AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೊಮ್ಯಾಂಟಿಕ್ ಫೋಟೋ ಮೂಲಕ ಗೆಳತಿ ಮಲೈಕಾಗೆ ಶುಭ ಕೋರಿದ ಅರ್ಜುನ್; ಈ ವೇಳೆ ಹೊಸ ಬೇಡಿಕೆ ಮುಂದಿಟ್ಟ ಕರೀನಾ

Malaika Arora | Arjun kapoor: ಇಂದು ಬಾಲಿವುಡ್ ನಟಿ, ಡಾನ್ಸರ್ ಮಲೈಕಾ ಅರೋರಾ ಜನ್ಮದಿನ. ಈ ಪ್ರಯುಕ್ತ ಅವರಿಗೆ ಬಾಲಿವುಡ್ ತಾರೆಯರು ಶುಭಕೋರುತ್ತಿದ್ದು, ಗೆಳೆಯ ಅರ್ಜುನ್ ಕಪೂರ್ ರೊಮ್ಯಾಂಟಿಕ್ ಫೋಟೋವೊಂದನ್ನು ಹಂಚಿಕೊಂಡು ವಿಶೇಷವಾಗಿ ಶುಭಕೋರಿದ್ದಾರೆ. ಇದನ್ನು ನೋಡಿದ ಕರೀನಾ ಹೊಸ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ.

ರೊಮ್ಯಾಂಟಿಕ್ ಫೋಟೋ ಮೂಲಕ ಗೆಳತಿ ಮಲೈಕಾಗೆ ಶುಭ ಕೋರಿದ ಅರ್ಜುನ್; ಈ ವೇಳೆ ಹೊಸ ಬೇಡಿಕೆ ಮುಂದಿಟ್ಟ ಕರೀನಾ
ಅರ್ಜುನ್ ಕಪೂರ್ ಹಂಚಿಕೊಂಡಿರುವ ಚಿತ್ರ (ಕೃಪೆ: ಅರ್ಜುನ್ ಕಪೂರ್/ ಇನ್ಸ್ಟಾಗ್ರಾಂ)
TV9 Web
| Edited By: |

Updated on:Oct 23, 2021 | 4:38 PM

Share

ಇಂದು ಬಾಲಿವುಡ್ ನಟಿ, ನೃತ್ಯಪಟು ಮಲೈಕಾ ಅರೋರಾ ಜನ್ಮದಿನ. 48ನೇ ವಸಂತಕ್ಕೆ ಕಾಲಿಟ್ಟ ಮಲೈಕಾ ಅವರಿಗೆ ಗೆಳೆಯ ಅರ್ಜುನ್ ಕಪೂರ್ ರೊಮ್ಯಾಂಟಿಕ್ ಚಿತ್ರವನ್ನು ಹಂಚಿಕೊಳ್ಳುವುದರ ಮೂಲಕ ಶುಭಾಶಯ ಕೋರಿದ್ದಾರೆ. ಅಲ್ಲದೇ ಇದಕ್ಕೆ ಸುಂದರವಾದ ಕ್ಯಾಪ್ಶನ್ ಕೂಡ ನೀಡಿದ್ದಾರೆ. ವಿಶೇಷವೆಂದರೆ ಮಲೈಕಾರ ಬೆಸ್ಟ್ ಫ್ರೆಂಡ್ ಕರೀನಾ ಕಪೂರ್ ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದು, ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ. ಏನಿದು ಸಮಾಚಾರ? ಮುಂದೆ ಓದಿ.

ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ನಟಿ ಮಲೈಕಾ ಅರೋರಾ ಒಟ್ಟಾಗಿ ಓಡಾಡುತ್ತಿರುವುದು ಇದೀಗ ಗುಟ್ಟಾಗಿ ಉಳಿದಿಲ್ಲ. ಇದನ್ನು ಈ ಜೋಡಿ ಸ್ಪಷ್ಟಪಡಿಸಿಲ್ಲವಾದರೂ ನಿರಾಕರಿಸಿಯೂ ಇಲ್ಲ. ಜೊತೆಗೆ ಈರ್ವರೂ ರೊಮ್ಯಾಂಟಿಕ್ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮಲೈಕಾ ಜನ್ಮದಿನಕ್ಕೆ ಅರ್ಜುನ್ ಶುಭಾಶಯ ಹೇಳಿದ್ದಾರೆ. ಆ ಚಿತ್ರದಲ್ಲಿ ಮಲೈಕಾ ಅರ್ಜುನ್​ಗೆ ಕಿಸ್ ಮಾಡುತ್ತಿದ್ದು, ಸಖತ್ ರೊಮ್ಯಾಂಟಿಕ್ ಆಗಿದೆ.

