Viral News: ಗಾಂಜಾ ಎಣ್ಣೆ ಶ್ವಾಸಕೋಶದ ಕ್ಯಾನ್ಸರ್ ಗುಣಪಡಿಸಲು ಸಹಾಯಕವೇ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ

ರೋಗಿಯು ಸಿಬಿಡಿ ಎಣ್ಣೆಯನ್ನು ಸೇವಿಸಿದ್ದರಿಂದಲೇ ಟ್ಯೂಮರ್ ಗಾತ್ರ ಕುಗ್ಗಿದೆ ಎಬುದನ್ನು ದೃಢವಾಗಿಸಲು ಇನ್ನು ಸಾಧ್ಯವಾಗಿಲ್ಲ. ಇದಕ್ಕೆ ಇನ್ನೂ ಹೆಚ್ಚಿನ ಸಂಶೋಧನೆಗಳ ಅಗತ್ಯತೆ ಇದೆ ಎಂದು ವೈದ್ಯರು ಸ್ಪಷ್ಟನೆ ನೀಡಿದರು.

Viral News: ಗಾಂಜಾ ಎಣ್ಣೆ ಶ್ವಾಸಕೋಶದ ಕ್ಯಾನ್ಸರ್ ಗುಣಪಡಿಸಲು ಸಹಾಯಕವೇ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on:Oct 19, 2021 | 11:57 AM

80 ರ ವಯಸ್ಸಿನಲ್ಲಿದ ಮಹಿಳೆಯೋರ್ವರು ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅವರು ಶಸ್ತ್ರಚಿಕಿತ್ಸೆಯನ್ನು ತಿರಸ್ಕರಿಸಿ ತಮಗೆ ಬೇಕಾದ ಗಾಂಜಾ ಎಣ್ಣೆಯನ್ನು ಸ್ವತಃ ಅವರೇ ತಯಾರಿಸಿಕೊಂಡಿದ್ದರು. ಆಕೆಯ ಕ್ಯಾನ್ಸರ್ ಗೆಡ್ಡೆ ಕುಗ್ಗುವಿಕೆಯನ್ನು ನಾನು ನೋಡಿದೆ ಎಂದು ವೈದ್ಯರ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಯುಕೆಯ ಜನರಲ್​ ಆಸ್ಪತ್ರೆಯಲ್ಲಿ ಉಸಿರಾಟ ವಿಭಾಗದ ವೈದ್ಯರು, ಮಹಿಳೆಗೆ 2018ರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆದರೆ ಕ್ಯಾನ್ಸರ್ ಗೆಡ್ಡೆಯು 44mm ಗಾತ್ರದಲ್ಲಿತ್ತು. ಇದರ ಜತೆಗೆ ಮಹಿಳೆ ಧೂಮಪಾನ ಮಾಡುತ್ತಿದ್ದರು ಜತೆಗೆ ಸೌಮ್ಯ ಸಿಒಪಿಡಿ ಲಕ್ಷಣ, ಸಂಧಿವಾತ ಮತ್ತು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಮಸ್ಯೆಯ ಪರಿಹಾರಕ್ಕಾಗಿ ವಿವಿಧ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ.

ಗಡ್ಡೆಯ ಗಾತ್ರದಲ್ಲಿ ಯಾವುದೇ ಬದಲಾವಣೆ ಅಥವಾ ಹರಡುವಿಕೆ ಇಲ್ಲದ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಮುಂದಾಗಲಿಲ್ಲ. ಕಿಮೋಥೆರಪಿ, ರೇಡಿಯೋಥೆರಪಿ ಎಲ್ಲ ಚಿಕಿತ್ಸೆಯನ್ನೂ ತಿರಸ್ಕರಿಸಿದರು. ಬಳಿಕ ಅವರು ಸಿಬಿಡಿ ಎಣ್ಣೆಯನ್ನು ಬಳಸಲು ಪ್ರಾರಂಭಿಸಿದರು. 0.5 ಮಿಲಿ ಎಣ್ಣೆ, ಸಾಮಾನ್ಯವಾಗಿ ದಿನಕ್ಕೆ ಮೂರು ಬಾರಿಯಂತೆ, ಕೆಲವು ದಿನ ಮಾತ್ರ ಎರಡು ಬಾರಿಯಂತೆ ತೆಗೆದುಕೊಳ್ಳುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ.

