‘ಸಲಗ ಚಿತ್ರವನ್ನು ತುಳಿಯೋಕೆ ಆಗಲ್ಲ, ಸುಮ್ಮನೆ ಸಣ್ಣತನ ತೋರಿಸಬೇಡಿ’: ದುನಿಯಾ ವಿಜಯ್​ ಎಚ್ಚರಿಕೆ

‘ಹೆಂಗಾದರೂ ಮಾಡಿ ಸಲಗ ಚಿತ್ರವನ್ನು ತುಳಿಯಬೇಕು ಅಂತ ಕೆಲವರು ‘ರಿಯಲ್​ ಎಸ್ಟೇಟ್​’ ಚಿತ್ರದ ನಿರ್ಮಾಪಕ ರಾಮಕೃಷ್ಣಪ್ಪ ಅವರನ್ನು ಆಯುಧವಾಗಿ ಮಾಡಿಕೊಂಡಿದ್ದರು’ ಎಂದು ದುನಿಯಾ ವಿಜಯ್​ ಹೇಳಿದ್ದಾರೆ. ಎರಡೂ ಚಿತ್ರತಂಡಗಳು ಈಗ ರಾಜಿ ಮಾಡಿಕೊಂಡಿವೆ.

ದುನಿಯಾ ವಿಜಯ್​ ನಟನೆಯ ‘ಸಲಗ’ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರರ್ದಶನ ಕಾಣುತ್ತಿದೆ. ಆದರೆ ಈ ಚಿತ್ರಕ್ಕೆ ತೊಂದರೆ ನೀಡುವ ಪ್ರಯತ್ನ ಕೂಡ ಕೆಲವರಿಂದ ಆಗುತ್ತಿದೆ. ‘ಸಲಗ’ ವಿರುದ್ಧ ಬೇರೆ ಸಿನಿಮಾ ತಂಡದವರನ್ನು ಎತ್ತಿಕಟ್ಟುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಅಂಥವರಿಗೆ ದುನಿಯಾ ವಿಜಯ್​ ಖಡಕ್​ ಸಂದೇಶ ರವಾನಿಸಿದ್ದಾರೆ.

‘ಹೆಂಗಾದರೂ ಮಾಡಿ ಸಲಗ ಚಿತ್ರವನ್ನು ತುಳಿಯಬೇಕು ಎಂದು ‘ರಿಯಲ್​ ಎಸ್ಟೇಟ್​’ ಚಿತ್ರದ ನಿರ್ಮಾಪಕ ರಾಮಕೃಷ್ಣಪ್ಪ ಅವರನ್ನು ಕೆಲವರು ಆಯುಧವಾಗಿ ಮಾಡಿಕೊಂಡಿದ್ದರು. ಆದರೆ ರಾಮಕೃಷ್ಣಪ್ಪ ಒಬ್ಬ ಹೋರಾಟಗಾರರಾದ್ದರಿಂದ ನೇರವಾಗಿ ನಮ್ಮ ಎದುರು ಬಂದು ಮಾತನಾಡಿದರು. ಬೇರೆಯವರಾಗಿದ್ರೆ ಒಳಗೊಳಗೆ ಪ್ಲ್ಯಾನ್​ ಮಾಡುತ್ತಿದ್ದರು’ ಎಂದಿದ್ದಾರೆ ದುನಿಯಾ ವಿಜಯ್​.

‘ಸಲಗ ಚಿತ್ರವನ್ನು ಏನೇ ಮಾಡಿದರೂ ನಿಲ್ಲಿಸೋಕೆ ಆಗಲ್ಲ. ಅದು ಹೋಗಿದ್ದೇ ದಾರಿ. ಸುಮ್ಮನೆ ಸಣ್ಣತನ ಮಾಡುತ್ತಾರೆ ಅನ್ನೋದೇ ನಮಗೆ ಬೇಜಾರು. ಜನರು ಈ ಚಿತ್ರವನ್ನು ಹೆಗಲ ಮೇಲೆ ಇಟ್ಟುಕೊಂಡು ಮೆರೆಸುತ್ತಿದ್ದಾರೆ’ ಎಂದು ವಿಜಯ್ ಹೇಳಿದ್ದಾರೆ.

ಇದನ್ನೂ ಓದಿ:

‘ಸಲಗ’ ಸೀಕ್ವೆಲ್​ ಬಗ್ಗೆ ಬಾಯಿ ಬಿಟ್ಟ ಡಾಲಿ ಧನಂಜಯ; ಗೆದ್ದ ಖುಷಿಯಲ್ಲಿ ದುನಿಯಾ ವಿಜಯ್​

Salaga: ನಿರೀಕ್ಷೆಗೂ ಮೀರಿ ‘ಸಲಗ’ ಸಕ್ಸಸ್​; ಹಾಗಾದ್ರೆ ಈವರೆಗಿನ ಕಲೆಕ್ಷನ್​ ಲೆಕ್ಕ ಹೇಳೋರು ಯಾರು?

Click on your DTH Provider to Add TV9 Kannada