Radhe Shyam: ‘ನನಗೆ ಎಲ್ಲಾ ಗೊತ್ತು, ಆದರೆ ಅದನ್ನ ಯಾರಿಗೂ ಹೇಳೋದಿಲ್ಲ’ ಎಂ‌ದ ಪ್ರಭಾಸ್; ಏಕಂತೆ?

Prabhas Birthday: ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಮುಖ್ಯಭೂಮಿಕೆ ನಿಭಾಯಿಸಿರುವ ‘ರಾಧೆ ಶ್ಯಾಮ್’ ಚಿತ್ರದಲ್ಲಿನ ‘ವಿಕ್ರಮಾದಿತ್ಯ’ ಪಾತ್ರದ ಟೀಸರ್ ಬಿಡುಗಡೆಯಾಗಿದೆ. ಇದರಲ್ಲಿನ ಪ್ರಭಾಸ್ ಸಂಭಾಷಣೆ ಸದ್ಯ ಸಖತ್ ಸುದ್ದಿಯಾಗಿದೆ.

Radhe Shyam: 'ನನಗೆ ಎಲ್ಲಾ ಗೊತ್ತು, ಆದರೆ ಅದನ್ನ ಯಾರಿಗೂ ಹೇಳೋದಿಲ್ಲ' ಎಂ‌ದ ಪ್ರಭಾಸ್; ಏಕಂತೆ?
‘ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್
Follow us
TV9 Web
| Updated By: shivaprasad.hs

Updated on: Oct 23, 2021 | 3:09 PM

ಟಾಲಿವುಡ್ ನಟ ಪ್ರಭಾಸ್ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿದ್ದು, ‘ರಾಧೆ ಶ್ಯಾಮ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇಂದು (ಅಕ್ಟೋಬರ್ 23) ಪ್ರಭಾಸ್ ಜನ್ಮದಿನದ ಹಿನ್ನೆಲೆಯಲ್ಲಿ ‘ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್ ಪಾತ್ರವನ್ನು ಪರಿಚಯಿಸುವ ಟೀಸರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಟೀಸರ್ ಸದ್ಯ ಸಖತ್ ಸುದ್ದಿಯಾಗಿದ್ದು, ಇದರಲ್ಲಿ ಪ್ರಭಾಸ್ ಸ್ಟೈಲ್​ಗೆ, ಡೈಲಾಗ್ಸ್​ಗೆ ಹಾಗೂ ಚಿತ್ರದ ಮೇಕಿಂಗ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೇ ಪ್ರಭಾಸ್ ನುಡಿದಿರುವ ಸಂಭಾಷಣೆಗಳು ಎಲ್ಲೆಡೆ ಟ್ರೆಂಡ್ ಕೂಡ ಆಗುತ್ತಿದೆ. ಅಷ್ಟಕ್ಕೂ ಪ್ರಭಾಸ್ ಹೇಳಿದ್ದೇನು? ಮುಂದೆ ಓದಿ.

‘ರಾಧೆ ಶ್ಯಾಮ್’ ಚಿತ್ರದ ಟ್ರೈಲರ್ ವೀಕ್ಷಕರಲ್ಲಿ ಹೊಸ ಕುತೂಹಲ ಹುಟ್ಟುಹಾಕಿದೆ. ಕಾರಣ ಇದುವರೆಗೆ ಈ ಚಿತ್ರ ಒಂದು ರೊಮ್ಯಾಂಟಿಕ್ ಚಿತ್ರವಾಗಿರಲಿದೆ ಎಂದು ಸುದ್ದಿಗಳು ಓಡಾಡಿದ್ದವು. ಅಲ್ಲದೇ ಚಿತ್ರದ ಟೀಸರ್ ಹಾಗೂ ಪೋಸ್ಟರ್​ಗಳೂ ಅದನ್ನೇ ಹೇಳಿದ್ದವು. ಆದರೆ ಪ್ರಭಾಸ್ ಪಾತ್ರ ಪರಿಚಯದ ಮುಖಾಂತರ ಚಿತ್ರವು ಕೇವಲ ರೊಮ್ಯಾಂಟಿಕ್ ಮಾದರಿಯ ಚಿತ್ರವಲ್ಲ ಎಂಬುದು ಸಾಬೀತಾಗಿದೆ. ಅಲ್ಲದೇ ಇದರಲ್ಲಿನ ಪ್ರಭಾಸ್ ಸಂಭಾಷಣೆ ಎಲ್ಲವನ್ನೂ ತಿಳಿದಿರುವ ನಾಯಕನ ಪರಿಚಯವನ್ನು ಮಾಡಿಸಿದೆ. ಈ ಮೂಲಕ ಚಿತ್ರದ ಹೊಸ ಆಯಾಮವೊಂದು ತೆರೆದುಕೊಂಡಂತಾಗಿದ್ದು, ಕುತೂಹಲ ಇಮ್ಮಡಿಯಾಗಿದೆ.

