BoycottFabindia ಟ್ರೆಂಡ್; ದೀಪಾವಳಿ ಜಾಹೀರಾತಿನಿಂದ ಜಷ್ನ್- ಎ-ರಿವಾಜ್ ಹೆಸರು ಕೈಬಿಟ್ಟ ಫ್ಯಾಬ್ ಇಂಡಿಯಾ
ದೀಪಾವಳಿ 2021 ಕಲೆಕ್ಷನ್ ದಿರಿಸು ಧರಿಸಿದ ಮಾಡೆಲ್ಗಳ ಚಿತ್ರವಿರುವ ಫ್ಯಾಬ್ ಇಂಡಿಯಾ ಪ್ರೊಮೋಷನಲ್ ಪೋಸ್ಟ್ ನಲ್ಲಿ "ನಾವು ಪ್ರೀತಿ ಮತ್ತು ಬೆಳಕಿನ ಹಬ್ಬವನ್ನು ಸ್ವಾಗತಿಸುವಂತೆ, ಫ್ಯಾಬ್ ಇಂಡಿಯಾದ ಜಷ್ನ್-ಎ-ರಿವಾಜ್ ಭಾರತೀಯ ಸಂಸ್ಕೃತಿಗೆ ಸುಂದರವಾಗಿ ಗೌರವ ಸಲ್ಲಿಸುವ ಒಂದು ಸಂಗ್ರಹವಾಗಿದೆ" ಎಂದು ಬರೆದಿತ್ತು.
ದೆಹಲಿ: ಜನಪ್ರಿಯ ವಸ್ತ್ರ ಬ್ರಾಂಡ್ ಫ್ಯಾಬ್ ಇಂಡಿಯಾ (Fabindia) ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಬಹಿಷ್ಕಾರದ ಕೂಗು ಎದ್ದಿದ್ದು BoycottFabindia ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ. ದೀಪಾವಳಿಯ ಹೊಸ ಕಲೆಕ್ಷನ್ಗೆ ಜಷ್ನ್-ಎ-ರಿವಾಜ್ (Jashn-e-Riwaaz) ಎಂದು ಹೆಸರಿಡುವ ಮೂಲಕ ಫ್ಯಾಬ್ ಇಂಡಿಯಾ ಹಿಂದೂ ಹಬ್ಬವಾದ ದೀಪಾವಳಿಯ ಹೆಸರು ಕೆಡಿಸಿದೆ. ಮಾತ್ರವಲ್ಲದೆ ಹಿಂದೂ ಹಬ್ಬದಲ್ಲಿ ಜಾತ್ಯತೀತತೆ ಮತ್ತು ಮುಸ್ಲಿಂ ಸಿದ್ಧಾಂತಗಳನ್ನು ಅನಗತ್ಯವಾಗಿ ಎತ್ತಿಹಿಡಿದಿರುವುದಕ್ಕೆ ಅನೇಕರು ಬ್ರಾಂಡ್ ಅನ್ನು ಟೀಕಿಸಿದ್ದಾರೆ.
ಫ್ಯಾಬ್ ಇಂಡಿಯಾ ಟ್ವೀಟ್ನಲ್ಲಿ ಏನಿತ್ತು? ದೀಪಾವಳಿ 2021 ಕಲೆಕ್ಷನ್ ದಿರಿಸು ಧರಿಸಿದ ಮಾಡೆಲ್ಗಳ ಚಿತ್ರವಿರುವ ಫ್ಯಾಬ್ ಇಂಡಿಯಾ ಪ್ರೊಮೋಷನಲ್ ಪೋಸ್ಟ್ ನಲ್ಲಿ “ನಾವು ಪ್ರೀತಿ ಮತ್ತು ಬೆಳಕಿನ ಹಬ್ಬವನ್ನು ಸ್ವಾಗತಿಸುವಂತೆ, ಫ್ಯಾಬ್ ಇಂಡಿಯಾದ ಜಷ್ನ್-ಎ-ರಿವಾಜ್ ಭಾರತೀಯ ಸಂಸ್ಕೃತಿಗೆ ಸುಂದರವಾಗಿ ಗೌರವ ಸಲ್ಲಿಸುವ ಒಂದು ಸಂಗ್ರಹವಾಗಿದೆ” ಎಂದು ಬರೆದಿತ್ತು. ಅದು ಈಗ ಡಿಲೀಟ್ ಆಗಿದೆ.
ಟ್ವೀಟ್ ಇನ್ನೂ ಲಭ್ಯವಿದೆಯೇ? ಇಲ್ಲ. #BoycottFabIndia ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆದ ನಂತರ ಟ್ವೀಟ್ ಅನ್ನು ತಕ್ಷಣವೇ ತೆಗೆದುಹಾಕಲಾಗಿದೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ ತೇಜಸ್ವಿ ಸೂರ್ಯ ಕೂಡ ಟ್ವಿಟರ್‌ನ ಪೋಸ್ಟ್‌ನಲ್ಲಿ ಜಾಹೀರಾತನ್ನು ಟೀಕಿಸಿದ್ದಾರೆ.
