AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Lanka vs Namibia: ಶ್ರೀಲಂಕಾ ಬೌಲರ್​ಗಳ ದಾಳಿಗೆ ನಲುಗಿದ ನಮೀಬಿಯಾ: ಸಿಂಹಳೀಯರಿಂದ ಭರ್ಜರಿ ಆರಂಭ

T20 World Cup: ಮೊದಲು ಲಂಕಾ ಬೌಲರ್‌ಗಳ ಪ್ರಭಾವಿ ದಾಳಿಗೆ ಕುಸಿತ ಕಂಡ ನಮೀಬಿಯಾ 19.3 ಓವರ್‌ಗಳಲ್ಲಿ ಕೇವಲ 96 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

Sri Lanka vs Namibia: ಶ್ರೀಲಂಕಾ ಬೌಲರ್​ಗಳ ದಾಳಿಗೆ ನಲುಗಿದ ನಮೀಬಿಯಾ: ಸಿಂಹಳೀಯರಿಂದ ಭರ್ಜರಿ ಆರಂಭ
Sri Lanka vs Namibia
TV9 Web
| Edited By: |

Updated on: Oct 19, 2021 | 8:06 AM

Share

ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಶ್ರೀಲಂಕಾ ತಂಡ (Sri Lanka Cricket Team) ಭರ್ಜರಿ ಆಗಿ ಆರಂಭಿಸಿದೆ. ಅಬುಧಾಬಿಯ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ‘ಎ’ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ನಮೀಬಿಯಾ (Namibia) ವಿರುದ್ಧದ ಪಂದ್ಯದಲ್ಲಿ ಲಂಕಾನ್ನರು 7 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿ ಪರಾಕ್ರಮ ಮೆರೆದಿದೆ.

ಮೊದಲು ಲಂಕಾ ಬೌಲರ್‌ಗಳ ಪ್ರಭಾವಿ ದಾಳಿಗೆ ಕುಸಿತ ಕಂಡ ನಮೀಬಿಯಾ 19.3 ಓವರ್‌ಗಳಲ್ಲಿ ಕೇವಲ 96 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಕ್ರೇಗ್ ವಿಲಿಯಮ್ಸ್ 29, ನಾಯಕ ಗೆರಾರ್ಡ್ ಎರಾಸ್ಮಸ್ (20) ಹಾಗೂ ಜೆಜೆ ಸ್ಮಿಟ್ 12* ರನ್ ಗಳಿಸಿರುವುದನ್ನು ಹೊರತುಪಡಿಸಿದರೆ ಇತರೆ ಯಾವ ಬ್ಯಾಟರ್‌ಗಳಿಗೆ ಮಿಂಚಲು ಸಾಧ್ಯವಾಗಲಿಲ್ಲ. ಲಂಕಾ ಪರ ಮಹೀಶ್‌ ತೀಕ್ಷನ 3 ವಿಕೆಟ್ ಮತ್ತು ಲಹಿರು ಕುಮಾರ ಹಾಗೂ ವನಿಂದು ಹಸರಂಗ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಬಳಿಕ ಗುರಿ ಬೆನ್ನತ್ತಿದ ಲಂಕಾ ಒಂದು ಹಂತದಲ್ಲಿ 5.1 ಓವರ್‌ಗಳಲ್ಲಿ 26 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ಆವಿಷ್ಕಾ ಫರ್ನಾಂಡೊ (30*) ಹಾಗೂ ಭಾನುಕಾ ರಾಜಪಕ್ಷ (42*) ಮುರಿಯದ ನಾಲ್ಕನೇ ವಿಕೆಟ್‌ಗೆ 74 ರನ್‌ಗಳ ಜೊತೆಯಾಟ ಕಟ್ಟಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಮೂಲಕ 13.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಪಾಯಿಂಟ್ ಪಟ್ಟಿ:

ಗ್ರೂಪ್ ಎ:

1) ಶ್ರೀಲಂಕಾ: 1 ಪಂದ್ಯ 2 ಅಂಕ

2) ಐರ್ಲೆಂಡ್: 1 ಪಂದ್ಯ 2 ಅಂಕ

3) ನೆದರ್​ಲೆಂಡ್ಸ್: 1 ಪಂದ್ಯ 0 ಅಂಕ

4) ನಮೀಬಿಯಾ: 1 ಪಂದ್ಯ 0 ಅಂಕ

ಗ್ರೂಪ್ ಬಿ:

1) ಓಮನ್: 1 ಪಂದ್ಯ 2 ಅಂಕ

2) ಸ್ಕಾಟ್ಲೆಂಡ್: 1 ಪಂದ್ಯ 2 ಅಂಕ

3) ಬಾಂಗ್ಲಾದೇಶ: 1 ಪಂದ್ಯ 0 ಅಂಕ

4) ಪಪುವಾ ನ್ಯೂಗಿನಿಯಾ: 1 ಪಂದ್ಯ 0 ಅಂಕ

Curtis Campher: 4 ಬಾಲ್-4 ವಿಕೆಟ್: ಟಿ20 ವಿಶ್ವಕಪ್​ನ ಎರಡನೇ ದಿನವೇ ಸೃಷ್ಟಿಯಾಯಿತು ಐತಿಹಾಸಿಕ ದಾಖಲೆ

(Sri Lankan bowlers dominated the inexperienced Namibia and won by seven wickets in T20 World Cup)

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