‘ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್ ವಿಕ್ರಮಾದಿತ್ಯ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರದ ಮುಖ್ಯ ಗುಣ ಹೇಗೆಂದರೆ, ಆತನಿಗೆ ಎಲ್ಲವೂ ತಿಳಿದಿದೆ. ಆದರೆ ಅದನ್ನು ಯಾರಿಗೂ ಹೇಳುವುದಿಲ್ಲ. ಇದನ್ನು ಪ್ರಭಾಸ್ ಡೈಲಾಗ್ಸ್ ಮುಖಾಂತರ ವಿವರಿಸಿದ್ದಾರೆ. ‘ನನಗೆ ನೀನು ಗೊತ್ತು. ಆದರೆ ನಿನಗೆ ನಾನು ಅದನ್ನು ಹೇಳುವುದಿಲ್ಲ. ನಿನ್ನ ಹೃದಯ ಛಿದ್ರವಾಗಿರುವುದು ತಿಳಿದಿದೆ. ಆದರೆ ನಿನಗದನ್ನು ಹೇಳುವುದಿಲ್ಲ. ನನಗೆ ನಿನ್ನ ಸಾವಿನ ಕುರಿತೂ ತಿಳಿದಿದೆ. ಆದರೆ ನಿನಗೆ ಅದನ್ನೂ ಹೇಳುವುದಿಲ್ಲ. ನನಗೆ ಎಲ್ಲವೂ ತಿಳಿದಿದೆ. ಆದರೆ ಯಾವುದನ್ನೂ ನಿನಗೆ ಹೇಳುವುದಿಲ್ಲ’ ಎಂದು ಪ್ರಭಾಸ್ ಸ್ವಗತದಲ್ಲಿ ಹೇಳಿಕೊಂಡಿದ್ದಾರೆ. ಅವರು ಯಾವುದನ್ನೂ ಹೇಳದಿರುವ ಕಾರಣವನ್ನೂ ವಿವರಿಸಿದ್ದಾರೆ.

‘‘ನನಗೆ ಎಲ್ಲವೂ ತಿಳಿದಿದೆ. ಆದರೆ ಯಾವುದನ್ನೂ ಹೇಳುವುದಿಲ್ಲ. ಏಕೆಂದರೆ ಅವ್ಯಾವುದೂ ನಿನಗೆ ಅರ್ಥವಾಗುವುದಿಲ್ಲ. ಎಲ್ಲವೂ ನಿನ್ನ ಆಲೋಚನೆಯನ್ನು ಮೀರಿದೆ. ನಾನೇನು ಅಸಾಮಾನ್ಯನಲ್ಲ. ಆದರೆ ನಿಮ್ಮೆಲ್ಲರಂತೆಯೂ ಅಲ್ಲ’’ ಎಂದಿದ್ದಾರೆ ಪ್ರಭಾಸ್. ಈ ಮೂಲಕ ಟೀಸರ್​ನಲ್ಲಿ ಒಂದು ಅಸಾಮಾನ್ಯ ಪಾತ್ರದ ಪರಿಚಯವನ್ನು ಮಾಡಲಾಗಿದೆ.

ಚಿತ್ರದ ಟೀಸರ್ ಇಲ್ಲಿದೆ:

ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸುತ್ತಿರುವ ‘ರಾಧೆ ಶ್ಯಾಮ್’ ಜನವರಿ 14ರ ಸಂಕ್ರಾಂತಿಯಂದು ತೆರೆಗೆ ಬರುತ್ತಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ಏಕಕಾಲದಲ್ಲಿ ಚಿತ್ರ ತಯಾರಾಗಿದೆ. ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶಿಸಿದ್ದಾರೆ.

ಪ್ರಭಾಸ್​​ಗೆ ಶುಭಕೋರಿದ ‘ಆದಿಪುರುಷ್’ ನಿರ್ದೇಶಕ ಓಂ ರಾವುತ್: ಪ್ರಭಾಸ್ ಸದ್ಯ ‘ಆದಿಪುರುಷ್’ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಿದ್ದಾರೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್, ಸನ್ನಿ ಸಿಂಗ್, ಕೃತಿ ಸನೋನ್ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದ ನಿರ್ದೇಶಕ ಓಂ ರಾವುತ್ ಟ್ವೀಟ್ ಮುಖಾಂತರ ಪ್ರಭಾಸ್​ಗೆ ಶುಭಕೋರಿದ್ದಾರೆ.

ಪ್ರಭಾಸ್ ಬತ್ತಳಿಕೆಯಲ್ಲಿ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರವಿದೆ. ಈ ಚಿತ್ರದಲ್ಲಿ ಶೃತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವಲ್ಲದೇ ದೀಪಿಕಾ ಪಡುಕೋಣೆ ಹಾಗೂ ಅಮಿತಾಭ್ ಬಚ್ಚನ್ ನಟಿಸಲಿರುವ ‘ಪ್ರಾಜೆಕ್ಟ್ ಕೆ’ ಚಿತ್ರವೂ ಅನೌನ್ಸ್ ಆಗಿದೆ.

ಇದನ್ನೂ ಓದಿ:

Prabhas Birthday: ‘ಬಾಹುಬಲಿ’ಗೂ ಮುನ್ನವೇ ಆಕ್ಷನ್ ಸಿನಿಮಾಗಳಲ್ಲಿ ಧೂಳೆಬ್ಬಿಸಿದ್ದ ಪ್ರಭಾಸ್; ಯಾವುವು ಆ ಚಿತ್ರಗಳು?

ತುಂಬಾ ಕಿರಿಕಿರಿ ಮಾಡಿದ್ರೆ ರಶ್ಮಿಕಾ ಹೀಗೆ ಒದಿತಾರೆ; ವಿಡಿಯೋ ಸಮೇತ ವಿವರಿಸಿದ ನಟಿ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು