ಧನ್ಯಾ ರಾಮ್​ಕುಮಾರ್​ ದೊಡ್ಡ ಮಟ್ಟದಲ್ಲಿ ಹೆಸ್ರು ಮಾಡ್ತಾರೆ ಎಂದು ಭವಿಷ್ಯ ನುಡಿದ ರಘು ದೀಕ್ಷಿತ್​

ಈ ಸಿನಿಮಾ ಬಗ್ಗೆ ಹಾಗೂ ಧನ್ಯಾ ಬಗ್ಗೆ ಈ ಸಿನಿಮಾದ ಮ್ಯೂಸಿಕ್​ ಡೈರೆಕ್ಟರ್​ ರಘು ದೀಕ್ಷಿತ್​ ಮಾತನಾಡಿದ್ದಾರೆ. ಅವರು ಧನ್ಯಾ ಅವರು ಭವಿಷ್ಯದಲ್ಲಿ ದೊಡ್ಡ ಹೀರೋಯಿನ್​ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. 

ರಾಜ್​ಕುಮಾರ್​ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಮತ್ತು ಸೂರಜ್​ ಗೌಡ ಜೋಡಿಯಾಗಿ ನಟಿಸಿರುವ ‘ನಿನ್ನ ಸನಿಹಕೆ’ ಚಿತ್ರ ಟ್ರೇಲರ್​ ಮೂಲಕವೇ ಭರವಸೆ ಮೂಡಿಸಿದೆ. ಹೊಸ ತಲೆಮಾರಿನ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ತಯಾರಾದಂತಿದೆ. ನಾಯಕನಾಗಿ ನಟಿಸುವುದರ ಜೊತೆ ನಿರ್ದೇಶಕನಾಗಿಯೂ ಸೂರಜ್​ ಗೌಡ ಕೆಲಸ ಮಾಡಿದ್ದಾರೆ. ಲಿವ್​-ಇನ್​-ರಿಲೇಷನ್​ಶಿಪ್​ ಕುರಿತ ಕಥೆ ಈ ಚಿತ್ರದಲ್ಲಿದೆ. ಅ.8ರಂದು ರಾಜ್ಯಾದ್ಯಂತ ‘ನಿನ್ನ ಸನಿಹಕೆ’ ಬಿಡುಗಡೆ ಆಗಲಿದ್ದು, ಜನರ ಪ್ರತಿಕ್ರಿಯೆ ಪಡೆಯಲು ಚಿತ್ರತಂಡ ಕಾಯುತ್ತಿದೆ. ಅಕ್ಷಯ್​ ರಾಜಶೇಖರ್​, ರಂಗನಾಥ್​ ಕೂಡ್ಲಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಈ ಸಿನಿಮಾ ಬಗ್ಗೆ ಹಾಗೂ ಧನ್ಯಾ ಬಗ್ಗೆ ಈ ಸಿನಿಮಾದ ಮ್ಯೂಸಿಕ್​ ಡೈರೆಕ್ಟರ್​ ರಘು ದೀಕ್ಷಿತ್​ ಮಾತನಾಡಿದ್ದಾರೆ. ಅವರು ಧನ್ಯಾ ಅವರು ಭವಿಷ್ಯದಲ್ಲಿ ದೊಡ್ಡ ಹೀರೋಯಿನ್​ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್​; ಧನ್ಯಾ ರಾಮ್​ಕುಮಾರ್​-ಸೂರಜ್​ಗೆ ತಲೈವಾ ಬೆಂಬಲ

Click on your DTH Provider to Add TV9 Kannada