾಹ ನೀಡುತ್ತಿದ್ದರು. ಅವರು ನಮ್ಮ ಫೋಟೋಶೂಟ್​ ಮಾಡುತ್ತಿದ್ದರು. ನಮ್ಮ ವಿಡಿಯೋಗಳನ್ನು ಚಿತ್ರಿಸಿ ನಮ್ಮನ್ನು ಅತ್ಯುತ್ತಮ ನಟರು ಎಂಬಂತೆ ಟ್ರೀಟ್​ ಮಾಡುತ್ತಿದ್ದರು. ಅದನ್ನು ಎಲ್ಲರಿಗೂ ತೋರಿಸುತ್ತಿದ್ದರು’ ಎಂದು ಅನನ್ಯಾ ಹೇಳಿಕೊಂಡಿದ್ದರು.

ಇದನ್ನೂ ಓದಿ: Ananya Panday: ಎನ್​ಸಿಬಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾದ ಅನನ್ಯಾ ಪಾಂಡೆ; ಇಲ್ಲಿಗೇ ಮುಗಿದಿಲ್ಲ ಕಂಟಕ

Ananya Pandey: ಆರ್ಯನ್ ಖಾನ್ ಬಂಧನ ಪ್ರಕರಣ; ಎನ್​ಸಿಬಿ ವಿಚಾರಣೆ ವೇಳೆ ಭಯಗೊಂಡು ಕಣ್ಣೀರಿಟ್ಟಿದ್ದ ಅನನ್ಯಾ ಪಾಂಡೆ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