10 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ವಸತಿ ನಿಲಯ; ಉದ್ಘಾಟನೆಗೂ ಮುನ್ನವೇ ಕುಸಿದುಬಿತ್ತು ಶಾಲೆ ಕಾಂಪೌಂಡ್

ಮಂಡ್ಯ ತಾಲೂಕಿನ ತುಂಬುಕೆರೆ ಗ್ರಾಮದಲ್ಲಿ ಲೋಕಾರ್ಪಣೆಗೆಂದು ಸಿದ್ಧವಾಗಿದ್ದ ಹಿಂದುಳಿದ ವರ್ಗಗಳ ಮುರಾರ್ಜಿ ದೇಸಾಯಿ ವಸತಿ ನಿಲಯ ಕಳಪೆ ಕಾಮಗಾರಿಯಿಂದ ನಿರ್ಮಾಣವಾಗಿದೆ ಎಂದು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

10 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ವಸತಿ ನಿಲಯ; ಉದ್ಘಾಟನೆಗೂ ಮುನ್ನವೇ ಕುಸಿದುಬಿತ್ತು ಶಾಲೆ ಕಾಂಪೌಂಡ್
10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ವಸತಿ ನಿಲಯ; ಉದ್ಘಾಟನೆಗೂ ಮುನ್ನವೇ ಕುಸಿದುಬಿದ್ದ ಶಾಲೆ ಕಾಂಪೌಂಡ್

ಮಂಡ್ಯ: ಮಂಡ್ಯ ತಾಲೂಕಿನ ತುಂಬುಕೆರೆ ಗ್ರಾಮದಲ್ಲಿ ಉದ್ಘಾಟನೆಗೂ ಮುನ್ನವೇ ಶಾಲೆಯ ಕಾಂಪೌಂಡ್ ಕುಸಿದುಬಿದ್ದ ಘಟನೆ ನಡೆದಿದೆ. ರಾತ್ರಿ ಸುರಿದ ಧಾರಾಕಾರ ಮಳೆಗೆ ಗೋಡೆ ಕುಸಿದುಬಿದ್ದಿದೆ. ಕಳಪೆ ಕಾಮಗಾರಿಯಿಂದ ಗೋಡೆ ಕುಸಿದಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಬುಧವಾರ ರಾತ್ರಿ ಭಾರೀ ಮಳೆಯಾದ ಹಿನ್ನೆಲೆ ಲೋಕಾರ್ಪಣೆಗೆ ಮುನ್ನವೇ ಶಾಲಾ ಕಾಂಪೌಂಡ್ ಕುಸಿದುಬಿದ್ದಿದೆ. ಮಂಡ್ಯ ತಾಲೂಕಿನ ತುಂಬುಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂದಾಜು 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ವಸತಿ ಶಾಲೆ ಇದಾಗಿದೆ.

ಲೋಕಾರ್ಪಣೆಗೆಂದು ಸಿದ್ಧವಾಗಿದ್ದ ಹಿಂದುಳಿದ ವರ್ಗಗಳ ಮುರಾರ್ಜಿ ದೇಸಾಯಿ ವಸತಿ ನಿಲಯ ಕಳಪೆ ಕಾಮಗಾರಿಯಿಂದ ನಿರ್ಮಾಣವಾಗಿದೆ ಎಂದು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಖಡಕ್ IPS ಅಧಿಕಾರಿಗೆ ಬೆದರಿದರಾ ಮಂಡ್ಯ ರಾಜಕಾರಣಿಗಳು?

