AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas Birthday: ‘ಬಾಹುಬಲಿ’ಗೂ ಮುನ್ನವೇ ಆಕ್ಷನ್ ಸಿನಿಮಾಗಳಲ್ಲಿ ಧೂಳೆಬ್ಬಿಸಿದ್ದ ಪ್ರಭಾಸ್; ಯಾವುವು ಆ ಚಿತ್ರಗಳು?

Prabhas Action Movies: ಇಂದು ಟಾಲಿವುಡ್ ನಟ ಪ್ರಭಾಸ್ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರು ಬಾಹುಬಲಿ ಚಿತ್ರಕ್ಕಿಂತ ಮುನ್ನ ನಟಿಸಿರುವ ಸೂಪರ್ ಹಿಟ್ ಆಕ್ಷನ್ ಚಿತ್ರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

Prabhas Birthday: ‘ಬಾಹುಬಲಿ’ಗೂ ಮುನ್ನವೇ ಆಕ್ಷನ್ ಸಿನಿಮಾಗಳಲ್ಲಿ ಧೂಳೆಬ್ಬಿಸಿದ್ದ ಪ್ರಭಾಸ್; ಯಾವುವು ಆ ಚಿತ್ರಗಳು?
ಪ್ರಭಾಸ್ (Credits: Telugu FilmNagar/ Twitter)
TV9 Web
| Edited By: |

Updated on: Oct 23, 2021 | 12:09 PM

Share

ಟಾಲಿವುಡ್ ನಟ ಪ್ರಭಾಸ್ ಜನ್ಮದಿನವಿಂದು. ಅವರು ‘ಬಾಹುಬಲಿ’ ಹಾಗೂ ‘ಸಾಹೋ’ ಚಿತ್ರದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾದರು. ಪ್ರಸ್ತುತ ಅವರ ಮುಂದಿನ ಎಲ್ಲಾ ಚಿತ್ರಗಳೂ ಬಹುದೊಡ್ಡ ಕ್ಯಾನ್ವಾಸ್​ನಲ್ಲಿ ತಯಾರಾಗುತ್ತಿರುವ ಚಿತ್ರಗಳು. ಆದರೆ ಬಾಹುಬಲಿ ಚಿತ್ರಕ್ಕೂ ಮುನ್ನ ಅವರ ಚಿತ್ರಗಳು ಹೇಗಿದ್ದವು? ಅಭಿಮಾನಿಗಳು ಅವರನ್ನು ನೆಚ್ಚಿನಿಂದ ರೆಬೆಲ್ ಸ್ಟಾರ್ ಎಂದು ಕರೆಯುತ್ತಿದ್ದರು. ಅದಕ್ಕೆ ತಕ್ಕಂತೆ ಪ್ರಭಾಸ್ ಆಕ್ಷನ್ ಮಾದರಿಯ ಚಿತ್ರಗಳಲ್ಲಿ ಸಖತ್ ಮಿಂಚುತ್ತಿದ್ದರು. ಅವರು ಬಾಹುಬಲಿ ಚಿತ್ರಕ್ಕೂ ಮುಂಚೆ ನಟಿಸಿದ, ಸೂಪರ್ ಹಿಟ್ ಆಕ್ಷನ್ ಚಿತ್ರಗಳ ಪಟ್ಟಿ ಇಲ್ಲಿದೆ. 

1. ಮಿರ್ಚಿ: ಕೊರಟಾಲ ಶಿವ ನಿರ್ದೇಶನದ ಮೊದಲ ಚಿತ್ರವಿದು. ಈ ಚಿತ್ರದಲ್ಲಿನ ಪ್ರಭಾಸ್ ನಟನೆಯನ್ನು ಇಂದಿಗೂ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. ಈ ಚಿತ್ರವನ್ನು ಕನ್ನಡದಲ್ಲಿ ‘ಮಾಣಿಕ್ಯ’ ಎಂಬ ಹೆಸರಿನಲ್ಲಿ ಕಿಚ್ಚ ಸುದೀಪ್ ರಿಮೇಕ್ ಮಾಡಿದ್ದರು. ಈ ಚಿತ್ರ ಯೂಟ್ಯೂಬ್​ನಲ್ಲಿ ಉಚಿತವಾಗಿ ನೋಡಲು ಲಭ್ಯವಿದೆ. ಹಾಗೆಯೇ ಡಿಸ್ನೆ+ ಹಾಟ್​ಸ್ಟಾರ್ ಆಪ್​ನಲ್ಲೂ ನೋಡಬಹುದು.

