AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

13 ವರ್ಷಗಳ ಹಿಂದೆ ಜೆನಿಲಿಯಾ ಕೆನ್ನೆಗೆ ಹೊಡೆದಿದ್ದ ಆಯಾಜ್; ಕೊನೆಗೂ ಸೇಡು ತೀರಿಸಿದ ರಿತೇಶ್: ತಮಾಷೆಯ ವಿಡಿಯೋ ನೋಡಿ

Genelia Deshmukh | Riteish Deshmukh: ರಿತೇಶ್ ದೇಶಮುಖ್ ಕೊನೆಗೂ 13 ವರ್ಷಗಳ ಸೇಡೊಂದನ್ನು ತೀರಿಸಿದ್ದಾರೆ. ಇದು ಅಭಿಮಾನಿಗಳಿಗೂ ಖುಷಿ ತಂದಿದೆ. ಏನಿದು ಪ್ರಕರಣ? ಮುಂದೆ ಓದಿ.

13 ವರ್ಷಗಳ ಹಿಂದೆ ಜೆನಿಲಿಯಾ ಕೆನ್ನೆಗೆ ಹೊಡೆದಿದ್ದ ಆಯಾಜ್; ಕೊನೆಗೂ ಸೇಡು ತೀರಿಸಿದ ರಿತೇಶ್: ತಮಾಷೆಯ ವಿಡಿಯೋ ನೋಡಿ
ರಿತೇಶ್ ಹಾಗೂ ಆಯಾಜ್ ಖಾನ್
TV9 Web
| Edited By: |

Updated on:Oct 24, 2021 | 12:37 PM

Share

ಬಾಲಿವುಡ್ ನಟ ರಿತೇಶ್ ದೇಶಮುಖ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಹಮಚಿಕೊಂಡು ವಿಡಿಯೋವೊಂದು ನೆಟ್ಟಿಗರ ಮನಗೆದ್ದಿರುವುದಲ್ಲದೇ, ಹದಿಮೂರು ವರ್ಷಗಳ ಸೇಡು ಕೊನೆಗೂ ತೀರಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಅದೇನು ಸೇಡು ಅಂತೀರಾ? ಬಹಳ ಅಚ್ಚರಿಯ ಆದರೆ ತಮಾಷೆಯ ಘಟನೆ ಇದು. ರಿತೇಶ್ ಪತ್ನಿ ಜೆನಿಲಿಯಾ ಮದುವೆಗೂ ಮುನ್ನ ಟಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಅವರ ವೃತ್ತಿಜೀವನದ ಒಂದು ಪ್ರಮುಖ ಚಿತ್ರ ‘ಜಾನೆ ತೂ ಯಾ ಜಾನೆ ನಾ’. ಆ ಚಿತ್ರದಲ್ಲಿ ಜೆನಿಲಿಯಾ ಅದಿತಿ ಎಂಬ ಪಾತ್ರದಲ್ಲಿ ನಟಿಸಿದ್ದರು. ಸ್ನೇಹ ಹಾಗೂ ಪ್ರೀತಿಯ ಕುರಿತಾದ ಚಿತ್ರ ಅದಾಗಿತ್ತು.

‘ಜಾನೆ ತೂ ಯಾ ಜಾನೆ ನಾ’ ಚಿತ್ರದಲ್ಲಿ ಅಯಾಜ್ ಖಾನ್ ಪ್ರತಿನಾಯಕನಾಗಿ ನಟಿಸಿದ್ದರು. ಅದರಲ್ಲಿ ಅವರು ಅದಿತಿಯ ಪ್ರಿಯಕರ ಸುಶಾಂತ್ ಮೋದಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಅದಿತಿ ಹಾಗೂ ಜೈ (ಇಮ್ರಾನ್ ಖಾನ್) ನಡುವೆ ಇರುವ ಒಳ್ಳೆಯ ಸ್ನೇಹವನ್ನು ತಪ್ಪಾಗಿ ಅರ್ಥಸಿಕೊಂಡಿದ್ದ ಸುಶಾಂತ್, ಪಾರ್ಕಿಂಗ್ ಸ್ಥಳದಲ್ಲಿಯೇ ಅದಿತಿಯ ಕೆನ್ನೆಗೆ ಹೊಡೆಯುವ ದೃಶ್ಯವೊಂದಿತ್ತು. ಈ ದೃಶ್ಯ ಎಷ್ಟು ಗಾಢವಾಗಿತ್ತೆಂದರೆ, ಆ ಚಿತ್ರ 2008ರಲ್ಲಿ ಬಿಡುಗಡೆಯಾಗಿ ಇಷ್ಟು ವರ್ಷ ಕಳೆದರೂ ಈಗಲೂ ಜನ ಸುಶಾಂತ್ ಪಾತ್ರಕ್ಕೆ ಬೈಯುತ್ತಾರಂತೆ. ಇದನ್ನು ಸ್ವತಃ ಆಯಾಜ್ ಸಂದರ್ಶನವೊಂದರಲ್ಲಿ ಹೇಳುತ್ತಾ, ಅವರಿಗೆ ಬರುವ ಸಂದೇಶಗಳನ್ನು ತೋರಿಸಿದ್ದರು. ‘ನೀವು ಆ ಚಿತ್ರದಲ್ಲಿ ಅದಿತಿಗೆ ಹೊಡೆದದ್ದನ್ನು ದೇವರು ಕ್ಷಮಿಸಬಹುದು. ಆದರೆ ನಾನು ಕ್ಷಮಿಸುವುದಿಲ್ಲ’- ಈ ರೀತಿಯಾದ ಕಾಮೆಂಟ್​ಗಳು ಆಯಾಜ್​ಗೆ ಬರುತ್ತಲೇ ಇರುತ್ತವಂತೆ. ಇದೀಗ ಅಂತಹ ಚಿತ್ರಪ್ರೇಮಿಗಳಿಗೆ ರಿತೇಶ್ ನ್ಯಾಯದೊರಕಿಸಿದ್ದಾರೆ.

