Video: ರೈಲಿನಡಿ ಬೀಳುತ್ತಿದ್ದ ಗರ್ಭಿಣಿಯನ್ನು ರಕ್ಷಿಸಿದ ಆರ್ಪಿಎಫ್ ಕಾನ್ಸ್ಟೆಬಲ್; ಹೊಟ್ಟೆ ನೆಲಕ್ಕೆ ತಾಗದಂತೆ ಬಚಾವ್ ಮಾಡಿದರು
ಇಂಥ ಘಟನೆಗಳು ರೈಲು ನಿಲ್ದಾಣಗಳಲ್ಲಿ ನಡೆಯುತ್ತಿರುತ್ತವೆ. ಪ್ರಯಾಣಿಕರು ಅವಸರದಲ್ಲಿ ರೈಲು ಹತ್ತಲು ಅಥವಾ ಇಳಿಯಲು ಹೋಗಿ ಆಯತಪ್ಪುವುದು ಉಂಟು. ಅಂಥವರನ್ನು ಪಿಆರ್ಎಫ್ ಸಿಬ್ಬಂದಿ ರಕ್ಷಿಸಿದ ಹಲವು ಉದಾಹರಣೆಗಳೂ ಇವೆ.
ಪ್ಲಾಟ್ಫಾರ್ಮ್ ಮತ್ತು ರೈಲಿನ ಮಧ್ಯೆ ಇದ್ದ ಖಾಲಿಜಾಗದಲ್ಲಿ ಬೀಳುತ್ತಿದ್ದ ಗರ್ಭಿಣಿಯನ್ನು ರೈಲ್ವೆ ರಕ್ಷಣಾ ಪಡೆ (RPF) ಕಾನ್ಸ್ಟೆಬಲ್ ಒಬ್ಬರು ರಕ್ಷಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಆ ರೈಲು ಸಣ್ಣಪ್ರಮಾಣದಲ್ಲಿ ಚಲಿಸುತ್ತಿತ್ತು. ಈ ಗರ್ಭಿಣಿ ಅದರಿಂದ ಇಳಿಯಲು ಪ್ರಯತ್ನಿಸಿದಾಗ ಆಯತಪ್ಪಿದ್ದಾರೆ. ಅಲ್ಲಿಯೇ ಆರ್ಪಿಎಫ್ ಕಾನ್ಸ್ಟೆಬಲ್ ಕೂಡಲೇ ಅವರನ್ನು ಹಿಡಿದುಕೊಂಡಿದ್ದಾರೆ. ಅವರೇನಾದರೂ ಹಿಡಿದುಕೊಳ್ಳದೆ ಇದ್ದರೆ ಗರ್ಭಿಣಿ ರೈಲಿನ ಅಡಿಗೆ ಆಗುತ್ತಿದ್ದರು. ಇಬ್ಬರೂ ಬಿದ್ದರೂ ಕೂಡ ಆಕೆಯ ಹೊಟ್ಟೆ ನೆಲಕ್ಕೆ ತಾಗದಂತೆ, ತಾವು ಅಡಿಗೆ ಬಿದ್ದು ರಕ್ಷಿಸಿದ್ದಾರೆ.
ಇಂಥ ಘಟನೆಗಳು ರೈಲು ನಿಲ್ದಾಣಗಳಲ್ಲಿ ನಡೆಯುತ್ತಿರುತ್ತವೆ. ಪ್ರಯಾಣಿಕರು ಅವಸರದಲ್ಲಿ ರೈಲು ಹತ್ತಲು ಅಥವಾ ಇಳಿಯಲು ಹೋಗಿ ಆಯತಪ್ಪುವುದು ಉಂಟು. ಅಂಥವರನ್ನು ಪಿಆರ್ಎಫ್ ಸಿಬ್ಬಂದಿ ರಕ್ಷಿಸಿದ ಹಲವು ಉದಾಹರಣೆಗಳೂ ಇವೆ. ಹಾಗೇ ಈ ಘಟನೆ ಕೂಡ ಸೋಮವಾರ ನಡೆದಿದ್ದು. ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗ್ತಿದೆ. ಆರ್ಪಿಎಫ್ ಕಾನ್ಸ್ಟೆಬಲ್ ಸಮಯಪ್ರಜ್ಞೆಗೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅಂದಹಾಗೆ ಈ ಘಟನೆ ನಡೆದದ್ದು ಮಹಾರಾಷ್ಟ್ರದ ಕಲ್ಯಾಣ್ ರೈಲ್ವೆ ಸ್ಟೇಶನ್ನಲ್ಲಿ. ಕಾನ್ಸ್ಟೆಬಲ್ ಹೆಸರು ಎಸ್.ಆರ್. ಕಂದೇಕಾರ್.
#WATCH | Railway Protection Force (RPF) constable SR Khandekar saved a pregnant woman passenger from falling into the gap between platform and train while she was deboarding the running train at Kalyan station yesterday. pic.twitter.com/ZeO0mvmHzK
— ANI (@ANI) October 18, 2021
ಇದನ್ನೂ ಓದಿ: ಈ ಮೂರು ರಾಶಿಯ ಜನ ಸುಲಭವಾಗಿ, ಶ್ರಮ ಪಡದೆ ಕೆಲಸ ಆಗಬೇಕು ಎಂದು ಇಚ್ಛಿಸುತ್ತಾರೆ? ಯಾವುವು ಆ ರಾಶಿಗಳು?
Sri Lanka vs Namibia: ಶ್ರೀಲಂಕಾ ಬೌಲರ್ಗಳ ದಾಳಿಗೆ ನಲುಗಿದ ನಮೀಬಿಯಾ: ಸಿಂಹಳೀಯರಿಂದ ಭರ್ಜರಿ ಆರಂಭ