AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋರಾ ಫತೇಹಿಗೆ ಗಿಫ್ಟ್​ ಆಗಿ ಸಿಕ್ಕಿತ್ತು ಐಷಾರಾಮಿ ಕಾರು; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿಗೆ ಸಂಕಷ್ಟ

ಉದ್ಯಮಿಗಳಿಗೆ 200 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಸುಕೇಶ್​ ಚಂದ್ರಶೇಖರ್​ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ನೋರಾ​ ಮೇಲೂ ಅನುಮಾನ ಮೂಡಿದೆ.

ನೋರಾ ಫತೇಹಿಗೆ ಗಿಫ್ಟ್​ ಆಗಿ ಸಿಕ್ಕಿತ್ತು ಐಷಾರಾಮಿ ಕಾರು; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿಗೆ ಸಂಕಷ್ಟ
ನೋರಾ ಫತೇಹಿ
TV9 Web
| Edited By: |

Updated on: Oct 24, 2021 | 2:37 PM

Share

ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಅನೇಕ ನಟಿಯರ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಜನಪ್ರಿಯ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರನ್ನು ಈ ಪ್ರಕರಣದಲ್ಲಿ ವಿಚಾರಣೆ ಮಾಡಲಾಗಿದೆ. ಇತ್ತೀಚೆಗೆ ನೋರಾ ಫತೇಹಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಕರೆಸಿಕೊಂಡಿದ್ದರು. ಈ ಪ್ರಕರಣದ ಕಿಂಗ್​ ಪಿನ್​ ಸುಕೇಶ್​ ಚಂದ್ರಶೇಖರ್​ ಬಳಿಯಿಂದ ನೋರಾ ಅವರು ಕಾರು ಗಿಫ್ಟ್​ ಆಗಿ ಪಡೆದಿದ್ದರು ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಇದರ ಅಸಲಿಯತ್ತು ವಿಚಾರಣೆಯಿಂದ ಹೊರಬರಬೇಕಿದೆ.

ಉದ್ಯಮಿಗಳಿಗೆ 200 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಸುಕೇಶ್​ ಚಂದ್ರಶೇಖರ್​ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ನೋರಾ​ ಮೇಲೂ ಅನುಮಾನ ಮೂಡಿದೆ. ನೋರಾ ಜತೆ ಮುಖ್ಯ ಆರೋಪಿ ಸುಕೇಶ್​ ಚಂದ್ರಶೇಖರ್​ ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ. ಇಬ್ಬರ ನಡುವಿನ ವ್ಯವಹಾರ ಯಾವ ರೀತಿ ಇತ್ತು? 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ನೋರಾ​ ಕೈವಾಡ ಇದೆಯೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಈ ಮಧ್ಯೆ ನೋರಾ ವಿರುದ್ಧ ಸ್ಫೋಟಕ ಆರೋಪ ಕೇಳಿ ಬಂದಿದೆ.

ಸುಕೇಶ್​ ಪರ ವಕೀಲ ಅನಂತ್​ ಮಲ್ಲಿಕ್​ ವಾದ ಮಂಡಿಸುತ್ತಿದ್ದಾರೆ. ಅವರು ನೋರಾ ಬಗ್ಗೆ ಆರೋಪ ಒಂದನ್ನು ಮಾಡಿದ್ದಾರೆ. ನೋರಾ ಫತೇಹಿ ಅವರು ಸುಕೇಶ್​ ಅವರಿಂದ ಐಷಾರಾಮಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂದು ಮಲಿಕ್ ಈಗ ಹೇಳಿಕೊಂಡಿದ್ದಾರೆ.

ಸುಕೇಶ್​ ಅವರನ್ನು ಶನಿವಾರ ದೆಹಲಿ ಕೋರ್ಟ್​ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಅವರು, ‘ನೋರಾಗೆ ನಾನು ಕಾರನ್ನು ಉಡುಗೊರೆಯಾಗಿ ನೀಡಿದ್ದೇನೆ. ನೀವೇಕೆ ಅವರನ್ನು ಪ್ರಶ್ನಿಸುವುದಿಲ್ಲ’ ಎಂದು ಕೇಳಿದ್ದಾರೆ. ಈ ಹೇಳಿಕೆಯಿಂದ ನಟಿಗೆ ಸಾಕಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಸುಕೇಶ್​ ಚಂದ್ರಶೇಖರ್ ವಿರುದ್ಧ ವಂಚನೆ ಆರೋಪ ಇದೆ. ಹೀಗಾಗಿ, ಒಡೆತನದಲ್ಲಿ ಇದ್ದ ಚೆನ್ನೈನ ಬಂಗಲೆ, 82 ಲಕ್ಷ ರೂ. ಹಣ ಹಾಗೂ 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಪುಷ್ಪ’ ಚಿತ್ರದ ಒಂದೇ ಹಾಡಿನಲ್ಲಿ ಡ್ಯಾನ್ಸ್​ ಮಾಡಲು 2 ಕೋಟಿ ರೂ. ಸಂಬಳ ಕೇಳಿದ ನೋರಾ ಫತೇಹಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೋರಾ ಫತೇಹಿ, ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸಂಕಷ್ಟ

Follow Us
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು
ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು