Ananya Panday: ‘ಇದು ಫಿಲ್ಮ್​ ಪ್ರೊಡಕ್ಷನ್​ ಹೌಸ್​ ಅಲ್ಲ’: ವಿಚಾರಣೆಗೆ ತಡವಾಗಿ ಬಂದ ಅನನ್ಯಾಗೆ ಸಮೀರ್​ ವಾಂಖೆಡೆ ಕ್ಲಾಸ್

Sameer Wankhede: ಶಾರುಖ್​ ಪುತ್ರ ಆರ್ಯನ್​ ಖಾನ್​ ಮತ್ತು ಅನನ್ಯಾ ಪಾಂಡೆ ಬಾಲ್ಯದ ಸ್ನೇಹಿತರು. ಡ್ರಗ್ಸ್​ ವಿಚಾರದಲ್ಲಿ ಇವರಿಬ್ಬರ​ ನಡುವೆ ಯಾವ ರೀತಿಯ ಸಂಪರ್ಕ ಇತ್ತು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.

Ananya Panday: ‘ಇದು ಫಿಲ್ಮ್​ ಪ್ರೊಡಕ್ಷನ್​ ಹೌಸ್​ ಅಲ್ಲ’: ವಿಚಾರಣೆಗೆ ತಡವಾಗಿ ಬಂದ ಅನನ್ಯಾಗೆ ಸಮೀರ್​ ವಾಂಖೆಡೆ ಕ್ಲಾಸ್
ಸಮೀರ್​ ವಾಂಖೆಡೆ, ಅನನ್ಯಾ ಪಾಂಡೆ
Follow us
TV9 Web
| Updated By: ಮದನ್​ ಕುಮಾರ್​

Updated on: Oct 23, 2021 | 11:36 AM

ಬಾಲಿವುಡ್​ನಲ್ಲಿ ಹರಡಿಕೊಂಡಿರುವ ಡ್ರಗ್ಸ್​ ಜಾಲವನ್ನು ಎನ್​ಸಿಬಿ ಅಧಿಕಾರಿಗಳು ಭೇದಿಸುತ್ತಿದ್ದಾರೆ. ಐಷಾರಾಮಿ ಹಡಗಿನಲ್ಲಿ ರೇವ್​ ಪಾರ್ಟಿ ಮಾಡಿ ಸಿಕ್ಕಿಬಿದ್ದಿರುವ ಆರ್ಯನ್​ ಖಾನ್​ ಅವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಇತರೆ ಸೆಲೆಬ್ರಿಟಿಗಳ ಹೆಸರು ಕೂಡ ಹೊರಬರುತ್ತಿದೆ. ಆ ಪೈಕಿ ನಟಿ ಅನನ್ಯಾ ಪಾಂಡೆಗೆ ಎನ್​ಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ಅವರ ಮನೆ ಮೇಲೆ ದಾಳಿ ಮಾಡಿದ ಬಳಿಕ ಎನ್​ಬಿಸಿ ಕಚೇರಿಗೆ ಬಂದು ಹಾಜರಾಗುವಂತೆ ನೋಟೀಸ್​ ನೀಡಲಾಗಿತ್ತು. ಆದರೆ ಸರಿಯಾದ ಸಮಯಕ್ಕೆ ವಿಚಾರಣೆಗೆ ಬಾರದ ಅನನ್ಯಾ ಅವರು ಅಧಿಕಾರಿಗಳ ಕೋಪಕ್ಕೆ ಕಾರಣ ಆಗಿದ್ದಾರೆ.

ಮುಂಬೈನ ಎನ್​ಸಿಬಿ ಕಚೇರಿಗೆ ಶುಕ್ರವಾರ (ಅ.22) ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಅನನ್ಯಾಗೆ ಸೂಚಿಸಲಾಗಿತ್ತು. ಆದರೆ ಅವರು ಬಂದಿದ್ದು ಬರೋಬ್ಬರಿ 3 ಗಂಟೆ ತಡವಾಗಿ! ಇದರಿಂದ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅಸಮಾಧಾನಗೊಂಡರು. ಸಮಯ ಪಾಲನೆ ಮಾಡದೇ ಇರುವ ನಟಿಯ ವಿರುದ್ಧ ಅವರು ಗರಂ ಆದರು ಎನ್ನುತ್ತಿವೆ ಮೂಲಗಳು.

