Viral Video: ದೇವರ ಮುಂದೆ ನಿಂತು ಮನಿಕೆ ಮಗೆ ಹಿತೆ ಹಾಡಿಗೆ ನೃತ್ಯ ಮಾಡಿದ ಅರ್ಚಕ? ವಿಡಿಯೋ ನೋಡಿ
ವಿಡಿಯೋದಲ್ಲಿ ಗಮನಿಸುವಂತೆ ಅರ್ಚಕರು ಮನಿಕೆ ಮಗೆ ಹಿತೆ ಹಾಡಿಗೆ ನೃತ್ಯ ಮಾಡುತ್ತಿದ್ದಂತೆ ಅನಿಸುತ್ತಿದೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಶ್ರೀಲಂಕಾದ ಗಾಯಕಿ ಯೋಹನಿ ಹಾಡಿರುವ ಮನಿಕೆ ಮಗೆ ಹಿತೆ ಹಾಡು ಜನಪ್ರಿಯತೆ ಗಳಿಸಿಕೊಂಡಿದೆ. ಮೆಚ್ಚಿಕೊಂಡ ಹಾಡಿಗೆ ನೃತ್ಯ ಮಾಡುವ ಮೂಲಕ ಸೋಷಿಯಲ್ ಮೀಡಿಯಾ ಬಳಕೆದಾರರು ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ. ಜತೆ ಜತೆಗೆ ಬೇರೆ ವಿಡಿಯೋವಿಗೆ ಈ ಹಾಡನ್ನು ಎಡಿಟ್ ಮಾಡಿಯೂ ಸಹ ದೃಶ್ಯ ಹಂಚಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಇದೀಗ ವೈರಲ್ ಆಗಿರುವ ವಿಡಿಯೋದಿಂದ ಕೇಳಿ ಬಂದಿದೆ. ಅಂದಹಾಗೆ ದೇವರ ಮುಂದೆ ಆರತಿ ಹಿಡಿದ ಅರ್ಚಕರು ನೃತ್ಯ ಮಾಡುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು. ಆದರೆ ಮನಿಕೆ ಮಗೆ ಹಿತೆ ಹಾಡು ಸಿಂಕ್ ಆಗುವಂತೆ ಮ್ಯೂಸಿಕ್ ಅಳವಡಿಸಲಾಗಿದೆ ಎಂದು ನೆಟ್ಟಿಗರಿಂದ ಅಭಿಪ್ರಾಯ ಕೇಳಿಬಂದಿದೆ.
ದೃಶ್ಯದಲ್ಲಿ ಗಮನಿಸುವಾಗ ದೇವರ ಎದುರು ನಿಂತಿರುವ ಅರ್ಚಕರು ಧೂಪ ಬೆಳಗುತ್ತಿದ್ದರೆ, ಮಂತ್ರವನ್ನು ಪಠಿಸುತ್ತಾ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದು. ಆದರೆ ಮನಿಕೆ ಮಗೆ ಹಿತೆ ಹಾಡು ಕೇಳಿಸುತ್ತಿದೆ. ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋ ಫುಲ್ ವೈರಲ್ ಆಗಿದೆ.
ದುರ್ಗಾ ದೇವಿಯ ವಿಗ್ರಹದ ಮುಂದೆ ನಿಂತಿರುವ ಅರ್ಚಕರು ಆರತಿ ಸಮಯದಲ್ಲಿ ಬೆಳಗುವ ಧೂಪವನ್ನು ಹಿಡಿದಿದ್ದಾರೆ. ಆದರೆ ಇವರು ನೃತ್ಯ ಮಾಡುತ್ತಿರುವುದು ಮನಿಕೆ ಮಗೆ ಹಿತೆ ಹಾಡಿಗೆ ಎಂಬಂತೆ ಭಾಸವಾಗುತ್ತದೆ. ಅರ್ಚಕರು ಯಾವ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ ಎಂಬ ಕುರಿತಾದ ಸ್ಪಷ್ಟ ಮಾಹಿತಿ ಇಲ್ಲ, ಆದರೆ ದೃಶ್ಯಕ್ಕೆ ಈ ಹಾಡನ್ನು ಸೇರಿಸಲಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಇದನ್ನೂ ಓದಿ:
Viral Video: ನೆಟ್ಟಿಗರ ಮನಸೂರೆಗೊಂಡ ಹಾವಿನ ರೂಪದ ಕೇಕ್; ಏನಿದು ಸಮಾಚಾರ? ವಿಡಿಯೋ ನೋಡಿ