ಟ್ವೀಟ್ ಅನ್ನು ತೆಗೆದುಹಾಕಿದ್ದೇಕೆ? ಈ ಟ್ವೀಟ್ ಅನ್ನು ಸಾಮಾಜಿಕ ಮಾಧ್ಯಮದ ಹಲವಾರು ಜನರು “ಸಾಂಸ್ಕೃತಿಕವಾಗಿ ಸೂಕ್ತವಲ್ಲ” ಎಂದು ಹೇಳಿದ್ದಾರೆ. ವಿವರಣೆಯಲ್ಲಿ ಸರಳವಾದ ‘ದೀವಾಲಿ’ ಅಥವಾ ‘ದೀಪಾವಳಿ’ ಪ್ರಚಾರಕ್ಕೆ ಸಾಕಾಗುತ್ತಿತ್ತು ಎಂದು ಹಲವಾರು ಬಳಕೆದಾರರು ಗಮನಸೆಳೆದರೆ, ಇತರರು ಹಿಂದೂ ಹಬ್ಬವನ್ನು ಪುನರ್ರಚಿಸುವ ಮತ್ತು ಅದರಲ್ಲಿ ಜಾತ್ಯತೀತತೆಯನ್ನು ತುಂಬುವ ಅಗತ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಹಿಂದೂ ಹಬ್ಬಗಳು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಹಬ್ಬಗಳಷ್ಟೇ ಮಹತ್ವವನ್ನು ಹೊಂದಿವೆ ಮತ್ತು ಅವುಗಳನ್ನು ಸಂಯೋಜಿಸುವುದು ನಿರ್ದಿಷ್ಟ ಧರ್ಮವನ್ನು ಅಗೌರವಿಸುವುದರಲ್ಲಿ ಏನೂ ಕಡಿಮೆ ಇಲ್ಲ ಎಂದು ಹೇಳಿದ್ದಾರೆ. ಹಲವಾರು ಪ್ರಖ್ಯಾತ ವ್ಯಕ್ತಿಗಳು ಮತ್ತು ರಾಜಕಾರಣಿಗಳ ಟ್ವೀಟ್‌ಗಳು ಫ್ಯಾಬ್ ಇಂಡಿಯಾ ಬಹಿಷ್ಕಾರಕ್ಕೆ ಒತ್ತಾಯಿಸಿದ್ದರಿಂದ ಪ್ರಸ್ತುತ ಕಂಪನಿ ಟ್ವೀಟ್ ಅನ್ನು ತಕ್ಷಣವೇ ತೆಗೆದು ಹಾಕಿತು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ ತೇಜಸ್ವಿ ಸೂರ್ಯ ಅವರು ಫ್ಯಾಬ್ ಇಂಡಿಯಾ ಜಾಹೀರಾತನ್ನು ಟೀಕಿಸಿದ್ದು, ” ದೀಪಾವಳಿ ಜಷ್ನ್-ಇ-ರಿವಾಜ್ ಅಲ್ಲ. ಸಾಂಪ್ರದಾಯಿಕ ಹಿಂದೂ ಉಡುಗೆ ಧರಿಸದ ಮಾಡೆಲ್ಗಳನ್ನಿಟ್ಟು ಹಿಂದೂ ಹಬ್ಬಗಳ ಅಬ್ರಹಾಮೈಸೇಶನ್‌ನ ಉದ್ದೇಶಪೂರ್ವಕ ಪ್ರಯತ್ನವನ್ನು ನಿಲ್ಲಿಸಬೇಕು. ಫ್ಯಾಬ್ ಇಂಡಿಯಾದಂತಹ ಬ್ರಾಂಡ್‌ಗಳು ಇಂತಹ ಉದ್ದೇಶಪೂರ್ವಕ ದುಷ್ಕೃತ್ಯಗಳಿಗಾಗಿ ಆರ್ಥಿಕ ವೆಚ್ಚಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ
Deepavali is not Jash-e-Riwaaz.
This deliberate attempt of abrahamisation of Hindu festivals, depicting models without traditional Hindu attires, must be called out.
And brands like @FabindiaNews must face economic costs for such deliberate misadventures. https://t.co/uCmEBpGqsc
— Tejasvi Surya (@Tejasvi_Surya) October 18, 2021
ಟ್ವೀಟ್ ಪ್ರತಿಕ್ರಿಯೆಗಳಲ್ಲಿ ಕೆಲವು ಹೀಗಿವೆ.
Deepavali is not Jash-e-Riwaaz…Period!!! Seems like Fab India has done this deliberately to hurt Hindu Sentiment. #BoycottFabIndia pic.twitter.com/oczgyUlmIF
— Rajkumar MLA (@rajkumarmla1) October 18, 2021
Clothing brand Fabindia gets slammed for branding Diwali ‘Jashn-e-Riwaaz’
Yet another attempt of forceful cultural appropriation of Hindu festivals #BoycottFabIndia pic.twitter.com/priicni6Sd
— Guruprasad Gowda (@Gp_hjs) October 18, 2021
#BoycottFabIndia Diwali is jashn e Riwaaz? Let celebrate Jashn e drop sales. #Jashn_E_Drop_Sale_FabIndia pic.twitter.com/SIw7ekONPX
— Kaushik Rajgor (@KaushikRajgor12) October 18, 2021
Published On - 10:57 pm, Mon, 18 October 21