ಸಮಯ ಪ್ರಜ್ಞೆ ಇಲ್ಲದೇ ತಡವಾಗಿ ಬಂದು ವಿಚಾರಣೆಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡದಿರುವ ಅನನ್ಯಾ ಪಾಂಡೆ ವರ್ತನೆಗೆ ಸಮೀರ್​ ವಾಂಖೆಡೆ ಕೋಪ ಮಾಡಿಕೊಂಡಿದ್ದಾರೆ. ‘ಮನಸ್ಸಿಗೆ ಬಂದ ಸಮಯದಲ್ಲಿ ಆಗಮಿಸಲು ಇದು ಸಿನಿಮಾ ಪ್ರೊಡಕ್ಷನ್​ ಹೌಸ್​ ಅಲ್ಲ. ಇದು ಕೇಂದ್ರದ ತನಿಖಾ ಸಂಸ್ಥೆ. ಇನ್ಮೇಲೆ ಸರಿಯಾದ ಸಮಯಕ್ಕೆ ವಿಚಾರಣೆಗೆ ಹಾಜರಾಗಬೇಕು’ ಎಂದು ಅನನ್ಯಾ ಪಾಂಡೆಗೆ ಸಮೀರ್ ವಾಂಖೆಡೆ ಕ್ಲಾಸ್​ ತೆಗೆದುಕೊಂಡಿದ್ದಾರೆ ಎಂದು ವರದಿ ಆಗಿದೆ.

ನಾಲ್ಕು ಗಂಟೆಗಳ ಕಾಲ ಅನನ್ಯಾಗೆ ಎನ್​ಸಿಬಿ ಅಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆರ್ಯನ್​ ಖಾನ್​ ಜೊತೆ ಅವರು ಮಾಡಿದ್ದಾರೆ ಎನ್ನಲಾದ ವಾಟ್ಸಾಪ್​ ಚಾಟ್​ಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಅವರ ಮೊಬೈಲ್​ ಫೋನ್​ ಮತ್ತು ಲ್ಯಾಪ್​ಟಾಪ್​ ವಶಪಡಿಸಿಕೊಳ್ಳಲಾಗಿದೆ. ಒಂದು ವೇಳೆ ಅನನ್ಯಾ ಪಾಂಡೆ ಮಾದಕವಸ್ತು ಸೇವಿಸಿರುವುದಕ್ಕೆ ಅಥವಾ ಪೂರೈಕೆ ಮಾಡಿರುವುದಕ್ಕೆ ಸಾಕ್ಷಿಗಳು ಸಿಕ್ಕರೆ ಅವರನ್ನು ಬಂಧಿಸುವ ಸಾಧ್ಯತೆ ಕೂಡ ದಟ್ಟವಾಗಿದೆ. ಇದು ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಶಾರುಖ್​ ಪುತ್ರ ಆರ್ಯನ್​ ಖಾನ್​ ಮತ್ತು ಅನನ್ಯಾ ಪಾಂಡೆ ಬಾಲ್ಯದ ಸ್ನೇಹಿತರು. ಇಬ್ಬರ ಕುಟುಂಬದವರ ನಡುವೆ ಒಳ್ಳೆಯ ಒಡನಾಟ ಇದೆ. ಡ್ರಗ್ಸ್​ ವಿಚಾರದಲ್ಲಿ ಅನನ್ಯಾ ಮತ್ತು ಆರ್ಯನ್​ ನಡುವೆ ಯಾವ ರೀತಿಯ ಸಂಪರ್ಕ ಇತ್ತು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.

ಇದನ್ನೂ ಓದಿ:

Ananya Panday: ‘ಶಾರುಖ್​ ಖಾನ್​ ನನ್ನ 2ನೇ ಅಪ್ಪ’ ಎಂದಿದ್ದ ಅನನ್ಯಾ ಪಾಂಡೆ; ಡ್ರಗ್ಸ್​ ಸುಳಿಯಲ್ಲಿ ನಟಿ

Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್​ ಖಾನ್​; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್​ ಮಗನ ವರ್ತನೆ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್