ಮಂಡ್ಯ: ಬುಧವಾರ ರಾಜ್ಯ ಸರ್ಕಾರ 9 ಪೊಲೀಸ್​ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ. ಆದರೆ ಈ ಮಧ್ಯೆ ಒಂದು ವರ್ಗಾವಣೆಗೆ ತಡೆ ನೀಡಿದೆ. ನಿನ್ನೆಯಷ್ಟೇ ಮಂಡ್ಯ ಜಿಲ್ಲೆಗೆ ಹೊಸ ಪೊಲೀಸ್​ ವರಿಷ್ಠಾಧಿಕಾರಿಯನ್ನು (ಎಸ್‌ಪಿ) ನೇಮಿಸಿ ಆದೇಶ ಹೊರಡಿಸಿದೆ. ಅದರ ಬೆನ್ನಲ್ಲೇ ಅವರಿಗೆ ಅಧಿಕಾರ ಸ್ವೀಕರಿಸದಂತೆ ಇಂದು ದಿಢೀರ್ ಮೌಖಿಕ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ನಿನ್ನೆ ಮಂಡ್ಯಕ್ಕೆ ವರ್ಗಾವಣೆಗೊಂಡಿರುವ ಖಡಕ್ IPS ಅಧಿಕಾರಿಗೆ ಬೆದರಿದರಾ ಸ್ಥಳೀಯ ರಾಜಕಾರಣಿಗಳು? ವರ್ಗಾವಣೆಯಾದರೂ ಮಂಡ್ಯಕ್ಕೆ ಬರಲು ಪ್ರಭಾವಿಗಳು ಬಿಡುತ್ತಿಲ್ಲವಾ? ಎಂಬ ಅನುಮಾನಗಳು ಮೂಡಿವೆ.

ಇನ್ನೂ ಎರಡು ದಿನಗಳ ಕಾಲ ಕಾದು ನೋಡುವಂತೆ ವರ್ಗಾವಣೆಗೊಂಡಿರುವ IPS ಅಧಿಕಾರಿ ಸುಮನ್ ಡಿ. ಪನ್ನೇಕರ್ ಅವರಿಗೆ DPAR ವಿಭಾಗದಿಂದ ಸೂಚನೆ ನೀಡಲಾಗಿದೆಯಂತೆ. ಸರ್ಕಾರದ DPAR ವಿಭಾಗದಿಂದ ದೂರವಾಣಿ ಕರೆ ಮಾಡಿ, ಈ ಸಂದೇಶ ತಲುಪಿಸಲಾಗಿದೆಯಂತೆ. ಡಾ. ಸುಮನ್ ಡಿ. ಪನ್ನೇಕರ್ ಪ್ರಸ್ತುತ ಮೈಸೂರು ಪೊಲೀಸ್ ಅಕಾಡೆಮಿಯಲ್ಲಿದ್ದಾರೆ.

ಏನಿದು ವರ್ಗಾವಣೆ ಕಸರತ್ತು!?

mandya politicians stop the transfer of ips suman pannekar as mandya superintendent of police

ಡಾ. ಸುಮನ್ ಡಿ. ಪನ್ನೇಕರ್ ಪ್ರಸ್ತುತ ಮೈಸೂರು ಪೊಲೀಸ್ ಅಕಾಡೆಮಿಯಲ್ಲಿದ್ದಾರೆ

ಮಹಿಳಾ ಅಧಿಕಾರಿ ಎಂಬ ಒಂದು ನೆಪ ಮುಂದೊಡ್ಡಿದ್ದರೆ, ಮತ್ತೊಂದು ಡೈರೆಕ್ಟ್ ಐಪಿಎಸ್ ಆದ ಸುಮನ್ ಅವರು (Dr Suman D Pennekar) ಖಡಕ್ ಪೊಲೀಸ್ ಆಫೀಸರ್ ಎಂದು ಜನಜನಿತರಾಗಿದ್ದಾರೆ. ಹಾಗಾಗಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಸ್ಥಳೀಯರು ಬೇರೊಬ್ಬ ಅಧಿಕಾರಿಗೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಇಡೀ ರಾತ್ರಿ ಕಾರ್ಯತಂತ್ರ ನಡೆಸಿರುವ ಮಂಡ್ಯ ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗ ಸರ್ಕಾರದ ಮೇಲೆ ಪ್ರಭಾವ ಬೀರಿ, ಬೇರೆ ಅಧಿಕಾರಿ ನಿಯೋಜನೆಗೆ ಕಸರತ್ತು ನಡೆಸಿದೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ನಿನ್ನೆಯ ತನ್ನ ಆದೇಶಕ್ಕೆ ಅಂಟಿಕೊಳ್ಳುತ್ತದಾ? ಅಥವಾ ಪ್ರಭಾವಿಗಳ ಒತ್ತಡಕ್ಕೆ ಮಣಿಯುತ್ತಾ ಎಂಬುದು ಕಾದು ನೋಡಬೇಕಿದೆ.

(Morarji desai residential school compound wall collapse in mandya even before inauguration)

Click on your DTH Provider to Add TV9 Kannada