ಪ್ರತಿ 3 ರಿಂದ 6 ತಿಂಗಳಿಗೊಮ್ಮೆ ಚೆಕಪ್ ಮಾಡಿಸಿಕೊಳ್ಳುತ್ತಿದ್ದು, ಟ್ಯೂಮರ್ ಗಾತ್ರ 2018ರ ಸಮಯದಲ್ಲಿ 41mm ಇದ್ದು 2021 ಫೆಬ್ರವರಿಗೆ 10mm ನಷ್ಟು ಕುಗ್ಗಿರುವುದನ್ನು ಸ್ಕ್ಯಾನಿಂಗ್​​ ರಿಪೋರ್ಟ್​ನಿಂದ ತಿಳಿದುಬಂದಿದೆ. ಇದು ಸುಮಾರು ಶೇ. 76ರಷ್ಟು ಕಡಿಮೆಯಾಗಿದೆ. ಆಕೆ ಸಿಬಿಡಿ ಎಣ್ಣೆಯನ್ನು ತಾವೇ ಸ್ವತಃ ಸೇವಿಸಲು ಆಯ್ಕೆ ಮಾಡಿಕೊಂಡರು ನನ್ನಲ್ಲಿ ಯಾವುದೇ ಸಲಹೆ ಪಡೆದಿರಲಿಲ್ಲ ಎಂದು ವೈದ್ಯರು ಮಾಹಿತಿ ತಿಳಿಸಿದ್ದಾರೆ.

ಎಣ್ಣೆ ತೆಗೆದುಕೊಳ್ಳುವಾಗ ಬಿಸಿ ಆಹಾರ ಅಥವಾ ಪಾನೀಯಗಳನ್ನು ತಪ್ಪಿಸಬೇಕು ಎಂದು ಪೂರೈಕೆದಾರರು ನನಗೆ ತಿಳಿಸಿದ್ದರು. ಇದರಿಂದ ನನಗೆ ಯಾವುದೇ ಅಡ್ಡ ಪರಿಣಾಮಗಳಾಗಲಿಲ್ಲ. ಇದನ್ನು ಬಿಟ್ಟು, ನನ್ನ ಜೀವನ ಶೈಲಿ, ಡಯಟ್ಸ್​ಗಳಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ ಎಂದು ಮಹಿಳೆ ವೈದ್ಯರಿಗೆ ಹೇಳಿದರು. ಇದನ್ನು ತಮ್ಮ ಬರಹದಲ್ಲಿ ವೈದ್ಯರು ತಿಳಿಸಿದ್ದಾರೆ.

ಇದು ಕೇವಲ ಒಂದು ಪ್ರಕರಣದ ವರದಿಯಾಗಿದೆ. ಇದೇ ರೀತಿಯ ಇನ್ನೊಂದು ಪ್ರಕರಣ ಸಹ ವರದಿಯಾಗಿದೆ. ಸಿಬಿಡಿ ತೈಲ ಸಮಸ್ಯೆ ಪರಿಹಾರಕ್ಕೆ ಸಹಾಯಕ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸಿಬಿಡಿ ಎಣ್ಣೆ ಸೇವನೆ ಮತ್ತು ಟ್ಯೂಮರ್ ರಿಗ್ರೆಶನ್ ನಡುವೆ ಸಂಬಂಧವಿದ್ದಂತೆ ಕಂಡು ಬಂದರೂ ರೋಗಿಯು ಸಿಬಿಡಿ ಎಣ್ಣೆಯನ್ನು ಸೇವಿಸಿದ್ದರಿಂದಲೇ ಟ್ಯೂಮರ್ ಗಾತ್ರ ಕುಗ್ಗಿದೆ ಎಬುದನ್ನು ದೃಢವಾಗಿಸಲು ಇನ್ನು ಸಾಧ್ಯವಾಗಿಲ್ಲ. ಇದಕ್ಕೆ ಇನ್ನೂ ಹೆಚ್ಚಿನ ಸಂಶೋಧನೆಗಳ ಅಗತ್ಯತೆ ಇದೆ ಎಂದು ವೈದ್ಯರು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ:

Viral News: ವಿಶ್ವದ ಅತ್ಯಂತ ಉದ್ದದ ಮೂಗು ಹೊಂದಿರುವ ವ್ಯಕ್ತಿ ಎಂಬ ದಾಖಲೆ ಯಾರ ಹೆಸರಲ್ಲಿದೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ

Viral News: ಫ್ಲಿಪ್​ ಕಾರ್ಟ್​ನಲ್ಲಿ ಇಯರ್ ಫೋನ್ ಆರ್ಡರ್ ಮಾಡಿದ್ದ ನಟ; ಸಿಕ್ಕಿದ್ದು ಮಾತ್ರ ಖಾಲಿ ಬಾಕ್ಸ್!

Published On - 11:55 am, Tue, 19 October 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