ತಂದೆ-ತಾಯಿ ಕನಸು ಈಡೇರಿಸಲು ಮಹತ್ವದ ನಿರ್ಧಾರ ತೆಗೆದುಕೊಂಡ ಕಿರುತೆರೆ ನಟಿ ಚಂದನಾ
ಚಂದನಾ ಅವರು ಬಿಗ್ ಬಾಸ್ಗೆ ಎಂಟ್ರಿ ಪಡೆದ ನಂತರ ಜನರಿಗೆ ಸಾಕಷ್ಟು ಪರಿಚಯವಾದರು. ಹೀಗಾಗಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರಿಗೆ ಲಕ್ಷಾಂತರ ಹಿಂಬಾಲಕರಿದ್ದಾರೆ.
‘ಕನ್ನಡ ಬಿಗ್ ಬಾಸ್ ಸೀಸನ್ 7’ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ನಟಿ ಚಂದನಾ ಅನಂತಕೃಷ್ಣ. ಆ ನಂತರ ಅವರು ಕಲರ್ಸ್ ಕನ್ನಡದ ಕಾರ್ಯಕ್ರಮವೊಂದಕ್ಕೆ ಆ್ಯಂಕರಿಂಗ್ ಕೂಡ ಮಾಡಿದ್ದರು. ಸದ್ಯ, ಅವರು ‘ಹೂ ಮಳೆ’ ಧಾರಾವಾಹಿಯಲ್ಲಿ ಲಹರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜನಮೆಚ್ಚುಗೆ ಪಡೆದುಕೊಂಡಿದೆ. ಈಗ ಚಂದನಾ ತಂದೆ-ತಾಯಿ ಆಸೆ ಈಡೇರಿಸಲು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಚಂದನಾ ಅವರು ಬಿಗ್ ಬಾಸ್ಗೆ ಎಂಟ್ರಿ ಪಡೆದ ನಂತರ ಜನರಿಗೆ ಸಾಕಷ್ಟು ಪರಿಚಯವಾದರು. ಹೀಗಾಗಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರಿಗೆ ಲಕ್ಷಾಂತರ ಹಿಂಬಾಲಕರಿದ್ದಾರೆ. ಅವರು ಭರತನಾಟ್ಯ ಕೂಡ ಕಲಿತಿದ್ದಾರೆ. ಈಗ ಅದರಲ್ಲೇ ಮುಂದುವರಿಯಲು ಅವರು ನಿರ್ಧರಿಸಿದ್ದಾರೆ. ಇದು ಅವರ ಜೀವನದ ಮಹತ್ವದ ಹೆಜ್ಜೆ ಆಗಿರಲಿದೆ. ಈ ಬಗ್ಗೆ ಚಂದನಾ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಭರತನಾಟ್ಯ ಪ್ರ್ಯಾಕ್ಟೀಸ್ ಮಾಡಿದ ನಂತರದ ಫೋಟೋವನ್ನು ಚಂದನಾ ಹಂಚಿಕೊಂಡಿದ್ದಾರೆ. ‘ಇಂದು ಜೀವನದ ಹೊಸದೊಂದು ಹೆಜ್ಜೆ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ. ಭರತನಾಟ್ಯದಲ್ಲಿ ಮುಂದುವರೆಯಬೇಕು ಎಂಬುದು ಅಪ್ಪ-ಅಮ್ಮನ ಕನಸು. ನನ್ನ ಕನಸು ಕೂಡ. ಅದರಂತೆಯೇ ಇವತ್ತು ಎಂಪಿಎ ( Masters in Performing Arts) ಮೊದಲನೇ ಪ್ರ್ಯಾಕ್ಟಿಕಲ್ ಕ್ಲಾಸ್ನಲ್ಲಿ ಭಾಗವಹಿಸಿದ ಖುಷಿ ನನ್ನದು. ಎಂದಿನಂತೆಯೇ, ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ’ ಎಂದು ಅವರು ಬರೆದುಕೊಂಡಿದ್ದಾರೆ.
‘ಹೂ ಮಳೆ’ ಧಾರಾವಾಹಿಯಲ್ಲಿ ಲಹರಿ ಪಾತ್ರದಲ್ಲಿ ಚಂದನಾ ಕಾಣಿಸಿಕೊಂಡಿದ್ದಾರೆ. ಯದುವೀರ್ನನ್ನು ಲಹರಿ ಮದುವೆ ಆಗಿದ್ದಾಳೆ. ಈಗ ಚಂದನಾಗೆ ಮಗು ಕೂಡ ಆಗಿದೆ. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿ ಈ ಬಗ್ಗೆ ಪ್ರೋಮೋ ಹಂಚಿಕೊಂಡಿತ್ತು. ಧಾರಾವಾಹಿ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಬಿಗ್ ಬಾಸ್ ಪ್ರಸಾರವಾಗುತ್ತಿದ್ದ ಸಂದರ್ಭದಿಂದ ಈ ಧಾರಾವಾಹಿ ಸಂಜೆ 5:30ಕ್ಕೆ ಪ್ರಸಾರವಾಗೋಕೆ ಪ್ರಾರಂಭವಾಯಿತು. ಇದರಿಂದ ಧಾರಾವಾಹಿಗೆ ವೀಕ್ಷಕರ ಸಂಖ್ಯೆ ಕಡಿಮೆ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಜನ ಮೆಚ್ಚಿಕೊಂಡ ‘ಕನ್ನಡತಿ’ ಜೋಡಿಗೆ ಸಿಕ್ತು ಅವಾರ್ಡ್; ಸಂಭ್ರಮಿಸಿದ ಕಿರಣ್ ರಾಜ್, ರಂಜನಿ ರಾಘವನ್