Viral Video: ತಮ್ಮ ಪೇಟವನ್ನೇ ಹಗ್ಗವನ್ನಾಗಿಸಿ ಜಲಪಾತಕ್ಕೆ ಸಿಕ್ಕಿ ಜೀವ ಕಳೆದುಕೊಳ್ಳುತ್ತಿದ್ದ ಇಬ್ಬರನ್ನು ರಕ್ಷಿಸಿದ ಸಿಖ್ಖರ ತಂಡ

ಭೋರ್ಗರೆಯುತ್ತಿದ್ದ ಜಲಪಾತದ ಪಕ್ಕದಲ್ಲಿರುವ ಕೊಳದಲ್ಲಿ ಕಾಲು ಜಾರಿ ಇಬ್ಬರು ಬಿದ್ದಿದ್ದರು. ಅವರನ್ನು ರಕ್ಷಿಸಲಾಗಿದೆ ಎಂದು ಸಿಖ್ಖರ ತಂಡ ಮಾಹಿತಿ ಹಂಚಿಕೊಂಡಿದ್ದಾರೆ.

Viral Video: ತಮ್ಮ ಪೇಟವನ್ನೇ ಹಗ್ಗವನ್ನಾಗಿಸಿ ಜಲಪಾತಕ್ಕೆ ಸಿಕ್ಕಿ ಜೀವ ಕಳೆದುಕೊಳ್ಳುತ್ತಿದ್ದ ಇಬ್ಬರನ್ನು ರಕ್ಷಿಸಿದ ಸಿಖ್ಖರ ತಂಡ
ತಮ್ಮ ಪೇಟವನ್ನೇ ಹಗ್ಗವನ್ನಾಗಿಸಿ ಜಲಪಾತಕ್ಕೆ ಸಿಕ್ಕಿ ಜೀವ ಕಳೆದುಕೊಳ್ಳುತ್ತಿದ್ದ ಇಬ್ಬರನ್ನು ರಕ್ಷಿಸಿದ ಸಿಖ್ಖರ ತಂಡ
Follow us
TV9 Web
| Updated By: shruti hegde

Updated on:Oct 20, 2021 | 2:50 PM

ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಜಲಪಾತ ವೀಕ್ಷಿಸಿಲು ಹೋಗಿದ್ದ ಇಬ್ಬರು ಜಾರಿ ಪಕ್ಕದಲ್ಲಿದ್ದ ಕೊಳದಲ್ಲಿ ಸಿಲುಕಿಕೊಂಡಿದ್ದರು. ಇಬ್ಬರು ಪಾದಯಾತ್ರಿಕರನ್ನು ರಕ್ಷಿಸಲು ಸಿಖ್ಖರ ತಂಡ ಮುಂದಾಗಿದ್ದು, ತಮ್ಮ ಪೇಟವನ್ನು ಹಗ್ಗವನ್ನಾಗಿಸಿ ಇಬ್ಬರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಹೃದಯಸ್ಪರ್ಶಿ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಅಕ್ಟೋಬರ್ 11ನೇ ತಾರೀಕಿನಂದು ಕುಲ್ಜಿಂದರ್ ಮತ್ತು ಅವರ ನಾಲ್ವರು ಸ್ನೇಹಿತರು ಪಾದಯಾತ್ರೆ ಮಾಡುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಭೋರ್ಗರೆಯುತ್ತಿದ್ದ ಜಲಪಾತದ ಪಕ್ಕದಲ್ಲಿರುವ ಕೊಳದಲ್ಲಿ ಕಾಲು ಜಾರಿ ಇಬ್ಬರು ಬಿದ್ದಿದ್ದರು. ಅವರನ್ನು ರಕ್ಷಿಸಲಾಗಿದೆ ಎಂದು ಐವರ ಸಿಖ್ಖರ ತಂಡ ಮಾಹಿತಿ ಹಂಚಿಕೊಂಡಿದ್ದಾರೆ.

ಅನೇಕರು ತುರ್ತು ಸೇವೆಗಳಿಗೆ ಕರೆ ಮಾಡಲು ಕೇಳಿಕೊಂಡರು. ಆದರೆ ಸ್ಥಳದಲ್ಲಿ ಯಾವುದೇ ಸೆಲ್​ಫೋನ್​ ಸೇವೆ ಇರಲಿಲ್ಲ. ಬಳಿಕ ಸಿಖ್ಖರು ತಾವು ಧರಿಸಿದ್ದ ಪೇಟವನ್ನೇ ಒಂದಕ್ಕೊಂದು ಗಂಟುಕಟ್ಟಿ ಹಗ್ಗವನ್ನಾಗಿಸಿದ್ದಾರೆ. ಸುಮಾರು 10 ಮೀಟರ್​ಗಳಷ್ಟು ಉದ್ದದ ತಾತ್ಕಾಲಿಕ ಹಗ್ಗವನ್ನು ತಯಾರಿಸಿ ಇಬ್ಬರನ್ನು ರಕ್ಷಿಸಿದ್ದಾರೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ಸಿಖ್ ಸಮುದಾಯ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಯುವಕರ ಚಿಂತನೆ ಮತ್ತು ನಿಸ್ವಾರ್ಥ ಸೇವೆಗೆ ಅಭಿನಂದನೆಗಳನ್ನು ತಿಳಿಸಿದೆ.

ಅವರನ್ನು ಪ್ರಾಣಾಪಾಯದಿಂದ ಹೇಗೆ ರಕ್ಷಿಸುವುದು ಎಂದು ತುಂಬಾ ಯೋಚಿಸಿದೆವು. ಆದರೆ ಯಾವುದೇ ಉಪಾಯ ತೋಚುತ್ತಿರಲಿಲ್ಲ. ಆದ್ದರಿಂದ ಧರಿಸಿದ್ದ ಟರ್ಬನ್​ಗಳನ್ನು ಸೇರಿಸಿ ಹಗ್ಗ ತಯಾರಿಸಿದೆವು. ಹಗ್ಗವನ್ನು ಅವರಿಗೆ ಎಸೆದು ಬಿಗಿಯಾಗಿ ಹಿಡಿದುಕೊಳ್ಳಲು ಹೇಳಿದೆವು. ಆ ಮೂಲಕ ಅವರನ್ನು ರಕ್ಷಿಸಲಾಯಿತು ಎಂದು ಘಟನೆಯನ್ನು ಅವರು ವಿವರಿಸಿದ್ದಾರೆ.

ಹೃದಯಸ್ಪರ್ಶಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಸಿಖ್ಖರ ತಂಡಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಸಾಹಸ ಮತ್ತು ಧೈರ್ಯವನ್ನು ಶ್ಲಾಘಿಸಿದ್ದಾರೆ. ಕೆಲವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ:

Viral Video: ಉತ್ತರಾಖಂಡದಲ್ಲಿ ಪ್ರವಾಹದ ಮಧ್ಯೆ ಸಿಲುಕಿ ಪರದಾಡುತ್ತಿದ್ದ ಆನೆ; ರಕ್ಷಿಸಿದ ಅರಣ್ಯ ಅಧಿಕಾರಿಗಳು

Viral Video: ಕೇಬಲ್ ಮೇಲೆ ನೇತಾಡುತ್ತಿದ್ದ ದೈತ್ಯಾಕಾರದ ಹಾವು ಕಂಡು ಕಿರುಚಾಡಿದ ಜನ; ದೃಶ್ಯ ಕ್ಯಾಮರಾದಲ್ಲಿ ಸೆರೆ

Published On - 2:37 pm, Wed, 20 October 21