Viral Video: ಕೇಬಲ್ ಮೇಲೆ ನೇತಾಡುತ್ತಿದ್ದ ದೈತ್ಯಾಕಾರದ ಹಾವು ಕಂಡು ಕಿರುಚಾಡಿದ ಜನ; ದೃಶ್ಯ ಕ್ಯಾಮರಾದಲ್ಲಿ ಸೆರೆ

Viral Video: ಕೇಬಲ್ ಮೇಲೆ ನೇತಾಡುತ್ತಿದ್ದ ದೈತ್ಯಾಕಾರದ ಹಾವು ಕಂಡು ಕಿರುಚಾಡಿದ ಜನ; ದೃಶ್ಯ ಕ್ಯಾಮರಾದಲ್ಲಿ ಸೆರೆ
ಕೇಬಲ್​ ಮೇಲೆ ನೇತಾಡುತ್ತಿರುವ ದೈತ್ಯ ಹಾವು

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಗಮನಿಸುವಂತೆ ರಸ್ತೆಯ ಮೇಲಿರುವ ಕೇಬಲ್ ಮೇಲೆ ದೈತ್ಯಾಕಾರದ ಹಾವು ನೇತಾಡುತ್ತಿತ್ತು. ಸ್ಥಳದಲ್ಲಿ ಸೇರಿದ್ದ ಜನರು ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

TV9kannada Web Team

| Edited By: shruti hegde

Oct 19, 2021 | 10:19 AM


ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಕೆಲವು ವಿಡಿಯೋಗಳು ಬೆಚ್ಚಿ ಬೀಳಿಸುವಂತಿರುತ್ತವೆ. ಹಾವು ಅಂದಾಕ್ಷಣ ಯಾರಿಗೆ ಭಯವಿಲ್ಲ ಹೇಳಿ? ಹೆಸರು ಕೇಳಿದಾಕ್ಷಣವೇ ಮೈ ನಡುಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಗಮನಿಸುವಂತೆ ಕೇಬಲ್ ಮೇಲೆ ನೇತಾಡುತ್ತಿದ್ದ ದೈತ್ಯಾಕಾರದ ಹಾವು ನೋಡಿ ಜನರು ಬೆರಗಾಗಿದ್ದಾರೆ.

ಅಕ್ಟೋಬರ್ 12ರಂದು ಫಿಲಿಫೈನ್ಸ್ ನಗರದಲ್ಲಿ ಘಟನೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಗಮನಿಸುವಂತೆ ರಸ್ತೆಯ ಮೇಲಿರುವ ಕೇಬಲ್ ಮೇಲೆ ದೈತ್ಯಾಕಾರದ ಹಾವು ನೇತಾಡುತ್ತಿತ್ತು. ಸ್ಥಳದಲ್ಲಿ ಸೇರಿದ್ದ ಜನರು ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ದೈತ್ಯ ಹಾವನ್ನು ನೋಡಿ ಕಂಗಾಲಾಗಿ ಜನರು ಕಿರುಚಾಡುತ್ತಿದ್ದರು. ತಕ್ಷಣವೇ ಹಾವು ಕೆಳಕ್ಕೆ ಬಿದ್ದಿದೆ. ಗಾಬರಿಗೊಂಡ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.

ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಹಾವು ಬಂದಂತೆ ಅನಿಸುತ್ತದೆ. ಈ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಫುಲ್ ವೈರಲ್ ಆಗಿದೆ. ಅಕ್ಟೋಬರ್ 15ನೇ ತಾರೀಕಿನಂದು ವಿಡಿಯೋ ಹರಿಬಿಡಲಾಗಿದೆ. ವಿಡಿಯೋ ಇದೀಗ 5,000ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಅಕ್ಟೋಬರ್ 12ರಂದು ಸಂಜೆಯ ವೇಳೆ ಸರಿಸುಮಾರು 6:30ರ ಸಮಯದಲ್ಲಿ ಘಟನೆ ನಡೆದಿದೆ ಎಂದು ಮಾಹಿತಿ ಹಂಚಿಕೊಳ್ಳುವ ಮೂಲಕ ವಿಡಿಯೋ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ:

Viral Videos: ಆಹಾ, ಇಷ್ಟೊಂದು ಮುದ್ದುಮುದ್ದಾಗಿ ಕದಿಯಬಹುದಾ?; ಚಾಣಾಕ್ಷ ಶ್ವಾನಗಳ ವಿಡಿಯೋ ನೋಡಿ

Viral Video: ಮಿಸ್ಟರ್ ಬೀನ್ ಥರಾನೇ ಕಾಣ್ತಾರೆ; ನಟನೆ ಕೂಡ ಸೂಪರ್! ವಿಡಿಯೋ ನೋಡಿ

Follow us on

Related Stories

Most Read Stories

Click on your DTH Provider to Add TV9 Kannada