ಅಮೇರಿಕದ ಈ ಒಂದು ವರ್ಷದ ಮಗು ತಿಂಗಳಿಗೆ ರೂ 75,000 ಗಳಿಸುತ್ತದೆ ಅಂದರೆ ನೀವು ನಂಬಲೇಬೇಕು!

ಅಮೇರಿಕದ ಈ ಒಂದು ವರ್ಷದ ಮಗು ತಿಂಗಳಿಗೆ ರೂ 75,000 ಗಳಿಸುತ್ತದೆ ಅಂದರೆ ನೀವು ನಂಬಲೇಬೇಕು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 22, 2021 | 6:47 PM

ತನ್ನ ಪ್ರತಿ ಪ್ರಯಾಣದಲ್ಲಿ ಬ್ರಿಗ್ಸ್ ನನ್ನು ಜೊತೆಗೆ ಕರೆದೊಯ್ಯುವ ಜೈಷ್ ಪ್ರಯಾಣದ ಸಮಯದಲ್ಲಿ ಅವನ ‘ಬೇಬಿ ಟ್ರಾವೆಲ್ ವಿಡಿಯೋಗಳನ್ನು’ ತಯಾರು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಾರೆ.

ನಮ್ಮ ಸಂಪಾದನೆ ಶುರುವಾಗೋದು ಒಂದು ನಿರ್ದಿಷ್ಟ ಓದು ಇಲ್ಲವೇ ನಿರ್ದಿಷ್ಟವಯಸ್ಸಿನ ನಂತರ. ಆದರೆ ಈ ವಿಡಿಯೋನಲ್ಲಿ ನಿಮಗೆ ಕಾಣಿಸುತ್ತಿದ್ದಾನಲ್ಲ ಒಂದು ವರ್ಷದ ಪೋರ? ಅವನ ಸಂಪಾದನೆ ಈಗಾಗಲೇ ಆರಂಭವಾಗಿ ಬಿಟ್ಟಿದೆ ಅಂದರೆ ನೀವು ನಂಬ್ತೀರಾ? ಹೌದು, ಅಮೇರಿಕಾದ ಈ ಮಗುವಿನ ಹೆಸರು ಬ್ರಿಗ್ಸ್ ಮತ್ತು ಅವನ ಮಾಸಿಕ ಸಂಪಾದನೆ ಭಾರತೀಯ ಕರೆನ್ಸಿಯಲ್ಲಿ ಹೇಳುವುದಾದರೆ ರೂ. 75,000! ಬೆರಗಾದಿರಿ ತಾನೆ? ಅಂದಹಾಗೆ ಹಣ ಸಂಪಾದನೆಗೆ ಅವನೇನೂ ಮಾಡುವುದಿಲ್ಲ. ಮಾಡೋದೆಲ್ಲ ಪ್ರವಾಸ ವಿಮರ್ಶಕಿಯಾಗಿ ಕೆಲಸ ಮಾಡುತ್ತಿರುವ ಅವನ ಅಮ್ಮ ಜೈಷ್. 14 ನೇ ಅಕ್ಟೋಬರ್ 2020 ರಂದು ಹುಟ್ಟಿದ ಬ್ರಿಗ್ಸ್ ಈಗಾಗಲೇ 45 ಬಾರಿ ವಿಮಾನ ಹತ್ತಿದ್ದಾನೆ ಮತ್ತು ಅಮೆರಿಕದ 16 ರಾಜ್ಯಗಳನ್ನು ಸುತ್ತಿದ್ದಾನೆ! ಹುಟ್ಟಿದ ಮೂರನೇ ವಾರದಿಂದಲೇ ಅವನ ಟ್ರ್ಯಾವೆಲಿಂಗ್ ಶುರುವಾಗಿದೆ!!

ತನ್ನ ಪ್ರತಿ ಪ್ರಯಾಣದಲ್ಲಿ ಬ್ರಿಗ್ಸ್ ನನ್ನು ಜೊತೆಗೆ ಕರೆದೊಯ್ಯುವ ಜೈಷ್ ಪ್ರಯಾಣದ ಸಮಯದಲ್ಲಿ ಅವನ ‘ಬೇಬಿ ಟ್ರಾವೆಲ್ ವಿಡಿಯೋಗಳನ್ನು’ ತಯಾರು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಾರೆ. ಈ ಪೋಟೋಗಳು/ವಿಡಿಯೋಗಳು ತಮ್ಮ ಮಕ್ಕಳೊಂದಿಗೆ ಪ್ರಯಾಣ ಮಾಡಲಿಚ್ಚಿಸುವವರಿಗೆ ತುಂಬಾ ಸಹಕಾರಿಯಾಗಿವೆ.

ನಿಮಗೆ ಆಶ್ಚರ್ಯವಾಗಬಹುದು, ಬ್ರಿಗ್ಸ್ ಗೆ ಇನ್ಸ್​ಸ್ಟಾಗ್ರಾಮ್​​​ನಲ್ಲಿ 30,000 ಫಾಲೋಯರ್ಸ್ ಇದ್ದಾರೆ. ಸಾಮಾಜಿಕ ಜಾಲತಾಣಗಳೇ ಅವನಿಗೆ ಅಂದರೆ, ಅವನ ಇನ್ಸ್​ಸ್ಟಾಗ್ರಾಮ್​​​ ಅಕೌಂಟನ್ನು ಹ್ಯಾಂಡಲ್ ಮಾಡುವ ಅವನ ಅಮ್ಮ ಜೈಷ್ ಗೆ ಹಣ ನೀಡುತ್ತವೆ. ಲೈಕ್​ಗಳು ಹೆಚ್ಚಿದಂತೆಲ್ಲ ಹಣದ ಹರಿವು ಸಹ ಜಾಸ್ತಿಯಾಗುತ್ತದೆ.

ಅಷ್ಟು ಮಾತ್ರವಲ್ಲ, ಪ್ರಯಾಣದ ಸಮಯದಲ್ಲಿ ಅವನಿಗೆ ಬೇಕಾಗುವ ಡಯಾಪರ್ ಮತ್ತು ವೈಪರ್ ಗಳನ್ನು ಅವುಗಳನ್ನು ತಯಾರಿಸುವ ಕಂಪನಿಗಳು ಒದಗಿಸುತ್ತವೆ. ಹಾಗೆಯೇ, ಜೈಷ್ ಪ್ರಯಾಣದ ಖರ್ಚು ವೆಚ್ಚಗಳನ್ನು ಅವರು ಯಾವ ಟ್ರಾವೆಲ್ ಸಂಸ್ಥೆಗಾಗಿ ವಿಮರ್ಶೆ ಮಾಡಲಿರುವರೋ ಅದೇ ಕಂಪನಿ ಭರಿಸುತ್ತದೆ.

ಕೊರೊನಾ ಪಿಡಗಿನ ಈ ದಿನಗಳಲ್ಲಿ ಬ್ಗಿಗ್ಸ್ ಗಾಗಿ ಪ್ರೋಟೋಕಾಲ್​ಗಳನ್ನು ಪಾಲಿಸುವುದು ಸ್ವಲ್ಪ ಕಷ್ಟವಾಗುತ್ತಿದೆ ಎಂದು ಜೈಷ್ ಹೇಳಿದ್ದಾರೆ.

ಇದನ್ನೂ ಓದಿ:  Viral Video: ದೇವರ ಮುಂದೆ ನಿಂತು ಮನಿಕೆ ಮಗೆ ಹಿತೆ ಹಾಡಿಗೆ ನೃತ್ಯ ಮಾಡಿದ ಅರ್ಚಕ? ವಿಡಿಯೋ ನೋಡಿ