ಸಮಂತಾರ ಪ್ರತಿಭೆ ಮತ್ತು ಜನಪ್ರಿಯತೆ ಬಗ್ಗೆ ನಾಗ ಚೈತನ್ಯರಲ್ಲಿ ಹುಟ್ಟಿದ ಈರ್ಷ್ಯೆಯೇ ಡಿವೋರ್ಸ್​ಗೆ ಕಾರಣವಾಯಿತೇ?

ನಾಗ ಚೈತನ್ಯ ಮತ್ತು ಸಮಂತಾ ಬೇರೆಯಾಗುವುದಕ್ಕೆ ಕೆಲವು ಕಾರಣಗಳನ್ನು ಹೇಳಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾದದ್ದು ಎಂದರೆ ಚೈತನ್ಯಗೆ ಸಮಂತಾರ ಪ್ರತಿಭೆ ಬಗ್ಗೆ ಈರ್ಷ್ಯೆ ಹುಟ್ಟಿದ್ದು.

ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ರುಥ್ ಪ್ರಭು ತಮ್ಮ ಹತ್ತು ವರ್ಷಗಳ ಸ್ನೇಹ ಮತ್ತು 4 ವರ್ಷಗಳ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ಕೊನೆ ಹೇಳಿಬಿಟ್ಟಿದ್ದಾರೆ. ಅವರು ಬೇರೆಯಾಗಲು ನಿರ್ಧರಿಸಿದ್ದ ಬಗ್ಗೆ ಕೆಲ ತಿಂಗಳುಗಳಿಂದ ಉಹಾಪೋಹಗಳಿದ್ದವು. ಆದರೆ ಆ ವದಂತಿಗಳನ್ನು ನಾಗ ಚೈತನ್ಯ ಮತ್ತು ಸಮಂತಾ ನಿರಾಕರಿಸುತ್ತಲೇ ಬಂದಿದ್ದರು. ಅಂತಿಮವಾಗಿ ಗಾಂಧಿ ಜಯಂತಿಯಂದು ಬೇರ್ಪಡುತ್ತಿರುವ ಕುರಿತು ಅವರು ಘೋಷಣೆ ಮಾಡಿದರು. 2010ರಲ್ಲಿ ‘ಯೇ ಮಾಯೆ ಚೇಸಾವೆ’ ಚಿತ್ರದ ಮೂಲಕ ಶುರುವಾದ ಅವರ ಸ್ನೇಹ 2017ರಲ್ಲಿ ವಿವಾಹ ಬಂಧನದಲ್ಲಿ ಪರ್ಯಾವಸನಗೊಂಡಿತ್ತು. ಆದರೆ ಕೇವಲ 4 ವರ್ಷಗಳಲ್ಲಿ ಆ ಬಂಧನ ಕಳಚಿಬಿದ್ದಿದೆ.

ಅವರಿಬ್ಬರು ನಾಯಕ-ನಾಯಕಿಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. 35 ವರ್ಷ ವಯಸ್ಸಿನ ನಾಗ ಚೈತನ್ಯ ತೆಲುಗಿನ ಧೀಮಂತ ನಟರಲ್ಲಿ ಒಬ್ಬರೆನಿಸಿಕೊಂಡಿರುವ ದಿವಂಗತ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮೊಮ್ಮಗ ಮತ್ತು ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಮಗ. ತೆಲುಗು ಮೂಲದ ತಂದೆ ಮತ್ತು ಮಲಯಾಳಿ ತಾಯಿಯ ಮಗಳು ಸಮಂತಾ.

ನಾಗ ಚೈತನ್ಯ ಮತ್ತು ಸಮಂತಾ ಬೇರೆಯಾಗುವುದಕ್ಕೆ ಕೆಲವು ಕಾರಣಗಳನ್ನು ಹೇಳಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾದದ್ದು ಎಂದರೆ ಚೈತನ್ಯಗೆ ಸಮಂತಾರ ಪ್ರತಿಭೆ ಬಗ್ಗೆ ಈರ್ಷ್ಯೆ ಹುಟ್ಟಿದ್ದು. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಹಳ ಬ್ಯುಸಿ ನಟಿಯಾಗುರುವ 34ರ ಪ್ರಾಯದ ಸಮಂತಾ ಇದುವರೆಗೆ 45ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು 4 ಫಿಲ್ಮ್​ಫೇರ್, 2 ನಂದಿ ಅವಾರ್ಡ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅವರು ನಟಿಸಿದ ಅನೇಕ ಸಿನಿಮಾಗಳು ಬಾಕ್ಸಾಫೀಸನ್ನು ಕೊಳ್ಳೆ ಹೊಡೆದಿವೆ. ಆದರೆ ಅದಕ್ಕೆ ತದ್ವಿರುದ್ಧವಾಗಿ  ನಾಗ ಚೈತನ್ಯಗೆ ಬ್ಲಾಕ್​ಬಸ್ಟರ್ ಹಿಟ್ ಸಿನಿಮಾ ನೀಡುವುದು ಸಾಧ್ಯವಾಗಿಲ್ಲ.

ಅವರ ನಡುವೆ ಬಿರುಕು ಮೂಡಲು ಕಾರಣವಾದ ಅಂಶಗಳಲ್ಲಿ ಇನ್ನೊಂದು ಅಂದರೆ, ಸಮಂತಾ ವೃತ್ತಿಬದುಕಿನಲ್ಲಿ ಚೈತನ್ಯ ಮೂಗು ತೂರಿಸಲಾರಂಭಿಸಿದ್ದರಂತೆ. ಇದೇ ಬ್ಯಾನರ್ ಸಿನಿಮಾಗಳಲ್ಲಿ ನಟಿಸಬೇಕು, ನಾಯಕ ನಟ ಇವರೇ ಆಗಿರಬೇಕು ಅಂತೆಲ್ಲ ತಾಕೀತು ಮಾಡಲು ಪ್ರಾರಂಭಿಸಿದ್ದರಂತೆ. ಅದು ಸಮಂತಾಗೆ ಕಿರಿಕಿರಿ ಅನಿಸತೊಡಗಿತ್ತು.

ಮತ್ತೊಂದು ಸಂಗತಿಯೆಂದರೆ, ಇವರಿಬ್ಬರಲ್ಲಿ ಒಬ್ಬರಿಗೆ ತಮ್ಮ ಕುಟುಂಬ ವಿಸ್ತರಣೆಯಾಗುವುದು ಬೇಕಿತ್ತು, ಮತ್ತೊಬ್ಬರಿಗೆ ಬೇಡವಾಗಿತ್ತು. ಈ ಕಾರಣಕ್ಕಾಗೇ ಅವರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರುತ್ತಿದ್ದವು ಎಂದು ಹೇಳಲಾಗುತ್ತಿದೆ. ಕಾರಣಗಳು ಏನೇ ಆಗಿದ್ದರೂ ಅವರಿಬ್ಬರು ಬೇರೆಯಾಗಿರುವುದು ಸದ್ಯದ ವಾಸ್ತವ.

ಇದನ್ನೂ ಓದಿ:   ‘ನನ್ನ ಮಗ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್​; ಇಲ್ಲಿದೆ ಶಾಕಿಂಗ್​ ವಿಡಿಯೋ​

Click on your DTH Provider to Add TV9 Kannada