ಸ್ವಾತಂತ್ರ್ಯ ಹೋರಾಟದ ಸಂಕೇತವಾಗಿರುವ ಖಾದಿ ಸಿನಿಮಾ ತಾರೆಯರ ಫ್ಯಾಶನ್ ಸ್ಟೇಟ್ಮೆಂಟ್ ಸಹ ಆಗಿದೆ!
ಖಾದಿ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಅವಿಭಾಜ್ಯ ಅಂಗವಾಗಿದೆ. ಅದು ಕೇವಲ ಬಟ್ಟೆಯ ತುಂಡಲ್ಲ, ಕೈಗಳಿಂದ ನೇಯಲ್ಪಡುವ ಈ ಬಟ್ಟೆ ಭಾರತೀಯರ ಒಂದು ಭಾವನೆಯಾಗಿದೆ ಮತ್ತು ರಾಷ್ಟ್ರದ ಸ್ವಾತಂತ್ರ್ಯ ಹೋರಾಟ ಮತ್ತು ವಸ್ತ್ರ ಪರಂಪರೆಯ ಒಂದು ಸಂಕೇತವಾಗಿದೆ.
ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಆರಂಭಿಸಿದ ಖಾದಿ ಪರಂಪರೆ ನಮ್ಮ ಸ್ವಾತಂತ್ರ್ಯಕ್ಕಾಗಿ ಭಾರತ ನಡೆಸಿದ ಹೋರಾಟದ ಸಂಕೇತವಾಗಿತ್ತು. ಖಾದಿ ವಸ್ತ್ರಗಳ ಬಗ್ಗೆ ಬಾಪೂ ಹೇಳಿದ್ದು ಭಾರತೀಯರೆಲ್ಲರಿಗೆ ಚೆನ್ನಾಗಿ ನೆನಪಿದೆ. ಅವರು ಹೇಳಿದ್ದನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ: ಖಾದಿಯು ನನಗೆ ಭಾರತೀಯ ಮಾನವೀಯತೆ, ಅದರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಸಂಕೇತವಾಗಿದೆ, ಕೊನೆಗೆ ಜವಾಹರಲಾಲ ನೆಹರೂ ಅವರ ಕಾವ್ಯಾತ್ಮಕ ನುಡಿಗಳಲ್ಲಿ ಹೇಳುವುದಾದರೆ ಖಾದಿಯು, ಭಾರತದ ಸ್ವಾತಂತ್ರ್ಯದ ಸಮವಸ್ತ್ರವಾಗಿದೆ-ಮಹಾತ್ಮಾ ಗಾಂಧಿ.
ಖಾದಿಗಿರುವ ಮಹತ್ವ, ಜನಪ್ರಿಯತೆ, ಐತಿಹಾಸಿಕ ಹಿನ್ನೆಲೆಯೇ ಅಂಥದ್ದು. ಅದು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಅವಿಭಾಜ್ಯ ಅಂಗವಾಗಿದೆ. ಅದು ಕೇವಲ ಬಟ್ಟೆಯ ತುಂಡಲ್ಲ, ಕೈಗಳಿಂದ ನೇಯಲ್ಪಡುವ ಈ ಬಟ್ಟೆ ಭಾರತೀಯರ ಒಂದು ಭಾವನೆಯಾಗಿದೆ ಮತ್ತು ರಾಷ್ಟ್ರದ ಸ್ವಾತಂತ್ರ್ಯ ಹೋರಾಟ ಮತ್ತು ವಸ್ತ್ರ ಪರಂಪರೆಯ ಒಂದು ಸಂಕೇತವಾಗಿದೆ. ಬಾಪು ಮತ್ತು ನೆಹರೂ ಅವರೇ ಖಾದಿಯ ಬಗ್ಗೆ ಅಷ್ಟು ಆದರ ಮತ್ತು ಗೌರವಪೂರ್ವಕವಾಗಿ ಮಾತಾಡಿದ್ದಾರೆಂದರೆ, ಅದರ ವೈಶಿಷ್ಟ್ಯತೆ ಏನು ಅನ್ನೋದನ್ನು ನೀವು ಅರ್ಥಮಾಡಿಕೊಳ್ಳಬಹುದು.