ಪ್ರಸ್ತುತ ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ ಜೆನಿಲಿಯಾರ ನಿಜ ಪತಿ ರಿತೇಶ್ ಅದಿತಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅದರಲ್ಲಿ ಅವರು ಆಯಾಜ್​ರನ್ನು ಹಿಡಿದುಕೊಂಡು ಹೊಡೆಯುತ್ತಿದ್ಧಾರೆ. ಈ ವಿಡಿಯೋವನ್ನು ಅಯಾಜ್ ಸ್ವತಃ ಹಂಚಿಕೊಂಡಿದ್ದು, ‘ಈಗಲಾದರೂ ದ್ವೇಷ ನಿಲ್ಲಬಹುದೇ?’ ಎಂದು ಬರೆದುಕೊಂಡಿದ್ದಾರೆ. ಈ ತಮಾಷೆಯ ವಿಡಿಯೋ ನೋಡಿದ ಫ್ಯಾನ್ಸ್ ಸಖತ್ ಎಂಜಾಯ್ ಮಾಡಿದ್ದು, ರಿತೇಶ್ ಹಾಗೂ ಅಯಾಜ್ ಕಾಮಿಡಿಗೆ ಮನಸೋತಿದ್ದಾರೆ. ಕೆಲವರು ಅಂತೂ ಅದಿತಿಗೆ ನ್ಯಾಯ ದೊರಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

View this post on Instagram

A post shared by Ayaz Khan (@ayazkhan701)

ರಿತೇಶ್ ಹಾಗೂ ಜೆನಿಲಿಯಾ 2012ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಕ್ರಿಯರಾಗಿರುವ ಈ ಜೋಡಿ, ಲಾಕ್​ಡೌನ್ ಸಮಯದಲ್ಲಿ ಸಣ್ಣ ಸಣ್ಣ ವಿಡಿಯೋಗಳ ಮುಖಾಂತರ ಜನರನ್ನು ರಂಜಿಸಿತ್ತು. ಸದ್ಯ ಫ್ಲಿಪ್​ಕಾರ್ಟ್ ವಿಡಿಯೋದಲ್ಲಿ ಶೋವೊಂದನ್ನು ಈರ್ವರೂ ನಡೆಸಿಕೊಡುತ್ತಿದ್ದಾರೆ.

ಇದನ್ನೂ ಓದಿ:

ಜೈಲಲ್ಲಿ ರಾಮ-ಸೀತೆಯ ಪುಸ್ತಕ ಓದುತ್ತಿರುವ ಆರ್ಯನ್​ ಖಾನ್​; ಜಾಮೀನು ಸಿಗದೇ ಸ್ಟಾರ್​ ಪುತ್ರ ಕಂಗಾಲು

Shilpa Shetty: ಮಕ್ಕಳು ಹಾಗೂ ತಾಯಿಯೊಂದಿಗೆ ಶಿಲ್ಪಾ ಶೆಟ್ಟಿ ಭರ್ಜರಿ ಸುತ್ತಾಟ; ರಾಜ್ ಕುಂದ್ರಾ ಎಲ್ಲಿ ಎಂದು ಪ್ರಶ್ನಿಸಿದ ಫ್ಯಾನ್ಸ್

Published On - 12:35 pm, Sun, 24 October 21