ದೋಸೆ ಜಗಳ: ಉತ್ತರ ಭಾರತ ವರ್ಸಸ್ ದಕ್ಷಿಣ ಭಾರತ! ನಿಮ್ಮ ಮತ ಯಾರಿಗೆ?

ಉತ್ತರ ಭಾರತದ ಸಂಸ್ಕೃತಿಗೂ ದಕ್ಷಿಣ ಭಾರತದ ಸಂಸ್ಕೃತಿಗೂ ಹತ್ತು ಹಲವು ಭಿನ್ನತೆಗಳಿವೆ. ವೈವಿಧ್ಯತೆಯಿದೆ. ದೋಸೆಯಂತಹ ರುಚಿರುಚಿ ತಿಂಡಿಯನ್ನು ಮೆತ್ತಗೆ ಮೆಲ್ಲುವ ನಾವೂ ಈ ದೋಸೆ ಜಗಳವೇನು ಎಂದು ತಿಳಿಯಲೇಬೇಕು.

ದೋಸೆ ಜಗಳ: ಉತ್ತರ ಭಾರತ ವರ್ಸಸ್ ದಕ್ಷಿಣ ಭಾರತ! ನಿಮ್ಮ ಮತ ಯಾರಿಗೆ?
ದೋಸೆ

ಜಗತ್ತಿನಲ್ಲಿ ಎಂತೆಂಥದ್ದೋ ಜಗಳ ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲಿ ನಾವು ಹೇಳಹೊರಟಿರುವುದು ಅಂತಿಂಥಾ ಜಗಳವಲ್ಲ. ತಿಂಡಿಯ ಜಗಳ, ಅದರಲ್ಲೂ ದೋಸೆಯ ಜಗಳದೋಸೆ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಅದರಲ್ಲೂ ಬಿಸಿಬಿಸಿ ದೋಸೆಯೆ ಹೆಸರು ಹೇಳಿದರೆ ಸಾಕು, ಬಾಯಲ್ಲಿ ಅಂತರ್ಜಲವೇ ಚಿಮ್ಮುತ್ತದೆ. ಅಂಥಾದ್ದೊಂದು ದೋಸೆಯ ಬಗ್ಗೆ ಜಗಳವಾದದ್ದಾದರೂ ಏಕೆ ಎಂದು ತಲೆಬಿಸಿ ಮಾಡಿಕೊಂಡಿರಾ? ಉತ್ತರ ಭಾರತದ ದೋಸೆ ದಕ್ಷಿಣ ಭಾರತದ ದೋಸೆಗಿಂತ ಬಹಳ ರುಚಿಯಾದದ್ದು ಎಂದು ಟ್ವೀಟ್ ಮಾಡಿದ್ದೇ ಈ ಘನಘೋರ ವಿವಾದಕ್ಕೆ ಕಾರಣ. ಉತ್ತರ ಭಾರತದ ಸಂಸ್ಕೃತಿಗೂ ದಕ್ಷಿಣ ಭಾರತದ ಸಂಸ್ಕೃತಿಗೂ ಹತ್ತು ಹಲವು ಭಿನ್ನತೆಗಳಿವೆ. ವೈವಿಧ್ಯತೆಯಿದೆ. ದೋಸೆಯಂತಹ ರುಚಿರುಚಿ ತಿಂಡಿಯನ್ನು ಮೆತ್ತಗೆ ಮೆಲ್ಲುವ ನಾವೂ ಈ ದೋಸೆ ಜಗಳವೇನು ಎಂದು ತಿಳಿಯಲೇಬೇಕು. ಉತ್ತರ ಭಾರತದ ದೋಸೆಯೇ ಚೆನ್ನ ಎಂದವರಿಗೆ ದಕ್ಷಿಣ ಭಾರತದ ದೋಸೆಪ್ರಿಯರು ಏನೇನೆಲ್ಲ ಪ್ರತಿಕ್ರಿಯಿಸಿದ್ದರು ಎಂಬುದು ಸಹ ಅಷ್ಟೇ ಮಜವಾಗಿದೆ.

ಮೂಲತಃ ದಕ್ಷಿಣ ಭಾರತದ ತಿಂಡಿಯಾದ ದೋಸೆ ವಿಶ್ವವ್ಯಾಪ್ತಿಯಾಗಿ ಪ್ರಸಿದ್ಧಿ ಗಳಿಸಿದೆ. ಪ್ರಪಂಚದ ಯಾವ ಮೂಲೆಗೆ ಹೋದರೂ ದೋಸೆ ತಿನ್ನದವರಿಲ್ಲ ಎಂದೇ ಹೇಳಬಹುದು. ಅದರಲ್ಲೂ ಉಡುಪಿ ಹೊಟೇಲ್​ನಂತಹ ಉಪಹಾರ ಗೃಹಗಳು ವಿದೇಶಗಳಿಗೂ ದೋಸೆಯನ್ನು ಪ್ರಚಾರ ಮಾಡಿವೆ.

ಇದನ್ನೂ ಓದಿ: 

Viral Video: ಚಾಕೊಲೇಟ್​-ಸ್ಟ್ರಾಬೆರಿಯಲ್ಲಿ ಮುಳುಗೆದ್ದ ಸಮೋಸ: ಐಸ್​ಕ್ಯಾಂಡಿ ಇಡ್ಲಿಯ ನಂತರ ಸಮೋಸ ವೈರಲ್

Viral Photo: ಐಸ್ ಕ್ರೀಂ ಕಡ್ಡಿಯಲ್ಲಿ ಇಡ್ಲಿ! ಬೆಂಗಳೂರಲ್ಲಿ ತಯಾರಾದ ಸ್ಟೆಷಲ್ ಇಡ್ಲಿಯ ಫೋಟೋ ವೈರಲ್

Read Full Article

Click on your DTH Provider to Add TV9 Kannada