AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ವಿಶ್ವದ ಅತ್ಯಂತ ಉದ್ದದ ಮೂಗು ಹೊಂದಿರುವ ವ್ಯಕ್ತಿ ಎಂಬ ದಾಖಲೆ ಯಾರ ಹೆಸರಲ್ಲಿದೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ

ಈ ವ್ಯಕ್ತಿ ಅತ್ಯಂತ ಉದ್ದ ಮೂಗು ಹೊಂದಿರುವುದಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಹೆಸರು ಪಡೆದಿದ್ದಾರೆ. ಇವರ ಮೂಗನ್ನು ಅಳತೆ ಮಾಡಿದಾಗ 8.8 ಸೆಂಟಿಮೀಟರ್​ಗಳಷ್ಟು ಉದ್ದವಾಗಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

Viral News: ವಿಶ್ವದ ಅತ್ಯಂತ ಉದ್ದದ ಮೂಗು ಹೊಂದಿರುವ ವ್ಯಕ್ತಿ ಎಂಬ ದಾಖಲೆ ಯಾರ ಹೆಸರಲ್ಲಿದೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ
ವಿಶ್ವದ ಅತ್ಯಂತ ಉದ್ದ ಮೂಗು ಹೊಂದಿರುವ ವ್ಯಕ್ತಿ
Follow us
TV9 Web
| Updated By: shruti hegde

Updated on:Oct 07, 2021 | 11:59 AM

ಸಾಮಾನ್ಯವಾಗಿ ಅತ್ಯಂತ ಆಶ್ಚರ್ಯವನ್ನು ಹುಟ್ಟುಹಾಕುವ ಸುದ್ದಿಗಳು ಕುತೂಹಲಕಾರಿಯಾಗಿರುತ್ತವೆ. ಅಗಲದ ಬಾಯಿ, ಲೆಕ್ಕಕ್ಕಿಂತ ಹೆಚ್ಚು ಬಾಯಿಯಲ್ಲಿ ತುಂಬಿಕೊಂಡಿರುವ ಹಲ್ಲುಗಳು, ವಿಚಿತ್ರ ಕಣ್ಣುಗಳು, ಅಗಲವಾದ ಕಿವಿ ಹೀಗೆ ನಾನಾ ರೀತಿಯ ವಿಚಿತ್ರ ಸಂಗತಿಗಳು ಅಚ್ಚರಿ ಮೂಡಿಸುತ್ತವೆ. ಇದೀಗ ವೈರಲ್ ಆದ ಸುದ್ದಿಯೂ ಅಂಥದ್ದೇ! ಇಲ್ವೋರ್ವ ಟರ್ಕಿಶ್ ಮನುಷ್ಯ ಅತ್ಯಂತ ಉದ್ದದ ಮೂಗು ಹೊಂದಿದ್ದಾರೆ. ಇವರ ಮೂಗು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ಇವರ ಹೆಸರು ಮೆಹ್ಮೆಟ್ ಅಜೈರೆಕ್. ಈ ವ್ಯಕ್ತಿ ಅತ್ಯಂತ ಉದ್ದ ಮೂಗು ಹೊಂದಿರುವುದಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಹೆಸರು ಪಡೆದಿದ್ದಾರೆ. ಇವರ ಮೂಗನ್ನು ಅಳತೆ ಮಾಡಿದಾಗ 8.8 ಸೆಂಟಿಮೀಟರ್​ಗಳಷ್ಟು ಉದ್ದವಾಗಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ. ಗಿನ್ನಿಸ್ ವರ್ಡ್ ರೆಕಾರ್ಡ್ ಪ್ರಕಾರ, ಈ ಹಿಂದೆ 1770ರ ದಶಕದ ಸಮಯದಲ್ಲಿ 19 ಸೆಂಟಿಮೀಟರ್ ಉದ್ದ ಮೂಗು ಹೊಂದಿದ್ದ ಥಾಮಸ್ ವೆಡ್ಡರ್ಸ್ ಅವರ ಹೆಸರು ದಾಖಲಾಗಿದೆ ಎಂಬುದರ ಕುರಿತಾಗಿ ವರದಿಗಳಿವೆ. ಆದರೆ ಅತ್ಯಂತ ಉದ್ದ ಮೂಗು ಹೊಂದಿರುವ ಜೀವಂತ ವ್ಯಕ್ತಿ ಎಂದು ಮೆಹ್ಮೆಟ್ ಅಜೈರೆಕ್ ಹೆಸರು ಪಡೆದಿದ್ದಾರೆ. ಈ ಕುರಿತಂತೆ ಟೈಮ್ಸ್​ ನೌ ನ್ಯೂಸ್​ನಿಂದ ಮಾಹಿತಿ ಪಡೆಯಲಾಗಿದೆ.

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡು ಗಿನ್ನಿಸ್ ವರ್ಡ್ ರೆಕಾರ್ಡ್​ಗೆ ಹೆಸರಾದವರು ಯಾರು ಗೊತ್ತಾ? ಇತ್ತೀಚೆಗೆ ವೈರಲ್​ ಆಗಿದ್ದ ಸುದ್ದಿಯೊಂದರಲ್ಲಿ, 112 ವರ್ಷಗಳ ಕಾಲ ಬದುಕಿರುವ ಈ ವ್ಯಕ್ತಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡು ಗಿನ್ನಿಸ್ ವರ್ಡ್ ರೆಕಾರ್ಡ್​ನಲ್ಲಿ ಸ್ಪೇನ್​ನ ಸ್ಯಾಟರ್ನಿನೊ ಫ್ಯೂಂಟೆ ಗಾರ್ಸಿಯಾ ದಾಖಲಿಸಿಕೊಂಡಿದ್ದಾರೆ. ಇವರು ಸ್ಪೇನ್​ನಲ್ಲಿ 1019 ಫೆಬ್ರವರಿ 11ರಂದು ಸ್ಯಾಟರ್ನಿನೊ ಅವರು ಜನಿಸಿದರು. ಇದೀಗ ಸ್ಯಾಟರ್ನಿನೊ ಅವರಿಗೆ 112 ವರ್ಷ. ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೆ ಹೆಸರಾಗಿದ್ದಾರೆ.

ದೀರ್ಘಾಯುಷ್ಯದ ರಹಸ್ಯದ ಬಗ್ಗೆ ಅವರಲ್ಲಿ ಅಭಿಪ್ರಾಯ ಕೇಳಿದಾಗ ಉತ್ತರಿಸಿದ ಸ್ಯಾಟರ್ನಿನೊ, ಶಾಂತಿಯಿಂದ ಜೀವನ ನಡೆಸಿಕೊಂಡು ಬಂದೆ ಎಂದು ತಮ್ಮ ಜೀವನದ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದರು. ಈ ಕುರಿತಂತೆ ಟೈಮ್ಸ್​ ನೌ ನ್ಯೂಸ್​ನಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ:

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡು ಗಿನ್ನಿಸ್ ವರ್ಡ್ ರೆಕಾರ್ಡ್​ಗೆ ಹೆಸರಾದವರು ಯಾರು ಗೊತ್ತಾ?

Viral News: ನಾಪತ್ತೆಯಾಗಿದ್ದು ತಾನೇ ಎಂದು ತಿಳಿಯದೆ ಕಾಡಿನಲ್ಲಿ ತನ್ನನ್ನೇ ಹುಡುಕಾಡಿದ ಕುಡುಕ!

Published On - 11:59 am, Thu, 7 October 21

ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್