ಸಂತೋಷದ ಸಂಗತಿ ಏನೆಂದರೆ, ಬಾಲಿವುಡ್ ನಟಿಯರು ಸಹ ಖಾದಿ ಉಡುಗೆಳನ್ನು ತಮ್ಮ ವಾರ್ಡ್ರೋಬ್ ಗಳ ಭಾಗ ಮಾಡಿಕೊಳ್ಳುತ್ತಿರೋದು. ಹೌದು ಈ ವಿಡಿಯೋನಲ್ಲಿರುವ ಬೆಡಗಿಯರನ್ನು ಒಮ್ಮೆ ನೋಡಿ. ತಮ್ಮ ಒಂದು ಡಿಸೈನರ್ ಉಡುಗೆಗಾಗಿ ಲಕ್ಷಾಂತರ ರೂಪಾಯಿಗಳನ್ನು ಇವರು ಖರ್ಚು ಮಾಡುತ್ತಾರೆ. ನವರಾತ್ರಿ ಉತ್ಸವದಲ್ಲಿ ಭಾಗಿಯಾದ ನಟಿಯರು ತೊಟ್ಟಿದ್ದ ಉಡುಗೆಗಳ ಬಗ್ಗೆ ನಾವು ಕೆಲ ದಿನಗಳ ಹಿಂದಷ್ಟೇ ಚರ್ಚೆ ಮಾಡಿದ್ದೇವೆ. ಐದಾರು ಲಕ್ಷ ರೂಪಾಯಿ ಬೆಲೆ ಬಾಳುವ ಲೆಹೆಂಗಾಗಳನ್ನು ನಟಿಯರು ತೊಟ್ಟಿದ್ದರು.
ಖಾದಿ ಬಟ್ಟೆಗಳ ಬೆಲೆ ಕಡಿಮೆ ಅದರೆ ಸೊಬಗು ಹೆಚ್ಚು. ಇಲ್ಲಿರುವ ತಾರೆಗಳ ಮೇಲೆ ಖಾದಿ ಡ್ರೆಸ್ಗಳು, ಸೀರೆಗಳು ಅದೆಷ್ಟು ಅಂದವಾಗಿ ಕಾಣುತ್ತಿವೆ ಅಂತ ನೀವೇ ನೋಡಿ. ಶ್ರೀದೇವಿ ಮಗಳು ಜಾಹ್ನವಿ, ಕಂಗನಾ ರಣಾವತ್, ಅನುಷ್ಕಾ ಶರ್ಮ ಕೊಹ್ಲಿ, ಆಲಿಯಾ ಭಟ್, ಆದಿತಿ ರಾವ್ ಹೈದರಿ, ಸೋನಂ ಕಪೂರ್, ಸಾರಾ ಅಲಿ ಖಾನ್, ದಿಯಾ ಮಿರ್ಜಾ ಮತ್ತು ಕಾಜೋಲ್ ಮೊದಲಾದವರೆಲ್ಲ ಖಾದಿ ಉಡುಪುಗಳಲ್ಲಿ ಮಿಂಚುತ್ತಿದ್ದಾರೆ.
ಖಾದಿ ಎಲ್ಲ ಸೀಸನ್ ಗಳಲ್ಲಿ ಎಲ್ಲ ಸಂದರ್ಭಗಳಲ್ಲಿ ತೊಡಬಹುದಾದ ಬಟ್ಟೆಯಾಗಿದೆ. ತೊಟ್ಟವರಿಗೆ ಖಾದಿ ಉಡುಪು ಹಗುರ ಮತ್ತು ಸಹನೀಯವೆನಿಸಿದರೆ ನೋಡುಗರಿಗೆ ಆಕರ್ಷಕವಾಗಿ ಕಾಣುತ್ತದೆ. ಜೈ ಖಾದಿ!!
ಇದನ್ನೂ ಓದಿ: Viral Video: ಇಬ್ಬರು ಮಹಿಳೆಯರ ನಡುವೆ ಜಟಾಪಟಿ; ರಸ್ತೆಯಲ್ಲಿ ಬಿದ್ದು ಉರುಳಾಡಿದ ವಿಡಿಯೋ ವೈರಲ್