Viral Video: ಮರಿ ಆನೆಯನ್ನು ರಕ್ಷಿಸಿ ತಾಯಿಯ ಬಳಿ ಸೇರಿಸಿದ ತಮಿಳುನಾಡು ರಕ್ಷಣಾ ಸಿಬ್ಬಂದಿ; ಹೃದಯಸ್ಪರ್ಶಿ ವಿಡಿಯೋವಿದು

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ತಮಿಳುನಾಡು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು, ಅರಣ್ಯ ಅಧಿಕಾರಿಗಳ ಪ್ರಯತ್ನವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ವಿಡಿಯೋ ನೋಡಿ..

Viral Video: ಮರಿ ಆನೆಯನ್ನು ರಕ್ಷಿಸಿ ತಾಯಿಯ ಬಳಿ ಸೇರಿಸಿದ ತಮಿಳುನಾಡು ರಕ್ಷಣಾ ಸಿಬ್ಬಂದಿ; ಹೃದಯಸ್ಪರ್ಶಿ ವಿಡಿಯೋವಿದು
ಮರಿ ಆನೆಯನ್ನು ತನ್ನ ಕುಟುಂಬದೊಂದಿಗೆ ಸೇರಿಸಿ ಕರ್ತವ್ಯ ಮೆರೆದ ತಮಿಳುನಾಡು ರಕ್ಷಣಾ ಸಿಬ್ಬಂದಿ
Follow us
TV9 Web
| Updated By: Digi Tech Desk

Updated on:Oct 08, 2021 | 9:34 AM

ಕುಟುಂಬದಿಂದ ದೂರ ಉಳಿದಿದ್ದ ಮರಿ ಆನೆಯನ್ನು ರಕ್ಷಿಸಿ ಕುಂಟುಂಬಕ್ಕೆ ಸೇರಿಸಿದ ಅರಣ್ಯ ಇಲಾಖೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಹೃದಯಸ್ಪರ್ಶಿ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಮರಿ ಆನೆಯನ್ನು ರಕ್ಷಿಸಿ ಆನೆಯ ಕುಟುಂಬವನ್ನು ಹುಡುಕಲು ರಕ್ಷಾಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಮಿಳುನಾಡಿನ  ನೀರಲಗಿರಿ ಪರ್ವತಗಳಲ್ಲಿರುವ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ತಮಿಳುನಾಡು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು, ಅರಣ್ಯ ಅಧಿಕಾರಿಗಳ ಪ್ರಯತ್ನವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಮುದುಮಲೈನಲ್ಲಿ ಪುಟ್ಟ ಮರಿ ಆನೆಯನ್ನು ರಕ್ಷಿಸಿ ಅದರ ಕುಟುಂದೊಂದಿಗೆ ಸೇರಿಸಲಾಯಿತು. ಇದು ನಿಜಕ್ಕೂ ಹೃದಯಸ್ಪರ್ಶಿ ಘಟನೆ ಎನ್ನುತ್ತಾ ರಕ್ಷಣಾ ತಂಡಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದೀಗ ವಿಡಿಯೋ ಫುಲ್ ವೈರಲ್ ಆಗಿದ್ದು 34 ಸಾವಿರಕ್ಕೂ ಹೆಚ್ಚಿನ ಲೈಕ್ಸ್​ಗಳನ್ನು ಗಳಿಸಿಕೊಂಡಿದೆ.

ರಕ್ಷಣಾ ಸಿಬ್ಬಂದಿಯಿಂದ ಮರಿ ಆನೆಯ ಮೇಲೆ ಪ್ರೀತಿಯ ಸುರಿಮಳೆ ಎನ್ನುತ್ತಾ ಹೃದಯಸ್ಪರ್ಶಿ ಘಟನೆಯನ್ನು ಮತ್ತೊಮ್ಮೆ ಸುಪ್ರಿಯಾ ಸಾಹು ನೆನೆಸಿಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಗಮನಿಸುವಂತೆ ಮರಿ ಆನೆ ಎತ್ತರದ ದಿಬ್ಬಗಳನ್ನು ಏರುತ್ತಾ ತಾಯಿಯನ್ನು ಗುರಿತಿಸಿದ ಬಳಿಕ ಸಂತೋಷದಿಂದ ಜೋರಾಗಿ ಕೂಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮರಿ ಆನೆ ತಾಯಿಯ ಬಳಿ ಹೋಗುತ್ತಿದ್ದಂತೆ ದೊಡ್ಡದಾಗಿ ಕೂಗುತ್ತಿದೆ. ರಕ್ಷಣಾ ಸಿಬ್ಬಂದಿ ತಂಡದಲ್ಲಿದ್ದ ಸಚಿನ್, ವೆಂಕಟೇಶ್ ಪ್ರಭು, ಪ್ರಸಾದ್, ವಿಜಯ್, ಪ್ರವೀಣ್, ತಂಬ ಕುಮಾರ್, ಅನೀಶ್ ಕುಮಾರ್ ಮತ್ತು ಪಂಡಲೂರ್ ಎಂದು ಐಎಎಸ್ ಅಧಿಕಾರಿ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ:

Viral Video: ಅರುಣಾಚಲ ಪ್ರದೇಶದ ಪುಟ್ಟ ಬಾಲಕ ಹಾಡಿದ ಗಲ್ಲಿ ಬಾಯ್ ಚಿತ್ರದ ರ‍್ಯಾಪ್‌ ಸಾಂಗ್ ಫುಲ್ ವೈರಲ್

Viral Video: ಹಳೆಯ ಎಟಿಎಂ ಖರೀದಿಸಿ 1.49 ಲಕ್ಷ ರೂ. ಪಡೆದ ಯುವಕರು! ಖುಷಿಯಲ್ಲಿ ಕಿರುಚಾಡಿದ ವಿಡಿಯೋ ವೈರಲ್​

Published On - 8:48 am, Fri, 8 October 21