Viral Video: ಇಬ್ಬರು ಮಹಿಳೆಯರ ನಡುವೆ ಜಟಾಪಟಿ; ರಸ್ತೆಯಲ್ಲಿ ಬಿದ್ದು ಉರುಳಾಡಿದ ವಿಡಿಯೋ ವೈರಲ್
ಇಬ್ಬರು ಮಹಿಳೆಯರ ನಡುವೆ ಜಟಾಪಟಿ ಶುರುವಾಗಿದೆ. ಜಗಳ ವಿಪರೀತಕ್ಕೆ ಹೋಗಿ ರಸ್ತೆಯಲ್ಲೆಲ್ಲಾ ಬಿದ್ದು ಉರುಳಾಡಿದ್ದಾರೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳಂತೂ ಆಶ್ಚರ್ಯವನ್ನುಂಟು ಮಾಡುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಇಬ್ಬರು ಮಹಿಳೆಯ ನಡುವೆ ಜಗಳ ನಡೆಯುತ್ತಿದೆ. ಜುಟ್ಟು ಹಿಡಿದು ಎಳೆದಾಡುತ್ತಿರುವ ಇಬ್ಬರ ದೃಶ್ಯ ಇದೀಗ ಫುಲ್ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು, ಇವರಿಬ್ಬರನ್ನು WWE ಕಳುಹಿಸಿ ಎಂದು ತಮಾಷೆ ಮಾಡಿದ್ದಾರೆ.
ಇಬ್ಬರು ಮಹಿಳೆಯರು ಕಿತ್ತಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ, ಇಬ್ಬರ ಮಧ್ಯದ ಜಟಾಪಟಿಗೆ ಕಾರಣ ಏನಿರಬಹುದು ಎಂಬ ಮಾಹಿತಿ ತಿಳಿದಿಲ್ಲ. ಆದರೆ ಇಬ್ಬರೂ ಸಹ ಸಿಟ್ಟಿನಿಂದ ಮೊದಲಿಗೆ ಒಬ್ಬರನ್ನೊಬ್ಬರು ಬೈಯುತ್ತಾರೆ. ನಂತರ ಒಬ್ಬರ ಜುಟ್ಟು ಇನ್ನೊಬ್ಬರು ಹಿಡಿದು ಪರಸ್ಪರ ಕಿತ್ತಾಡುತ್ತಾರೆ. ಜಗಳ ವಿಪರೀತಕ್ಕೆ ತಲುಪಿದ್ದು ರಸ್ತೆಯಲ್ಲೆಲ್ಲಾ ಉರುಳಾಡಿದ್ದಾರೆ.
View this post on Instagram
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ದೃಶ್ಯ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ನೆಟ್ಟಿಗರಲ್ಲಿ ಕೆಲವರು ಇವರನ್ನು ಡಬ್ಲ್ಯೂಡಬ್ಲ್ಯೂಇಗೆ ಕಳುಹಿಸಿ ಎಂದು ತಮಾಷೆ ಮಾಡಿದ್ದಾರೆ. ಮಹಿಳೆಯರಿಗೇ ಹೆಚ್ಚು ಶಕ್ತಿಯಿದೆ, ಜುಟ್ಟು ಹಿಡಿದು ರಸ್ತೆಯಲ್ಲಿ ಕಿತ್ತಾಡುತ್ತಿದ್ದಾರೆ ಎಂದು ಮತ್ತೋರ್ವರು ತಮಾಷೆ ಮಾಡಿದ್ದಾರೆ. ಈ ವಿಡಿಯೋವನ್ನು ಇದುವರೆಗೆ ನೋಡಿರಲಿಲ್ಲ ಎಂಬ ಪ್ರತಿಕ್ರಿಯೆಗಳನ್ನೂ ಸಹ ಹಂಚಿಕೊಳ್ಳುತ್ತಾ ನಗುವ ಎಮೋಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ:
Viral Video: ಹಾವು- ಮುಂಗುಸಿ ನಡುವೆ ಜಟಾಪಟಿ; ಗೆದ್ದವರಾರು? ಸೋತವರಾರು?
Viral Video: ಕೇರಂ ಆಟದ ನಡುವೆ ಅಜ್ಜಂದಿರ ಜಟಾಪಟಿ; ವೈರಲ್ ವಿಡಿಯೋ ನೋಡಿ ನಕ್ಕು ಹಗುರಾದ ನೆಟ್ಟಿಗರು