Viral Video: ಎರಡೇ ಚಕ್ರದಲ್ಲಿ ಆಟೋ ರಿಕ್ಷಾ ಓಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ ಚೆನ್ನೈ ಯುವಕ

Guinness world record: ಚೆನ್ನೈ ಮೂಲದ ಆಟೋ ರಿಕ್ಷಾ ಚಾಲಕ ಎರಡೇ ಚಕ್ರದಲ್ಲಿ ವಾಹನ ಓಡಿಸುತ್ತಿರುವುದನ್ನು ನೋಡಬಹುದು. ಇವರು 2.2 ಕಿಲೋಮೀಟರ್​ಗಳಷ್ಟು ಆಟೋ ಓಡಿಸಿ ಗಿನ್ನಿಸ್ ವರ್ಡ್ ರೆಕಾರ್ಡ್​ನಲ್ಲಿ ಹೆಸರು ಪಡೆದಿದ್ದಾರೆ.

Viral Video: ಎರಡೇ ಚಕ್ರದಲ್ಲಿ ಆಟೋ ರಿಕ್ಷಾ ಓಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ ಚೆನ್ನೈ ಯುವಕ
ಎರಡೇ ಚಕ್ರದಲ್ಲಿ ಆಟೋ ರಿಕ್ಷಾ ಓಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ ಜಗದೀಶ್ ಎಂ
Follow us
TV9 Web
| Updated By: shruti hegde

Updated on: Oct 07, 2021 | 1:06 PM

ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಇನ್​ಸ್ಟಾಗ್ರಾಂ ಪುಟವು ಸಾಮಾನ್ಯವಾಗಿ ಕುತೂಹಲ ಕೆರಳಿಸುವ ಕೆಲವು ವಿಡಿಯೋಗಳನ್ನು ಅಥವಾ ಫೋಟೋಗಳನ್ನು ಹಂಚಿಕೊಳ್ಳುತ್ತದೆ. ಅಕ್ಟೋಬರ್ 2ರಂದು ಹಂಚಿಕೊಂಡ ಈ ಪೋಸ್ಟ್​ನಲ್ಲಿ ಚೆನ್ನೈ ಮೂಲದ ಆಟೋ ರಿಕ್ಷಾ ಚಾಲಕ ಎರಡೇ ಚಕ್ರದಲ್ಲಿ ವಾಹನ ಓಡಿಸುತ್ತಿರುವುದನ್ನು ನೋಡಬಹುದು. ಇವರು 2.2 ಕಿಲೋಮೀಟರ್​ಗಳಷ್ಟು ಆಟೋ ಓಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್​ನಲ್ಲಿ ಹೆಸರು ಪಡೆದಿದ್ದಾರೆ.

ಇವರ ಹೆಸರು ಜಗದೀಶ್ ಎಂ. ಚೆನ್ನೈ ಮೂಲದವರು. ತನ್ನ ಸ್ವಂತ ಆಟೋ ರಿಕ್ಷಾವನ್ನು ಎರಡೇ ಚಕ್ರದಲ್ಲಿ ಸುಮಾರು 2.2 ಕಿಲೋಮೀಟರ್​ನಷ್ಟು ಓಡಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಈ ಅದ್ಭುತ ಸ್ಟಂಟ್ ಇದೀಗ ಜನರನ್ನು ಬೆರಗುಗೊಳಿಸಿದೆ.

ಗಿನ್ನಿಸ್​ ವರ್ಲ್ಡ್ ರೆಕಾರ್ಡ್​ ಅಧಿಕೃತ ಇನ್​ಸ್ಟಾಗ್ರಾಂ ಪುಟವು ವಿಡಿಯೋವನ್ನು ಹಂಚಿಕೊಂಡಿದೆ. ಎಪಿಕ್ ಆಟೋ ರಿಕ್ಷಾ ಸೈಡ್ ವೀಲಿಂಗ್​. ಆಟೋರಿಕ್ಷಾ ಚಾಲಕ ಜಗದೀಶ್ ಎಂ, ಚೆನ್ನೈ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೋ ಪೋಸ್ಟ್ ಮಾಡಲಾಗಿದೆ.

ಜಗದೀಶ್ ಅವರು ಸೈಡ್ ವೀಲಿಂಗ್​ನಲ್ಲಿ ಎರಡೇ ಚಕ್ರದಲ್ಲಿ ಆಟೋರಿಕ್ಷಾ ಓಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧಿಸಿದ್ದಾರೆ. ಈ ದಾಖಲೆಯನ್ನು ಸಾಧಿಸುತ್ತೇನೆ ಎದು ನನಗೆ ಯಾವ ಭರವಸೆಯೂ ಇರಲಿಲ್ಲ. ಇದರಿಂದ ನನಗೆ ತೃಪ್ತಿಯಾಗಿದೆ ಎಂದು ಜಗದೀಶ್ ಹೇಳಿದ್ದಾರೆ. ವರದಿಗಳ ಪ್ರಕಾರ ಜಗದೀಶ್ 2 ಕಿಲೋಮೀಟರ್​ವರೆಗೂ ತನ್ನ ಮೂರು ಚಕ್ರದ ವಾಹನ ಆಟೋ ರಿಕ್ಷಾವನ್ನು ಎರಡೇ ಚಕ್ರ ಬಳಸಿ ಚಲಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ:

Viral Video: ಪುಟ್ಟ ಕಂದಮ್ಮನನ್ನು ರಂಜಿಸಲು ಅಪ್ಪ ನುಡಿಸಿದ ಗಿಟಾರ್ ವಾದ್ಯ; ನೀವೂ ಕೇಳಿ ಆನಂದಿಸಿ

Viral Video: ಸ್ವತಃ ತಾನೇ ಬಾಳೆಹಣ್ಣಿನ ಖಾದ್ಯ ತಯಾರಿಸಿ ರುಚಿ ಸವಿದ ಶ್ವಾನ; ವಿಡಿಯೋ ವೈರಲ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