T20 World Cup: ರಾಹುಲ್- ಕಿಶನ್ ಸಿಡಿಲಬ್ಬರದ ಅರ್ಧಶತಕ! ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದ ಭಾರತ

T20 World Cup: ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್​ಗಳಲ್ಲಿ 5 ವಿಕೆಟ್​ಗೆ 188 ರನ್ ಗಳಿಸಿತು. ಆದರೆ ಇದರ ಹೊರತಾಗಿಯೂ ಟೀಂ ಇಂಡಿಯಾ ಗೆಲುವಿನಲ್ಲಿ ಯಾವುದೇ ಸಮಸ್ಯೆ ಎದುರಿಸಲಿಲ್ಲ. ಕೆಎಲ್ ರಾಹುಲ್ ಕೇವಲ 24 ಎಸೆತಗಳಲ್ಲಿ 51 ರನ್ ಗಳಿಸಿದರೆ ಇಶಾನ್ ಕಿಶನ್ 70 ರನ್ ಗಳಿಸಿದರು.

T20 World Cup: ರಾಹುಲ್- ಕಿಶನ್ ಸಿಡಿಲಬ್ಬರದ ಅರ್ಧಶತಕ! ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದ ಭಾರತ
ರಾಹುಲ್- ಕಿಶನ್
Follow us
TV9 Web
| Updated By: ಪೃಥ್ವಿಶಂಕರ

Updated on:Oct 18, 2021 | 11:19 PM

2021 ರ ಟಿ 20 ವಿಶ್ವಕಪ್‌ನಲ್ಲಿ ಭಾರತ ತಂಡವು ಪ್ರಶಸ್ತಿಗಾಗಿ ಏಕೆ ಹೆಚ್ಚು ಸ್ಪರ್ಧಿಯಾಗಿದೆ ಎಂಬುದಕ್ಕೆ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಉತ್ತರ ಸಿಕ್ಕಿದೆ. ಟೀಂ ಇಂಡಿಯಾ ದುಬೈನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್​ಗಳಲ್ಲಿ 5 ವಿಕೆಟ್​ಗೆ 188 ರನ್ ಗಳಿಸಿತು. ಆದರೆ ಇದರ ಹೊರತಾಗಿಯೂ ಟೀಂ ಇಂಡಿಯಾ ಗೆಲುವಿನಲ್ಲಿ ಯಾವುದೇ ಸಮಸ್ಯೆ ಎದುರಿಸಲಿಲ್ಲ. ಕೆಎಲ್ ರಾಹುಲ್ ಕೇವಲ 24 ಎಸೆತಗಳಲ್ಲಿ 51 ರನ್ ಗಳಿಸಿದರೆ ಇಶಾನ್ ಕಿಶನ್ 70 ರನ್ ಗಳಿಸಿದರು. ಇಶಾನ್ ಕಿಶನ್ 46 ಎಸೆತಗಳನ್ನು ಆಡಿದ ನಂತರ ಔಟಾಗದೆ ಪೆವಿಲಿಯನ್​ಗೆ ಮರಳಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಹೊಡೆದರು. ಅವರ ಸ್ಟ್ರೈಕ್ ರೇಟ್ ಕೂಡ 150 ಕ್ಕಿಂತ ಹೆಚ್ಚಿತ್ತು.

ಇಂಗ್ಲೆಂಡ್ ಪರ ಜಾನಿ ಬೈರ್ ಸ್ಟೋ 49 ರನ್ ಗಳಿಸಿದರು. ಮೊಯೀನ್ ಅಲಿ ಕೂಡ 20 ಎಸೆತಗಳಲ್ಲಿ ಔಟಾಗದೆ 43 ರನ್ ಗಳಿಸಿದರು. ಲಿವಿಂಗ್ಸ್ಟೋನ್ 20 ಎಸೆತಗಳಲ್ಲಿ 30 ರನ್ ಗಳಿಸಿದರು. ಭಾರತೀಯ ಬೌಲರ್‌ಗಳು ನಿರಸ ಪ್ರದರ್ಶನ ನೀಡಿದರು. ಭುವನೇಶ್ವರ್ ಕುಮಾರ್ 4 ಓವರ್​ಗಳಲ್ಲಿ 54 ರನ್ ನೀಡಿದರು. ಶಮಿ 3 ವಿಕೆಟ್ ಪಡೆದಿದ್ದರು ಆದರೆ ಅವರು ಕೂಡ 40 ರನ್ ಕಳೆದುಕೊಂಡರು. ರಾಹುಲ್ ಚಹರ್ ಕೂಡ ಒಂದು ವಿಕೆಟ್​ಗೆ 43 ರನ್ ನೀಡಿದರು.

ನಿರಾಶೆಗೊಳಿಸಿದ ಭುವಿ-ರಾಹುಲ್ ಚಹರ್ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ರಾಯ್ ಮತ್ತು ಜೋಸ್ ಬಟ್ಲರ್ ಇಂಗ್ಲೆಂಡ್‌ಗೆ ತ್ವರಿತ ಆರಂಭವನ್ನು ನೀಡಿದರು. ಆದರೆ ಇಬ್ಬರೂ ಶಮಿಯ ಅತ್ಯುತ್ತಮ ಎಸೆತಗಳಿಗೆ ಬಲಿಯಾದರು. ಡೇವಿಡ್ ಮಲನ್ ಕೂಡ 18 ರನ್ ಗಳಿಸಿದರು ಮತ್ತು ರಾಹುಲ್ ಚಹಾರ್ ಗೂಗ್ಲಿ ಅವರನ್ನು ಪೆವಿಲಿಯನ್​ಗೆ ಮರಳುವಂತೆ ಮಾಡಿತು. 10 ನೇ ಓವರ್ ತನಕ ಭಾರತೀಯ ಬೌಲಿಂಗ್ ಉತ್ತಮವಾಗಿತ್ತು ಆದರೆ ಅದರ ನಂತರ ಬೈರ್‌ಸ್ಟೋ ಮತ್ತು ಲಿವಿಂಗ್‌ಸ್ಟೋನ್ ಭಾರತೀಯ ಬೌಲರ್‌ಗಳನ್ನು ದಂಡಿಸಿದರು. ಬೈರ್‌ಸ್ಟೊ 36 ಎಸೆತಗಳಲ್ಲಿ 49 ರನ್ ಮತ್ತು ಲಿವಿಂಗ್‌ಸ್ಟೋನ್ 20 ಎಸೆತಗಳಲ್ಲಿ 30 ರನ್ ಗಳಿಸಿದರು. ಮೊಯೀನ್ ಅಲಿಯ ವೇಗದ ಬ್ಯಾಟಿಂಗ್ ಭಾರತೀಯ ಬೌಲರ್‌ಗಳ ಅಂಕಿಗಳನ್ನು ಹಾಳು ಮಾಡಿತು. ಮೊಯೀನ್ ಅಲಿ ಕೇವಲ 20 ಎಸೆತಗಳಲ್ಲಿ ಔಟಾಗದೆ 43 ರನ್ ಗಳಿಸಿದರು.

Published On - 11:13 pm, Mon, 18 October 21