Viral Video: ನೆಟ್ಟಿಗರ ಮನಸೂರೆಗೊಂಡ ಹಾವಿನ ರೂಪದ ಕೇಕ್; ಏನಿದು ಸಮಾಚಾರ? ವಿಡಿಯೋ ನೋಡಿ

Cake: ಪ್ರಸ್ತುತ ಕೇಕ್ ತಯಾರಿಕೆ ಎನ್ನುವುದು ಒಂದು ಕಲೆಯಾಗಿದೆ. ಅಂತಹ ವಿಶಿಷ್ಟ ಕೇಕ್ ಕಲಾಕೃತಿಗಳನ್ನು ತಯಾರಿಸುವ ಅಮೇರಿಕಾ ಮೂಲದ ನಟಾಲಿ ಸೈಫರ್ಟ್ ಅವರ ವಿವಿಧ ಕೇಕ್ ಕಲಾಕೃತಿಗಳ ವಿಡಿಯೋ ಇಲ್ಲಿದೆ.

Viral Video: ನೆಟ್ಟಿಗರ ಮನಸೂರೆಗೊಂಡ ಹಾವಿನ ರೂಪದ ಕೇಕ್; ಏನಿದು ಸಮಾಚಾರ? ವಿಡಿಯೋ ನೋಡಿ
ಹಾವಿನ ಕಲಾಕೃತಿಯ ಕೇಕ್
Follow us
TV9 Web
| Updated By: shivaprasad.hs

Updated on: Oct 21, 2021 | 1:50 PM

ಜಗತ್ತಿನಲ್ಲಿ ಪ್ರಸ್ತುತ ಕೇಕ್ ಉದ್ಯಮವು ಬಹಳ ದೊಡ್ಡ ಮಾರುಕಟ್ಟೆಯಾಗಿದೆ. ಇದರ ಜೊತೆಜಹೊತೆಗೆ ಹೊಸ ಹೊಸ ಮಾದರಿಯ ಕೇಕ್​ಗಳ ಆವಿಷ್ಕಾರವೂ ನಿರಂತರವಾಗಿ ಸಾಗಿದೆ. ಇದರ ಜೊತೆಜೊತೆಗೆ ಅಚ್ಚರಿಯ ಸಂಗತಿಯೆಂದರೆ ಕೇಕ್ ತಯಾರಿಕೆ ಎನ್ನುವುದು ಪ್ರಸ್ತುತ ಒಂದು ಕಲಾಪ್ರಕಾರವೂ ಆಗಿದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಕೇಕ್ ಪ್ರಸ್ತುತ ಮದುವೆ, ಜನ್ಮದಿನಗಳಿಂದ ಹಿಡಿದು ಪ್ರತಿಯೊಂದು ಸಂತಸದ ಕ್ಷಣಗಳಲ್ಲಿ ಜೊತೆಯಾಗಿದೆ. ಇಂತಹ ಕೇಕ್​ಗಳನ್ನು ಕಲಾಕೃತಿ ರೂಪದಲ್ಲಿ ತಯಾರಿಸುವ ಬಾಣಸಿಗರೂ ಇದ್ದಾರೆ. ಪ್ರಸ್ತುತ ಅಂತರ್ಜಾಲದಲ್ಲಿ ಹಾವಿನ ಮಾದರಿಯ ಕೇಕ್ ಎಲ್ಲರ ಗಮನ ಸೆಳೆದಿದೆ.

ಈ ಕೇಕ್​ ಅನ್ನು ಸುಮ್ಮನೆ ಜನರ ಮುಂದಿಟ್ಟರೆ ಅದು ನಿಜವಾದ ಹಾವಲ್ಲ ಎಂದು ಹೇಳುವ ಹಾಗೆಯೇ ಇಲ್ಲ. ಆದರೆ ಚಾಕು ತೆಗೆದುಕೊಂಡು ಅದನ್ನು ಕಟ್ ಮಾಡಿದರೆ, ಬಾಯಲ್ಲಿ ನೀರೂರಿಸುವ ಕೇಕ್ ನಿಮಗೆ ಲಭ್ಯವಾದೀತು. ಇದನ್ನು ವಿಡಿಯೋ ಮುಖಾಂತರ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಬೆರಗಾಗಿದ್ದಾರೆ. ಇದಕ್ಕೆ ಭರಪೂರ ಮೆಚ್ಚುಗೆಯ ಕಾಮೆಂಟ್​ಗಳೂ ಹರಿದುಬಂದಿದ್ದು, ಕೇಕ್​ನಲ್ಲೂ ಕಲೆಯ ನೈಪುಣ್ಯ ತೋರಿದ ತಯಾರಕರಿಗೆ ಭೇಷ್ ಎಂದಿದ್ದಾರೆ.

ವಿಡಿಯೋ ಇಲ್ಲಿದೆ:

ಅಮೇರಿಕಾ ಮೂಲದ ನಟಾಲಿ ಸೈಫರ್ಟ್ ಈ ಕೇಕ್​ಗಳನ್ನು ತಯಾರಿಸಿದ್ದಾರೆ. ಪ್ರತೀ ವಾರ ಹೊಸದೊಂದು ಮಾದರಿಯ ಕೇಕ್​ನ ವಿಡಿಯೋವನ್ನು ಅವರು ಹಂಚಿಕೊಳ್ಳುತ್ತಾರೆ. ಇದಕ್ಕೂ ಮುನ್ನ ಅವರು ಬ್ರಷ್ ಮಾದರಿಯ ಕೇಕ್ ವಿಡಿಯೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಅಂತಹ ಕೇಕ್ ಅನ್ನು ಹೇಗೆ ತಯಾರಿಸಿದ್ದೆ ಎನ್ನುವುದನ್ನೂ ವಿವರಿಸಿದ್ದರು. ಆ ವಿಡಿಯೋ ಇಲ್ಲಿದೆ.

ಸಾಮಾಜಿಕ ಜಾಲತಾಣದಲ್ಲಿ ನಟಾಲಿಯವರ ಕೇಕ್ ಕಲಾಕೃತಿಗಳಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಅವರ ಕೌಶಲವನ್ನು ಕೊಂಡಾಡುತ್ತಾ, ಮನೆಯಲ್ಲಿ ಇಂತಹ ಹೊಸ ಮಾದರಿಯ ಕೇಕ್​ಗಳನ್ನು ತಯಾರಿಸಲು ಪ್ರಯತ್ನಿಸುವ ಜನರೂ ಇದ್ದಾರೆ. ಆದರೆ ಹಾವಿನ ಮಾದರಿಯ ಕೇಕ್​ಗೆ ಅದನ್ನು ಕತ್ತರಿಸುವಾಗ ಕಸಿವಿಸಿಯಾಯಿತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?

ಇದನ್ನೂ ಓದಿ:

Shocking News: 10 ವರ್ಷದಿಂದ ದಿನವೂ ಗಂಡನ ಚಿತಾಭಸ್ಮ ತಿನ್ನುತ್ತಾಳೆ ಈ ಮಹಿಳೆ!

10 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ವಸತಿ ನಿಲಯ; ಉದ್ಘಾಟನೆಗೂ ಮುನ್ನವೇ ಕುಸಿದುಬಿತ್ತು ಶಾಲೆ ಕಾಂಪೌಂಡ್

ಹೆಂಡತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು!

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