2. ರೆಬೆಲ್: ರಾಘವ ಲಾರೆನ್ಸ್ ನಿರ್ದೇಶನಕ್ಕೆ ಎಂಟ್ರಿ ಕೊಟ್ಟಿದ್ದು ‘ರೆಬೆಲ್’ ಚಿತ್ರದ ಮೂಲಕ. ಈ ಚಿತ್ರದಲ್ಲಿ ಪ್ರಭಾಸ್ ಹಾಗೂ ತಮನ್ನಾ ಕಾಣಿಸಿಕೊಂಡಿದ್ದರು. ಸಖತ್ ಸ್ಟೈಲಿಶ್ ಆಗಿ ಮೂಡಿಬಂದಿದ್ದ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಅಂತಹ ಯಶಸ್ಸು ಗಳಿಸದಿದ್ದರೂ, ಈಗಲೂ ಫ್ಯಾನ್ಸ್ ಈ ಚಿತ್ರದ ಆಕ್ಷನ್ ದೃಶ್ಯಗಳನ್ನು ನೋಡಿ ಸಂತಸಪಡುತ್ತಾರೆ. ಈ ಚಿತ್ರ ಯೂಟ್ಯೂಬ್​ನಲ್ಲಿ ಹಾಗೂ ಸನ್​ ನೆಕ್ಸ್ಟ್ ಆಪ್​ನಲ್ಲಿ ಲಭ್ಯವಿದೆ.

3. ಬಿಲ್ಲಾ: ಹಿಂದಿಯ ‘ಡಾನ್’  ಚಿತ್ರದ ರಿಮೇಕ್ ಆದ ಈ ಚಿತ್ರವನ್ನು ಮೆಹೆರ್ ರಮೇಶ್ ನಿರ್ದೇಶಿಸಿದ್ದರು. ಪ್ರಭಾಸ್ ಈ ಚಿತ್ರದಲ್ಲಿ ಡಬಲ್ ರೋಲ್ ಮಾಡಿದ್ದರು. ರಂಗ ಎಂಬ ಕಳ್ಳನ ಪಾತ್ರದಲ್ಲಿ ಹಾಗೂ ಬಿಲ್ಲಾ ಎಂಬ ಡಾನ್ ಪಾತ್ರದಲ್ಲಿ ನಟಿಸಿದ್ದ ಪ್ರಭಾಸ್​ಗೆ ಅನುಷ್ಕಾ ಶೆಟ್ಟಿ ಸಾಥ್ ನೀಡಿದ್ದರು. ಈ ಚಿತ್ರವನ್ನು ಯೂಟ್ಯೂಬ್​ನಲ್ಲಿ ಹಾಗೂ ಸನ್​ ನೆಕ್ಸ್ಟ್ ಆಪ್​ನಲ್ಲಿ ನೋಡಬಹುದು.

4. ಬುಜ್ಜಿಗಾಡು: ಪ್ರಭಾಸ್ ಹಾಗೂ ನಿರ್ದೇಶಕ ಪುರಿ ಜಗನ್ನಾಥ್ ಕಾಂಬಿನೇಷನ್​ನಲ್ಲಿ ಮೂಡಿಬಂದ ಮೊದಲ ಚಿತ್ರವಿದು. ಈ ಚಿತ್ರದ ಮುಖಾಂತರ ಪ್ರಭಾಸ್​ಗೆ ಮಾಸ್ ಅಭಿಮಾನಿಗಳು ಮತ್ತಷ್ಟು ಹೆಚ್ಚಾದರು. ಅಲ್ಲದೇ ಭರ್ಜರಿ ಸಂಭಾಷಣೆಗಳ ಮೂಲಕ ಈ ಚಿತ್ರದಲ್ಲಿ ಮಿಂಚಿದ್ದ ಪ್ರಭಾಸ್, ಆಗಿನ ಕಾಲದಲ್ಲಿ ಟ್ರೆಂಡ್ ಆಗಿದ್ದರು. ಇದರ ಯಶಸ್ಸು ನಿರ್ದೇಶಕ ಪುರಿ ಜಗನ್ನಾಥ್​ಗೂ ಸಲ್ಲಬೇಕು. ‘ಬುಜ್ಜಿಗಾಡು’ವಿನಲ್ಲಿ ತ್ರಿಷಾ ಪ್ರಭಾಸ್​ಗೆ ಜೋಡಿಯಾಗಿ ನಟಿಸಿದ್ದರು. ಆಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಚಿತ್ರ ಲಭ್ಯವಿದೆ.

