ದುನಿಯಾ ವಿಜಯ್ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶಿವರಾಜ್​ಕುಮಾರ್

‘ನಿರ್ದೇಶನ ಮಾಡುವುದು ಅಷ್ಟು ಸುಲಭದ ಮಾತಲ್ಲ. ಒಂದು ಕಥೆಯನ್ನು ಬಾಯಲ್ಲಿ ಹೇಳಬಹುದು. ಆದರೆ, ಅದನ್ನು ತೆರೆಮೇಲೆ ತರೋದು ಅಷ್ಟು ಸುಲಭ ಅಲ್ಲವೇ ಅಲ್ಲ’ ಎಂದರು ಶಿವಣ್ಣ.

TV9kannada Web Team

| Edited By: Rajesh Duggumane

Oct 22, 2021 | 8:47 PM

ಶಿವರಾಜ್​ಕುಮಾರ್ ಅವರು ಇಂದು (ಅಕ್ಟೋಬರ್ 22) ದುನಿಯಾ ವಿಜಯ್​ ನಿರ್ದೇಶನದ ಸಲಗ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ದುನಿಯಾ ವಿಜಯ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಹಾಗಾದರೆ, ಅವರು ದುನಿಯಾ ವಿಜಯ್​ ನಿರ್ದೇಶನದ ಬಗ್ಗೆ ಏನಂದ್ರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ನಿರ್ದೇಶನ ಮಾಡುವುದು ಅಷ್ಟು ಸುಲಭದ ಮಾತಲ್ಲ. ಒಂದು ಕಥೆಯನ್ನು ಬಾಯಲ್ಲಿ ಹೇಳಬಹುದು. ಆದರೆ, ಅದನ್ನು ತೆರೆಮೇಲೆ ತರೋದು ಅಷ್ಟು ಸುಲಭ ಅಲ್ಲವೇ ಅಲ್ಲ’ ಎಂದರು ಶಿವಣ್ಣ. ಆ ಮೂಲಕ ದುನಿಯಾ ವಿಜಯ್​ ಬೆನ್ನು ತಟ್ಟಿದರು.

‘ಸಲಗ’ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರರ್ದಶನ ಕಾಣುತ್ತಿದೆ. ಆದರೆ ಈ ಚಿತ್ರಕ್ಕೆ ತೊಂದರೆ ನೀಡುವ ಪ್ರಯತ್ನ ಕೂಡ ಕೆಲವರಿಂದ ಆಗುತ್ತಿದೆ. ‘ಸಲಗ’ ವಿರುದ್ಧ ಬೇರೆ ಸಿನಿಮಾ ತಂಡದವರನ್ನು ಎತ್ತಿಕಟ್ಟುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಅಂಥವರಿಗೆ ದುನಿಯಾ ವಿಜಯ್​ ಖಡಕ್​ ಸಂದೇಶ ರವಾನಿಸಿದ್ದರು.

ಇದನ್ನೂ ಓದಿ: ‘ಸಲಗ ಚಿತ್ರವನ್ನು ತುಳಿಯೋಕೆ ಆಗಲ್ಲ, ಸುಮ್ಮನೆ ಸಣ್ಣತನ ತೋರಿಸಬೇಡಿ’: ದುನಿಯಾ ವಿಜಯ್​ ಎಚ್ಚರಿಕೆ

Bhajarangi 2 Trailer: ‘ಭಜರಂಗಿ 2’ ಟ್ರೇಲರ್ ಮೂಲಕ ಮೋಡಿ ಮಾಡಿದ ಶಿವರಾಜ್​ಕುಮಾರ್​; ದುಪ್ಪಟ್ಟಾಯಿತು ನಿರೀಕ್ಷೆ

Follow us on

Click on your DTH Provider to Add TV9 Kannada