Curtis Campher: 4 ಬಾಲ್-4 ವಿಕೆಟ್: ಟಿ20 ವಿಶ್ವಕಪ್​ನ ಎರಡನೇ ದಿನವೇ ಸೃಷ್ಟಿಯಾಯಿತು ಐತಿಹಾಸಿಕ ದಾಖಲೆ

Ireland vs Netherlands, T20 World Cup: ಕರ್ಟಿಸ್ ಕ್ಯಾಂಫರ್ 4 ಓವರ್ ಬೌಲಿಂಗ್ ಮಾಡಿ 26 ರನ್ ನೀಡಿದ 4 ವಿಕೆಟ್ ಪಡೆದ ಸಾಧನೆ ಮಾಡಿದರು. 4 ಬಾಲ್​ನಲ್ಲಿ 4 ವಿಕೆಟ್ ಕಿತ್ತಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಎನಿಸಿದ್ದಾರೆ.

Curtis Campher: 4 ಬಾಲ್-4 ವಿಕೆಟ್: ಟಿ20 ವಿಶ್ವಕಪ್​ನ ಎರಡನೇ ದಿನವೇ ಸೃಷ್ಟಿಯಾಯಿತು ಐತಿಹಾಸಿಕ ದಾಖಲೆ
Curtis Campher T20 World Cup
Follow us
TV9 Web
| Updated By: Vinay Bhat

Updated on: Oct 19, 2021 | 7:22 AM

ಐಸಿಸಿ ಟಿ20 ವಿಶ್ವಕಪ್ 2021 (ICC T20 World Cup) ಕೂಟದ ಎರಡನೇ ದಿನವೇ ಹೊಸ ದಾಖಲೆಯೊಂದು ಬರೆಯಲಾಗಿದೆ. ಐರ್ಲೆಂಡ್ (Ireland) ವೇಗದ ಬೌಲರ್ ಕರ್ಟಿಸ್ ಕ್ಯಾಂಫರ್ (Curtis Campher)​​ ಭಾನುವಾರ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೆದರ್​ಲೆಂಡ್ಸ್ (Netherlands) ವಿರುದ್ಧದ ಪಂದ್ಯದಲ್ಲಿ ಕರ್ಟಿಸ್ ಕ್ಯಾಂಫರ್ ಹ್ಯಾಟ್ರಿಕ್ ಜೊತೆಗೆ ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 4 ಬಾಲ್​ನಲ್ಲಿ 4 ವಿಕೆಟ್ ಕಿತ್ತಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಎನಿಸಿದ್ದಾರೆ. ಈ ಹಿಂದೆ ಶ್ರೀಲಂಕಾದ (Sri Lanka) ಲಸಿತ್ ಮಾಲಿಂಗ (Lasit Malinga) ಹಾಗೂ ಅಫ್ಘಾನಿಸ್ತಾನದ ರಶೀದ್ ಖಾನ್ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಗಳಿಸಿದ್ದರು.

10ನೇ ಓವರ್ ನ ಎರಡನೇ ಎಸೆತದಲ್ಲಿ ಏಕರ್ ಮನ್ ಅವರು ಕ್ಯಾಚ್ ಔಟಾದರು. ಮೂರನೇ ಎಸೆತದಲ್ಲಿ ಟೆನ್ ಡೆಷ್ಕೋಟ್ ಎಲ್ ಬಿಡಬ್ಲ್ಯೂ ಔಟಾದರು. ನಾಲ್ಕನೇ ಎಸೆತದಲ್ಲಿ ಬಲಗೈ ಆಟಗಾರ ಸ್ಕಾಟ್ ಎಡ್ವರ್ಡ್ಸ್ ಎಲ್ ಬಿಡಬ್ಲ್ಯೂ ರೂಪದಲ್ಲಿ ಔಟಾದರು. ಈ ಮೂಲಕ ಕ್ಯಾಂಫರ್ ಹ್ಯಾಟ್ರಿಕ್ ಸಾಧಿಸಿದರು. ಮುಂದಿನ ಎಸೆತದಲ್ಲಿ ವಾನ್ ಡರ್ ಮರ್ವ್ ರನ್ನು ಕ್ಲೀನ್ ಬೌಲ್ಡ್ ಮಾಡಿದ ಕರ್ಟಿಸ್ ಕ್ಯಾಂಫರ್ ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಹೀಗೆ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಮೂರನೇ ಬೌಲರ್ ಆಗಿ ಕರ್ಟಿಸ್ ಕ್ಯಾಂಫರ್ ಮೂಡಿಬಂದರು. ಈ ಮೂಲಕ ಕರ್ಟಿಸ್ ಕ್ಯಾಂಫರ್ 4 ಓವರ್ ಬೌಲಿಂಗ್ ಮಾಡಿ 26 ರನ್ ನೀಡಿದ 4 ವಿಕೆಟ್ ಪಡೆದ ಸಾಧನೆ ಮಾಡಿದರು.

ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್​ಲೆಂಡ್ಸ್ ತಂಡ ಮೊದಲಿಗೆ ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಆದರೆ ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಯಾವ ಹಂತದಲ್ಲಿಯೂ ತಂಡದ ಆಟಗಾರರು ಪ್ರದರ್ಶನ ನೀಡಲಿಲ್ಲ.

ಆರಂಭಿಕ ಆಟಗಾರ ಮ್ಯಾಕ್ಸ್‌ಒ ಡೌಡ್ ಮಾತ್ರ ಏಕಾಂಗಿ ಹೋರಾಟ ನಡೆಸಿ ಅರ್ಧ ಶತಕ ದಾಖಲಿಸಿದರು. ನೆದರ್ಲೆಂಡ್ಸ್ ತಂಡದ ಐವರು ನಾಲ್ವರು ಆಟಗಾರರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 106 ರನ್‌ಗಳಿಗೆ ತನ್ನ ಆಟವನ್ನು ಮುಗಿಸಿತು ನೆದರ್ಲೆಂಡ್ಸ್ ತಂಡ.

107 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ತಂಡ ಕೂಡ ಆರಂಭದಲ್ಲಿ ಆತಂಕವನ್ನು ಅನುಭವಿಸಿತ್ತು. 27 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ಐರ್ಲೆಂಡ್ 36 ರನ್‌ಗೆ ಎರಡನೇ ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಆರಂಭಿಕ ಆಟಗಾರ ಪಾಲ್ ಸ್ಟಿರ್ಲಿಂಗ್‌ಗೆ ಜೊತೆಯಾದ ಗ್ಯಾರಟ್ ಡೆಲಾನಿ ಉತ್ತಮ ಜೊತೆಯಾಟ ನೀಡಿದರು. ಈ ಮೂಲಕ ನೆದರ್ಲ್ಯಾಂಡ್‌ಗೆ ಯಾವ ಅವಕಾಶಗಳು ಇಲ್ಲದಂತೆ ಮಾಡಿದರು. 29 ಎಸೆತ ಎದುರಿಸಿದ ಡೆಲಾನಿ 44 ನ್‌ಗಳಿಸಿದ್ದರು. ಆರಂಭಿಕ ಆಟಗಾರ ಸ್ಟಿರ್ಲಿನ್ ಅಜೇಯ 30 ರನ್‌ಗಳಿಸಿದ್ದಾರೆ. ಅಂತಿಮವಾಗಿ 15.1 ಓವರ್‌ಗಳಲ್ಲಿ ಐರ್ಲೆಂಡ್ 3 ವಿಕೆಟ್ ಕಳೆದುಕೊಂಡು ಈ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು.

T20 World Cup: ರಾಹುಲ್- ಕಿಶನ್ ಸಿಡಿಲಬ್ಬರದ ಅರ್ಧಶತಕ! ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದ ಭಾರತ

(Curtis Campher of Ireland makes history with four wickets in four balls in T20 World Cup)