‘ಸಲಗ’ VS​ ‘ರಿಯಲ್​ ಎಸ್ಟೇಟ್​’ ಸಿನಿಮಾಗಳ ವಿವಾದ ಅಂತ್ಯ; ಪೊಲೀಸ್​ ಠಾಣೆಯಲ್ಲಿ ಸಂಧಾನ

ಗಾಂಧಿನಗರದಲ್ಲಿ ಷಡ್ಯಂತ್ರ ಮಾಡುವವರಿಂದ ಈ ರೀತಿ ಸಮಸ್ಯೆ ಆಯಿತು ಎಂದು ಎರಡೂ ಚಿತ್ರತಂಡದವರು ಹೇಳಿದ್ದಾರೆ. ಸಿನಿಮಾ ರಿಲೀಸ್​ ವಿಚಾರಕ್ಕೆ ಸಂಬಂಧಪಟ್ಟಂತೆ ಆಗಿದ್ದ ವಿವಾದವನ್ನು ಪೊಲೀಸರ ಸಮ್ಮುಖದಲ್ಲಿ ಕೊನೆಗೊಳಿಸಲಾಗಿದೆ.

ಗಾಂಧಿನಗರದ ಮುಖ್ಯ ಚಿತ್ರಮಂದಿರಗಳಲ್ಲಿ ಒಂದಾದ ‘ತ್ರಿವೇಣಿ’ ಥಿಯೇಟರ್​ನಲ್ಲಿ ಸಿನಿಮಾ ರಿಲೀಸ್​ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ‘ಸಲಗ’ ಮತ್ತು ‘ರಿಯಲ್​ ಎಸ್ಟೇಟ್​’ ಚಿತ್ರದ ನಡುವೆ ವಿವಾದ ಉಂಟಾಗಿತ್ತು. ದುನಿಯಾ ವಿಜಯ್​ ನಟನೆಯ ‘ಸಲಗ’ ಚಿತ್ರ ತ್ರಿವೇಣಿ ಚಿತ್ರಮಂದಿರಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದೇ ಥಿಯೇಟರ್​ನಲ್ಲಿ ‘ರಿಯಲ್​ ಎಸ್ಟೇಟ್​’ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ರಾಮಕೃಷ್ಣಪ್ಪ ಅವರು ಮುಂದಾಗಿದ್ದರು. ಇದು ಎರಡೂ ಚಿತ್ರತಂಡಗಳ ನಡುವೆ ವೈಮನಸ್ಸಿಗೆ ಕಾರಣ ಆಗಿತ್ತು. ಆದರೆ ಪೊಲೀಸ್​ ಠಾಣೆಯಲ್ಲಿ ಸಂಧಾನ ಮಾಡಿಕೊಳ್ಳಲಾಗಿದೆ.

ಗಾಂಧಿನಗರದಲ್ಲಿ ಷಡ್ಯಂತ್ರ ಮಾಡುವವರಿಂದ ಈ ರೀತಿ ಸಮಸ್ಯೆ ಆಯಿತು ಎಂದು ಎರಡೂ ಚಿತ್ರತಂಡದವರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ದುನಿಯಾ ವಿಜಯ್​ ಅವರು, ‘ಹೀರೋ ಆಗುತ್ತಿರುವ ರಾಮಕೃಷ್ಣಪ್ಪ ಅವರ ಮಗನಿಗೆ ಒಳ್ಳೆಯದಾಗಲಿ. ಗಾಂಧಿನಗರದಲ್ಲಿ ಕೆಲವರು ಷಡ್ಯಂತ್ರ ಮಾಡಿ ನಮ್ಮ ಮಧ್ಯೆ ತಂದಿಡುತ್ತಾರೆ ಅಂತ ಅವರು ಹೇಳಿದ್ದಾರೆ. ಆ ಮಾತು ಕೇಳಿ ಬೇಸರ ಆಯಿತು’ ಎಂದು ಹೇಳಿದರು. ‘ನಾವಿಬ್ಬರು ಕಿತ್ತಾಡಿಕೊಂಡರೆ ಮೂರನೆಯವರು ಎಂಟ್ರಿ ನೀಡುತ್ತಾರೆ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಯಾವುದೇ ಸಮಸ್ಯೆಯನ್ನು ಚಿಕ್ಕದಾಗಿರುವಾಗಲೇ ಪರಿಹರಿಸಿಕೊಳ್ಳಬೇಕು’ ಎಂದು ‘ರಿಯಲ್​ ಎಸ್ಟೇಟ್’​ ಚಿತ್ರದ ನಿರ್ಮಾಪಕ ರಾಮಕೃಷ್ಣಪ್ಪ ಹೇಳಿದರು.

ಇದನ್ನೂ ಓದಿ:

‘ಸಲಗ’ ಸೀಕ್ವೆಲ್​ ಬಗ್ಗೆ ಬಾಯಿ ಬಿಟ್ಟ ಡಾಲಿ ಧನಂಜಯ; ಗೆದ್ದ ಖುಷಿಯಲ್ಲಿ ದುನಿಯಾ ವಿಜಯ್​

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

Click on your DTH Provider to Add TV9 Kannada