ಈ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅರ್ಜುನ್, ‘ಈ ದಿನ ಅಥವಾ ಬೇರೆಲ್ಲಾ ದಿನ.. ನನಗೆ ಬೇಕಿರುವುದು ನಿಮ್ಮ ನಗು. ಬಹುಶಃ ಈ ವರ್ಷ ಎಲ್ಲಾ ವರ್ಷಕ್ಕಿಂತ ಹೆಚ್ಚಿನ ನಗು ನಿಮ್ಮದಾಗಲಿ’ (“On this day or any other all I want is to make you smile…May this year you smile the mostest…”) ಎಂದು ಬರೆದಿದ್ದಾರೆ. ಮಲೈಕಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ಈ ಚಿತ್ರದಲ್ಲಿ ನಿನ್ನನ್ನು ನಾನು ನಗಿಸುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ’ ಎಂದು ತಮಾಷೆಯಾಗಿ ಬರೆದಿದ್ದಾರೆ.

ಅರ್ಜುನ್ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ:

View this post on Instagram

A post shared by Arjun Kapoor (@arjunkapoor)

ಈ ಚಿತ್ರಕ್ಕೆ ನಟಿ ಕರೀನಾ ಕಪೂರ್ ಪ್ರತಿಕ್ರಿಯೆ ನೀಡಿದ್ದು, ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ. ಮಲೈಕಾರ ಬೆಸ್ಟ್ ಫ್ರೆಂಡ್ ಆಗಿರುವ ಕರೀನಾ, ಅವರ ಗೆಳೆಯ ಅರ್ಜುನ್ ಬಳಿ ಬೇಡಿಕೆ ಇಟ್ಟಿದ್ದಾರೆ. ‘ನನಗೆ ಈ ಚಿತ್ರ ತೆಗೆದಿದ್ದಕ್ಕೆ ಪಿಕ್ಚರ್ ಕ್ರೆಡಿಟ್ಸ್ ಬೇಕು ಅರ್ಜುನ್ ಕಪೂರ್ ಜೀ’ ಎಂದು ಕರೀನಾ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಅರ್ಜುನ್ ಪ್ರತಿಕ್ರಿಯೆ ನೀಡಿದ್ದು, ‘ನಾನು ನಿಮಗೆ ಇನ್ನು ಮುಂದೆ ಕೇವಲ ನನ್ನ ಚಿತ್ರ ತೆಗೆಯಲು ಹೇಳುತ್ತೇನೆ. ನಿಮ್ಮ 2- 3 ದಿನವನ್ನು ಫೋಟೋಶೂಟ್​ಗಾಗಿ ಬ್ಲಾಕ್ ಮಾಡುತ್ತಿದ್ದೇನೆ’ ಎಂದು ಬರೆದಿದ್ದಾರೆ.

ಅರ್ಜುನ್ ಹಂಚಿಕೊಂಡಿರುವ ಚಿತ್ರಕ್ಕೆ ಬಹಳಷ್ಟು ಬಾಲಿವುಡ್ ತಾರೆಯರು ಪ್ರತಿಕ್ರಿಯೆ ನೀಡಿದ್ದು, ಮೆಚ್ಚುಗೆ ಸೂಚಿಸಿದ್ದಾರೆ. ರಣವೀರ್ ಸಿಂಗ್ ‘ಪ್ಯಾರ್’ ಎಂದು ಕಾಮೆಂಟ್ ಮಾಡಿದ್ದಾರೆ. ಅಮೃತಾ ಅರೋರಾ, ದಿಯಾ ಮಿರ್ಜಾ, ತಾಹಿರಾ ಕಶ್ಯಪ್, ತಾರಾ ಸುತಾರಿಯಾ ಸೇರಿದಂತೆ ಅನೇಕರು ಇಮೋಜಿಗಳನ್ನು ಹಂಚಿಕೊಂಡು ಶುಭಕೋರಿದ್ದಾರೆ.

ಇದನ್ನೂ ಓದಿ:

ಹೀಗೆ ಆದ್ರೆ ಆರ್ಯನ್​ ಖಾನ್​ಗೆ ಸದ್ಯಕ್ಕೆ ಸಿಗಲ್ಲ ಜಾಮೀನು; ಸಮೀರ್​ ವಾಂಖೆಡೆ ಸಿದ್ಧಪಡಿಸಿದ್ದಾರೆ ದೊಡ್ಡ ತಂತ್ರ

ಮುದ್ದಿಸುವ, ತಬ್ಬಿಕೊಳ್ಳುವ ದೃಶ್ಯಗಳನ್ನು ಟಿವಿಯಲ್ಲಿ ತೋರಿಸುವಂತಿಲ್ಲ; ಪಾಕಿಸ್ತಾನಿ ಕಿರುತೆರೆಗೆ ಸೆನ್ಸಾರ್​ ಬರೆ

Radhe Shyam: ‘ನನಗೆ ಎಲ್ಲಾ ಗೊತ್ತು, ಆದರೆ ಅದನ್ನ ಯಾರಿಗೂ ಹೇಳೋದಿಲ್ಲ’ ಎಂ‌ದ ಪ್ರಭಾಸ್; ಏಕಂತೆ?

Published On - 4:32 pm, Sat, 23 October 21