‘ಪುಷ್ಪ’ ಚಿತ್ರದ ಒಂದೇ ಹಾಡಿನಲ್ಲಿ ಡ್ಯಾನ್ಸ್​ ಮಾಡಲು 2 ಕೋಟಿ ರೂ. ಸಂಬಳ ಕೇಳಿದ ನೋರಾ ಫತೇಹಿ

ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಚಿತ್ರ ಡಿಸೆಂಬರ್​ 17ರಂದು ಬಿಡುಗಡೆ ಆಗಲಿದೆ. ಆ ಚಿತ್ರದಲ್ಲಿನ ಒಂದು ಐಟಂ ಸಾಂಗ್​ನಲ್ಲಿ ನರ್ತಿಸುವಂತೆ ನೋರಾಗೆ ಆಫರ್​ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

‘ಪುಷ್ಪ’ ಚಿತ್ರದ ಒಂದೇ ಹಾಡಿನಲ್ಲಿ ಡ್ಯಾನ್ಸ್​ ಮಾಡಲು 2 ಕೋಟಿ ರೂ. ಸಂಬಳ ಕೇಳಿದ ನೋರಾ ಫತೇಹಿ
ನೋರಾ ಫತೇಹಿ, ರಶ್ಮಿಕಾ ಮಂದಣ್ಣ

ಬಾಲಿವುಡ್​ ನಟಿ, ಡ್ಯಾನ್ಸರ್​ ನೋರಾ ಫತೇಹಿ ಅವರ ಜನಪ್ರಿಯತೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಹಿಂದಿ ಸಿನಿಮಾಗಳ ಅನೇಕ ಸೂಪರ್​ ಹಿಟ್​ ಐಟಂ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡುವ ಮೂಲಕ ನೋರಾ ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ದಕ್ಷಿಣ ಭಾರತದ ಕೆಲವು ಸಿನಿಮಾಗಳಲ್ಲೂ ಅವರು ಡ್ಯಾನ್ಸ್​ ಮಾಡಿದ್ದಾರೆ. ಇತ್ತೀಚೆಗೆ ‘ಪುಷ್ಪ’ ಚಿತ್ರತಂಡ ಕೂಡ ನೋರಾ ಅವರ ಕಾಲ್​ಶೀಟ್​ ಕೇಳಲು ಹೋಗಿತ್ತು ಎಂಬ ಮಾತು ಕೇಳಿಬರುತ್ತಿದೆ. ಆದರೆ ನೋರಾ ಡಿಮ್ಯಾಂಡ್​ ಮಾಡಿದ ಸಂಭಾವನೆ ಮೊತ್ತ ಕೇಳಿ ನಿರ್ಮಾಪಕರು ಸುಸ್ತ್​ ಆಗಿದ್ದಾರೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಚಿತ್ರ ಡಿಸೆಂಬರ್​ 17ರಂದು ಬಿಡುಗಡೆ ಆಗಲಿದೆ. ಆ ಚಿತ್ರದಲ್ಲಿನ ಒಂದು ಐಟಂ ಸಾಂಗ್​ನಲ್ಲಿ ನರ್ತಿಸುವಂತೆ ನೋರಾಗೆ ಆಫರ್​ ನೀಡಲಾಗಿದೆ. ಆದರೆ ಅವರು ಬರೋಬ್ಬರಿ 2 ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಅಷ್ಟು ದೊಡ್ಡ ಮೊತ್ತವನ್ನು ನೀಡಲು ನಿರ್ಮಾಪಕರು ಹಿಂದೇಟು ಹಾಕುವ ಸಾಧ್ಯತೆ ಕೂಡ ಇದೆ. ಅದಕ್ಕೂ ಮುನ್ನ ಪೂಜಾ ಹೆಗ್ಡೆ ಮತ್ತು ದಿಶಾ ಪಟಾಣಿಗೆ ಈ ಆಫರ್​ ಹೋಗಿತ್ತಂತೆ. ಆದರೆ ಆ ನಟಿಯರಿಬ್ಬರೂ ಒಪ್ಪಿಕೊಂಡಿಲ್ಲ ಎನ್ನುತ್ತಿವೆ ಮೂಲಗಳು.

ಇತ್ತೀಚೆಗೆ ನೋರಾ ಫತೇಹಿ ಧರಿಸಿದ್ದ ಒಂದು ಡ್ರೆಸ್​ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಕಲರ್​ಫುಲ್​ ಆಗಿ ನಡೆದ ಒಂದು ಫ್ಯಾಷನ್​ ಶೋನಲ್ಲಿ ನೋರಾ ಫತೇಹಿ ಭಾಗವಹಿಸಿದ್ದರು. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದ ಬಟ್ಟೆ ತುಂಬ ಬೋಲ್ಡ್​​ ಆಗಿತ್ತು. ಎದೆ ಭಾಗ ಹೆಚ್ಚು ಕಾಣುವಂತಹ ಕಾಸ್ಟ್ಯೂಮ್​ ಧರಿಸಿ ಅವರು ಕ್ಯಾಟ್​ ವಾಕ್​ ಮಾಡಿದರು. ಅಲ್ಲದೇ ಆ ಫೋಟೋಗಳನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಸುಮ್ಮನಾದರು. ಆದರೆ ಅದನ್ನು ನೋಡಿದ ಅಭಿಮಾನಿಗಳು ಸುಮ್ಮನಾಗಲಿಲ್ಲ. ಕೆಲವರಿಗೆ ಈ ಅವತಾರ ಸಖತ್​ ಇಷ್ಟ ಆಯಿತು. ಭಾರಿ ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡಿದರು. ಆದರೆ ಇನ್ನೊಂದು ವರ್ಗದ ನೆಟ್ಟಿಗರು ಹಿಗ್ಗಾಮುಗ್ಗ ಕ್ಲಾಸ್​ ತೆಗೆದುಕೊಂಡರು. ಆದರೆ, ಇದಕ್ಕೆಲ್ಲ ನೋರಾ ಫತೇಹಿ ತಲೆ ಕೆಡಿಸಿಕೊಂಡಿಲ್ಲ. ಅವರು ತಮ್ಮ ಕೆಲಸದ ಕಡೆಗೆ ಗಮನ ಹರಿಸಿದ್ದಾರೆ.

ಇದನ್ನೂ ಓದಿ:

ನೋರಾ ಫತೇಹಿ ಡ್ರೆಸ್​ ನೋಡಿ ಅಚ್ಚರಿಗೊಂಡ ಫ್ಯಾನ್ಸ್​; ಇಲ್ಲಿವೆ ಫೋಟೋಗಳು

ಪುರುಷರ ಒಳಉಡುಪು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ; ಇದರ ಕಾನ್ಸೆಪ್ಟ್​ ನೋಡಿ ಹೆಣ್ಮಕ್ಕಳು ಸಹಿಸ್ತಾರಾ?

Read Full Article

Click on your DTH Provider to Add TV9 Kannada