5. ಛತ್ರಪತಿ: ನಿರ್ದೇಶಕ ರಾಜಮೌಳಿ ಹಾಗೂ ಪ್ರಭಾಸ್ ಕಾಂಬಿನೇಷನ್​ನಲ್ಲಿ ಮೂಡಿಬಂದ ಮೊದಲ ಚಿತ್ರವಿದು. ಅಲ್ಲದೇ ಪ್ರಭಾಸ್ ವೃತ್ತಿ ಜೀವನದ ಪ್ರಾರಂಭದಲ್ಲಿ ಬಹುದೊಡ್ಡ ಹಿಟ್ ತಂದುಕೊಟ್ಟು, ಜನರಿಗೆ ಮಾಸ್ ನಾಯಕನ ಪರಿಚಯ ಮಾಡಿಸಿದ್ದು ಇದೇ ಚಿತ್ರ. ಈ ಚಿತ್ರದ ಮಾಸ್ ದೃಶ್ಯಗಳನ್ನು ಪೀಟರ್ ಹೈನ್ ಸಂಯೋಜಿಸಿದ್ದು ಅದ್ಭುತವಾಗಿ ಮೂಡಿಬಂದಿದೆ. ಚಿತ್ರವು ಡಿಸ್ನೆ+ ಹಾಟ್​ಸ್ಟಾರ್​ನಲ್ಲಿ ಲಭ್ಯವಿದೆ.

ಇವುಗಳಲ್ಲದೇ ಪ್ರಭಾಸ್ ಇನ್ನೂ ಹಲವಾರು ಮಾಸ್ ಹಿಟ್​ಗಳನ್ನು ನೀಡಿದ್ದಾರೆ. ಕನ್ನಡದ ಕೆಲವು ರಿಮೇಕ್ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ಪ್ರಸ್ತುತ ಪ್ರಭಾಸ್ ಬಹುದೊಡ್ಡ ನಾಯಕರಾಗಿ ಬೆಳೆದಿದ್ದು, ‘ಸಲಾರ್’, ‘ರಾಧೆ ಶ್ಯಾಮ್’, ‘ಆದಿಪುರುಷ್’, ‘ಪ್ರಾಜೆಕ್ಟ್ ಕೆ’ ಮೊದಲಾದ ಬಿಗ್ ಬಜೆಟ್ ಸಿನಿಮಾಗಳಿಗೆ ನಾಯಕರಾಗಿದ್ದಾರೆ.

ಇದನ್ನೂ ಓದಿ:

Prabhas: ‘ಸಲಾರ್​’ ವಿಡಿಯೋ ಲೀಕ್​: ಕಿಡಿಗೇಡಿಗಳ ಕೆಲಸದಿಂದ ಪ್ರಭಾಸ್​ ಅಭಿಮಾನಿಗಳಿಗೆ ಪದೇಪದೇ ನಿರಾಸೆ

Ananya Panday: ‘ಇದು ಫಿಲ್ಮ್​ ಪ್ರೊಡಕ್ಷನ್​ ಹೌಸ್​ ಅಲ್ಲ’: ವಿಚಾರಣೆಗೆ ತಡವಾಗಿ ಬಂದ ಅನನ್ಯಾಗೆ ಸಮೀರ್​ ವಾಂಖೆಡೆ ಕ್ಲಾಸ್

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್