Shocking News: ಇಟ್ಟಿಗೆ ಎಸೆದು ಮನುಷ್ಯನ ಪ್ರಾಣ ತೆಗೆದ ಕೋತಿ!; ದೆಹಲಿಯಲ್ಲೊಂದು ಶಾಕಿಂಗ್ ಘಟನೆ

Viral News: ದೆಹಲಿಯ ನಬಿ ಕರೀಮ್ ಪ್ರದೇಶದಲ್ಲಿ 30 ವರ್ಷದ ಮೊಹಮ್ಮದ್ ಕುರ್ಬಾನ್ ಎಂಬುವವರ ತಲೆ ಮೇಲೆ ಕೋತಿ ಎಸೆದ ಇಟ್ಟಿಗೆ ಬಿದ್ದ ಪರಿಣಾಮದಿಂದ ಅವರು ಸಾವನ್ನಪ್ಪಿದ್ದಾರೆ.

Shocking News: ಇಟ್ಟಿಗೆ ಎಸೆದು ಮನುಷ್ಯನ ಪ್ರಾಣ ತೆಗೆದ ಕೋತಿ!; ದೆಹಲಿಯಲ್ಲೊಂದು ಶಾಕಿಂಗ್ ಘಟನೆ
ಸಾಂಕೇತಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on:Oct 21, 2021 | 3:12 PM

ಯಾರ ಸಾವು ಯಾವ ರೀತಿಯಲ್ಲಿ ಬರುತ್ತದೋ ಊಹಿಸಲು ಕೂಡ ಅಸಾಧ್ಯ. ಎಲ್ಲವೂ ಸರಿಯಿದೆ ಎಂದುಕೊಳ್ಳುವಾಗಲೇ ನಮ್ಮ ಊಹೆಗೆ ಮೀರಿದ ಘಟನೆಗಳು ನಡೆದು ಹೋಗುತ್ತವೆ. ಮನುಷ್ಯನಿಂದ ದಿನವೂ ಅದೆಷ್ಟೋ ಪಾಪದ ಕಾರ್ಯಗಳು ಆಗುತ್ತಲೇ ಇರುತ್ತವೆ. ಕೊಲೆ, ಸುಲಿಗೆ, ಅಪಘಾತ, ಅತ್ಯಾಚಾರ ಈ ರೀತಿಯ ಘಟನೆಗಳೆಲ್ಲ ಸಾಮಾನ್ಯ ಎಂದಾಗಿಬಿಟ್ಟಿದೆ. ಮನುಷ್ಯನಿಂದ ಪ್ರಾಣಿಗಳ ಪ್ರಾಣಕ್ಕೆ ಸಂಚಕಾರ ಆಗುತ್ತಲೇ ಇರುತ್ತದೆ. ಆದರೆ, ಕೋತಿಯೊಂದು ಮನುಷ್ಯನನ್ನು ಕೊಂದಿರುವ ವಿಚಿತ್ರ ಮತ್ತು ಅಪರೂಪದ ಘಟನೆ ದೆಹಲಿಯಲ್ಲಿ ನಡೆದಿದೆ.

ಕಟ್ಟಡವನ್ನು ಏರಿ ಕುಳಿತಿದ್ದ ಕೋತಿಯೊಂದು ಎರಡನೇ ಮಹಡಿಯಿಂದ ಇಟ್ಟಿಗೆಯನ್ನು ಎಸೆದ ಕಾರಣ ಕೆಳಗೆ ನಿಂತಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ದೆಹಲಿಯ ನಬಿ ಕರೀಮ್ ಪ್ರದೇಶದಲ್ಲಿ 30 ವರ್ಷದ ಮೊಹಮ್ಮದ್ ಕುರ್ಬಾನ್ ಎಂಬುವವರ ತಲೆ ಮೇಲೆ ಕೋತಿ ಎಸೆದ ಇಟ್ಟಿಗೆ ಬಿದ್ದ ಪರಿಣಾಮದಿಂದ ಅವರು ಸಾವನ್ನಪ್ಪಿದ್ದಾರೆ.

ಈ ಪ್ರದೇಶದಲ್ಲಿ ಬ್ಯಾಗ್​ಗಳನ್ನು ವ್ಯಾಪಾರ ಮಾಡುತ್ತಿದ್ದ ಕುರ್ಬಾನ್ ಅವರ ಸಾವು ಮಂಗನಿಂದಲೇ ಆಗಬೇಕೆಂದು ವಿಧಿ ನಿರ್ಧರಿಸಿತ್ತು ಎನಿಸುತ್ತದೆ. ಹೀಗಾಗಿ, ಕೋತಿಯ ಕೈಯಿಂದ ಜಾರಿದ ಇಟ್ಟಿಗೆ ಸೀದಾ ಕುರ್ಬಾನ್ ಅವರ ತಲೆಗೆ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಕಟ್ಟಡದ ಮಾಲೀಕರು ಕೋತಿಗಳನ್ನು ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್​ ಅನ್ನು ಕೋತಿಗಳು ಓಪನ್ ಮಾಡಬಾರದು ಎಂದು ಅದರ ಮೇಲೆ ಇಟ್ಟಿಗೆಗಳನ್ನು ಹೇರಿದ್ದರು. ಆ ಇಟ್ಟಿಗೆಯನ್ನು ತೆಗೆದು ಟ್ಯಾಂಕ್ ಮೇಲೆ ಹತ್ತಲು ನೋಡಿದ ಕೋತಿಯ ಕೈಯಿಂದ ಇಟ್ಟಿಗೆ ಜಾರಿ ಕೆಳಗೆ ಬಿದ್ದಿದೆ. ದುರಾದೃಷ್ಟವಶಾತ್ ಆ ಇಟ್ಟಿಗೆ ಕಟ್ಟಡದ ಕೆಳ ಭಾಗದಲ್ಲಿ ನಿಂತಿದ್ದ ಕುರ್ಬಾನ್ ಅವರ ತಲೆ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಕೋತಿಗಳ ಗುಂಪು ನೀರಿನ ಟ್ಯಾಂಕ್ ಮೇಲಿಂದ ಎರಡು ಇಟ್ಟಿಗೆಗಳನ್ನು ತೆಗೆದಿದ್ದು, ಒಂದನ್ನು ಟೆರೇಸ್ ಮೇಲೆ ಎಸೆದಿವೆ. ಇನ್ನೊಂದು ಇಟ್ಟಿಗೆ ಕುರ್ಬಾನ್‌ ತಲೆಗೆ ಬಡಿದಿದೆ.

ಇದನ್ನೂ ಓದಿ: Crime News: ಹೋಂ ವರ್ಕ್ ಮಾಡದ 7ನೇ ಕ್ಲಾಸ್​ ವಿದ್ಯಾರ್ಥಿಯನ್ನು ಥಳಿಸಿ ಕೊಂದ ಶಿಕ್ಷಕ!

Murder: ಹಾಡಹಗಲೇ ಮಹಿಳೆಯ ಬರ್ಬರ ಹತ್ಯೆ; ಬೆಳ್ಳಿ ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು

Published On - 3:11 pm, Thu, 21 October 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