ಶೂ ಧರಿಸಿ ಚಾಮುಂಡಿ ದೇವಸ್ಥಾನದ ಒಳಗೆ ಹೋದ ಮೈಸೂರು ಎಸ್ಪಿ; ವಿಡಿಯೋ ಇದೆ
ಎಸ್ಪಿ ಚೇತನ್ ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಹಿಂದೆ ಹೋಗುತ್ತಾರೆ. ಆಗ ಪೊಲೀಸ್ ಸಿಬ್ಬಂದಿ ಸಾರ್ ಶೂ ಶೂ ಅಂತ ಕೂಗುತ್ತಾರೆ.
ಮೈಸೂರು ಎಸ್ಪಿ ಚಾಮುಂಡಿ ದೇವಸ್ಥಾನದ ಒಳಗೆ ಶೂ ಧರಿಸಿ ಒಳಗೆ ಹೋಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದೋಬಸ್ತ್ನಲ್ಲಿದ್ದ ಎಸ್ಪಿ ಚೇತನ್ ಶೂ ಧರಿಸಿ ಚಾಮುಂಡಿ ದೇವಸ್ಥಾನದ ಒಳಗೆ ಹೋಗಿದ್ದರು. ಎಸ್ಪಿ ಚೇತನ್ ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಹಿಂದೆ ಹೋಗುತ್ತಾರೆ. ಆಗ ಪೊಲೀಸ್ ಸಿಬ್ಬಂದಿ ಸಾರ್ ಶೂ ಶೂ ಅಂತ ಕೂಗುತ್ತಾರೆ. ಪೊಲೀಸ್ ಸಿಬ್ಬಂದಿ ಕೂಗುತ್ತಿದ್ದಂತೆ ಎಸ್ಪಿ ಹೊರ ಬಂದು ಶೂ ಬಿಚ್ಚುತ್ತಾರೆ. ತರಾತುರಿಯಲ್ಲಿ ಶೂ ಹಾಕಿಕೊಂಡೇ ದೇಗುಲ ಪ್ರವೇಶಿಸಿದ್ದರು. ಕಾಲಿನಲ್ಲಿ ಶೂ ಇರುವುದು ತಿಳಿಯುತ್ತಿದ್ದಂತೆ ಎಸ್ಪಿ ಹೊರಗೆ ಬಂದರು. ಚಾಮುಂಡಿ ಬೆಟ್ಟದ ಮುಖ್ಯ ದ್ವಾರದಲ್ಲಿ ಈ ಘಟನೆ ನಡೆದಿದೆ.
Published on: Oct 07, 2021 11:31 AM
Latest Videos