AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಮದುವೆಯಾದ ಒಂದೇ ತಿಂಗಳಿಗೆ ಹೆಂಡತಿಯನ್ನು ಮಾರಿ ಸ್ಮಾರ್ಟ್​ಫೋನ್ ಖರೀದಿಸಿದ ಪತಿರಾಯ!

Viral News: ಒರಿಸ್ಸಾದ 17 ವರ್ಷದ ವ್ಯಕ್ತಿ 26 ವರ್ಷದ ತನ್ನ ಹೆಂಡತಿಯನ್ನು ರಾಜಸ್ಥಾನದ 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ತಾನು ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಇಟ್ಟಿಗೆ ಫ್ಯಾಕ್ಟರಿಯಲ್ಲಿದ್ದ ವ್ಯಕ್ತಿಗೆ ತನ್ನ ಹೆಂಡತಿಯನ್ನು ಮಾರಿದ್ದಾನೆ.

Shocking News: ಮದುವೆಯಾದ ಒಂದೇ ತಿಂಗಳಿಗೆ ಹೆಂಡತಿಯನ್ನು ಮಾರಿ ಸ್ಮಾರ್ಟ್​ಫೋನ್ ಖರೀದಿಸಿದ ಪತಿರಾಯ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 23, 2021 | 1:34 PM

Share

ಭುವನೇಶ್ವರ: ಆತ 17 ವರ್ಷಕ್ಕೇ ಮದುವೆಯಾಗಿದ್ದ. ಆತನಿಗಿಂತ 9 ವರ್ಷ ದೊಡ್ಡ ಹುಡುಗಿ ಆತನಿಗೆ ಹೆಂಡತಿಯಾಗಿಯೂ ಸಿಕ್ಕಿದ್ದಳು. ಅಪ್ಪ-ಅಮ್ಮನ ಹಣದಿಂದ ಜೀವನ ಸಾಗಿಸುತ್ತಿದ್ದ ಅವನಿಗೆ ಜವಾಬ್ದಾರಿಗಳು ಏನೆಂದೇ ಗೊತ್ತಿರಲಿಲ್ಲ. ಆದರೆ, ಮದುವೆಯಾದ ಒಂದೇ ತಿಂಗಳಿಗೆ ಆತ ತನ್ನ ಹೆಂಡತಿಯನ್ನು 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ಹೆಂಡತಿಯನ್ನು ಮಾರಿದ ಹಣದಿಂದ ಆತ ಸ್ಮಾರ್ಟ್​ಫೋನ್ ಖರೀದಿಸಿದ್ದಾನೆ!

ಒರಿಸ್ಸಾದಲ್ಲಿ ಇಂತಹ ವಿಚಿತ್ರ ಮತ್ತು ಅಮಾನವೀಯ ಘಟನೆಯೊಂದು ನಡೆದಿದೆ. ಒರಿಸ್ಸಾದ ಪೊಲೀಸರು ಆ ಮಹಿಳೆಯನ್ನು ಬಹಳ ಕಷ್ಟಪಟ್ಟು ರಕ್ಷಿಸಿದ್ದಾರೆ. ಒರಿಸ್ಸಾದ 17 ವರ್ಷದ ವ್ಯಕ್ತಿ 26 ವರ್ಷದ ತನ್ನ ಹೆಂಡತಿಯನ್ನು ರಾಜಸ್ಥಾನದ 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ತಾನು ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಇಟ್ಟಿಗೆ ಫ್ಯಾಕ್ಟರಿಯಲ್ಲಿದ್ದ ವ್ಯಕ್ತಿಗೆ ತನ್ನ ಹೆಂಡತಿಯನ್ನು ಮಾರಿದ್ದಾನೆ.

26 ವರ್ಷದ ಮಹಿಳೆಯನ್ನು ಮಧ್ಯಪ್ರದೇಶದ ಗಡಿಯಲ್ಲಿರುವ ಬರಾನ್‌ನ ಆಗ್ನೇಯ ರಾಜಸ್ಥಾನ ಜಿಲ್ಲೆಯಿಂದ ಪೊಲೀಸರು ರಕ್ಷಿಸಿದ್ದಾರೆ. ಇದೇ ವರ್ಷ ಜುಲೈನಲ್ಲಿ ಇಬ್ಬರೂ ಮದುವೆಯಾಗಿದ್ದರು. ಆಗಸ್ಟ್‌ನಲ್ಲಿ ಈ 17 ವರ್ಷದ ವ್ಯಕ್ತಿ ಮತ್ತು 26 ವರ್ಷದ ಮಹಿಳೆ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ರಾಯ್‌ಪುರ ಮತ್ತು ಝಾನ್ಸಿ ಮೂಲಕ ರಾಜಸ್ಥಾನಕ್ಕೆ ಹೋಗಿದ್ದರು. ಕೆಲಸಕ್ಕೆ ಸೇರಿ ಕೆಲವು ದಿನಗಳ ನಂತರ 17 ವರ್ಷದ ಆ ವ್ಯಕ್ತಿ ತನ್ನ ಪತ್ನಿಯನ್ನು ಬರಾನ್ ಜಿಲ್ಲೆಯ 55 ವರ್ಷದ ವ್ಯಕ್ತಿಗೆ 1.8 ಲಕ್ಷ ರೂ.ಗೆ ಮಾರಾಟ ಮಾಡಿದ್ದ.

ಹೆಂಡತಿಯನ್ನು ಮಾರಿದ ಹಣದಿಂದ ಆತ ಚೆನ್ನಾಗಿ ಊಟ-ತಿಂಡಿಗಳನ್ನು ಮಾಡಿ, ತನಗಾಗಿ ಒಂದು ಸ್ಮಾರ್ಟ್​ಫೋನ್ ಖರೀದಿಸಿದ. ಬಳಿಕ ಅವನು ತನ್ನ ಹಳ್ಳಿಗೆ ವಾಪಾಸ್ ಹೋದ. ಅಲ್ಲಿ ಆತನ ಹೆಂಡತಿ ಎಲ್ಲೆಂದು ಮನೆಯವರು ಕೇಳಿದಾಗ ಅವಳು ನನ್ನನ್ನು ಬಿಟ್ಟು ಹೋದಳು ಎಂದು ಅವರನ್ನು ನಂಬಿಸಿದ್ದ. ಆದರೆ, ಆ ಮಹಿಳೆಯ ಮನೆಯವರು ಆತ ಹೇಳಿದ ಕತೆಯನ್ನು ನಂಬಲಿಲ್ಲ. ತನ್ನ ಅಳಿಯನಿಂದಲೇ ಆಕೆ ನಾಪತ್ತೆಯಾಗಿದ್ದಾಳೆ ಎಂದು ಪೋಲಿಸರಿಗೆ ದೂರು ನೀಡಿದರು.

ಆ ದೂರನ್ನು ಆಧರಿಸಿ ಆ ಪೊಲೀಸರು ಆ ವ್ಯಕ್ತಿಯ ಫೋನ್ ಕರೆಗಳನ್ನು ಪರಿಶೀಲಿಸಿದರು. ಆಗ ಆತ ತನ್ನ ಹೆಂಡತಿಯನ್ನು ಮಾರಿದ್ದು ಗೊತ್ತಾಯಿತು. “ನಾವು ಅವನನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಅವನು ಹಣಕ್ಕಾಗಿ ತನ್ನ ಹೆಂಡತಿಯನ್ನು ಮಾರಾಟ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮಹಿಳೆಯನ್ನು ಪತ್ತೆಹಚ್ಚಲು ಬಾಲಂಗೀರ್ ತಂಡವು ರಾಜಸ್ಥಾನಕ್ಕೆ ಹೋಗಿದೆ. ಆದರೆ, ಆ ಮಹಿಳೆಯನ್ನು 1.8 ಲಕ್ಷಕ್ಕೆ ಖರೀದಿಸಲಾಗಿದೆ, ಹೀಗಾಗಿ ಆಕೆಯನ್ನು ವಾಪಾಸ್ ಕಳುಹಿಸುವುದಿಲ್ಲ ಎಂದು ಆ 55 ವರ್ಷದ ವ್ಯಕ್ತಿ ಮತ್ತು ಸ್ಥಳೀಯರು ಆಕೆಯನ್ನು ವಾಪಾಸ್ ಕಳುಹಿಸಲು ಒಪ್ಪಲಿಲ್ಲ. ನಂತರ ಅವರ ಮನವೊಲಿಸಿ ಆಕೆಯನ್ನು ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಬಾಲಾಪರಾಧ ನ್ಯಾಯಾಲಯದ ಮುಂದೆ ಆ 17 ವರ್ಷದ ವ್ಯಕ್ತಿಯನ್ನು ಹಾಜರುಪಡಿಸಲಾಗಿದೆ.

ಇದನ್ನೂ ಓದಿ: Shocking News: ಮೊಬೈಲ್ ನುಂಗಿದ ಮಹರಾಯ; 6 ತಿಂಗಳ ಬಳಿಕ ಆಪರೇಷನ್ ಮೂಲಕ ಹೊರತೆಗೆದ ವೈದ್ಯರು

Shocking News: ಇಟ್ಟಿಗೆ ಎಸೆದು ಮನುಷ್ಯನ ಪ್ರಾಣ ತೆಗೆದ ಕೋತಿ!; ದೆಹಲಿಯಲ್ಲೊಂದು ಶಾಕಿಂಗ್ ಘಟನೆ