AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas: ‘ಸಲಾರ್​’ ವಿಡಿಯೋ ಲೀಕ್​: ಕಿಡಿಗೇಡಿಗಳ ಕೆಲಸದಿಂದ ಪ್ರಭಾಸ್​ ಅಭಿಮಾನಿಗಳಿಗೆ ಪದೇಪದೇ ನಿರಾಸೆ

Salaar video leak: ನಟ ಪ್ರಭಾಸ್​ ಅವರು ಫಿಟ್ನೆಸ್​ ಕಳೆದುಕೊಂಡಿದ್ದಾರೆ ಎಂದು ನೆಟ್ಟಿಗರು ಇತ್ತೀಚೆಗೆ ಟ್ರೋಲ್​ ಮಾಡಿದ್ದರು. ಈಗ ಅವರ ಸಲಾರ್​ ಸಿನಿಮಾದ ವಿಡಿಯೋ ಲೀಕ್​ ಆಗಿದೆ. ಈ ಎಲ್ಲ ವಿಚಾರಗಳು ಪ್ರಭಾಸ್​ ಅಭಿಮಾನಿಗಳಿಗೆ ಬೇಸರ ತರಿಸಿದೆ.

Prabhas: ‘ಸಲಾರ್​’ ವಿಡಿಯೋ ಲೀಕ್​: ಕಿಡಿಗೇಡಿಗಳ ಕೆಲಸದಿಂದ ಪ್ರಭಾಸ್​ ಅಭಿಮಾನಿಗಳಿಗೆ ಪದೇಪದೇ ನಿರಾಸೆ
‘ಸಲಾರ್’ ವಿಡಿಯೋ ಲೀಕ್
TV9 Web
| Edited By: |

Updated on: Oct 21, 2021 | 8:08 AM

Share

ನಟ ಪ್ರಭಾಸ್​ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವೆಲ್ಲವೂ ಹೈ ಬಜೆಟ್​ ಚಿತ್ರಗಳು ಎಂಬುದು ವಿಶೇಷ. ನಿರ್ದೇಶಕ ಪ್ರಶಾಂತ್​ ನೀಲ್​ ಮತ್ತು ಪ್ರಭಾಸ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ಸಲಾರ್​’ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇದೆ. ‘ಕೆಜಿಎಫ್​’ ಬಳಿಕ ಪ್ರಶಾಂತ್​ ನೀಲ್​ ಕೈಗೆತ್ತಿಕೊಂಡಿರುವ ಸಿನಿಮಾ ಇದಾಗಿರುವುದರಿಂದ ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಆಗಿದೆ. ಆದರೆ ಚಿತ್ರೀಕರಣದ ಸೆಟ್​ನಿಂದ ಕೆಲವು ದೃಶ್ಯಗಳು ಲೀಕ್​ ಆಗುತ್ತಿರುವುದು ಚಿತ್ರತಂಡಕ್ಕೆ ಮತ್ತು ಪ್ರಭಾಸ್​ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಪ್ರಭಾಸ್​ ಅವರು ಕೈಯಲ್ಲಿ ಗನ್​ ಹಿಡಿದು ಶೂಟ್​ ಮಾಡುತ್ತಿರುವ ದೃಶ್ಯದ ತುಣುಕು ಲೀಕ್​ ಆಗಿದೆ. ಚಿತ್ರೀಕರಣ ಸಂದರ್ಭದ ಇಂಥ ವಿಡಿಯೋಗಳು ಸೋರಿಕೆಯಾದರೆ ಸಿನಿಪ್ರಿಯರಿಗೆ ಚಿತ್ರದ ಬಗ್ಗೆ ಇರುವ ಕ್ರೇಜ್​ ಕಮ್ಮಿ ಆಗುತ್ತದೆ. ಕಥೆಯ ಎಳೆ ಕೂಡ ಬಹಿರಂಗ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಚಿತ್ರದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರಭಾಸ್​ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಶೂಟಿಂಗ್​ ಸೆಟ್​ನಲ್ಲಿ ಮೊಬೈಲ್​ ಬಳಕೆಗೆ ಅವಕಾಶ ನೀಡಬಾರದು ಎಂದು ಫ್ಯಾನ್ಸ್​ ಒತ್ತಾಯಿಸುತ್ತಿದ್ದಾರೆ.

ಪ್ರಭಾಸ್​ ಸಿನಿಮಾಗೆ ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ. ಕೆಲವೇ ದಿನಗಳ ಹಿಂದೆ ಓಂ ರಾವುತ್​ ನಿರ್ದೇಶನದ ‘ಆದಿಪುರುಷ್​’ ಚಿತ್ರದ ಸೆಟ್​ನಿಂದಲೂ ಒಂದು ವಿಡಿಯೋ ಲೀಕ್​ ಆಗಿತ್ತು. ಪ್ರಭಾಸ್​ ಅವರನ್ನೇ ಗುರಿಯಾಗಿಸಿಕೊಂಡು ಈ ರೀತಿ ವಿಡಿಯೋ ಲೀಕ್​ ಮಾಡುತ್ತಿರುವ ಕಿರಿಗೇಡಿಗಳು ಯಾರು ಎಂಬುದು ಪತ್ತೆ ಆಗಬೇಕಿದೆ.

‘ಸಲಾರ್​’ ಚಿತ್ರಕ್ಕೆ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಯ ವಿಜಯ್​ ಕಿರಗಂದೂರು ಅವರು ಬಂಡವಾಳ ಹೂಡುತ್ತಿದ್ದಾರೆ. ಬಹುಕೋಟಿ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ನಾಯಕಿಯಾಗಿ ಶ್ರುತಿ ಹಾಸನ್​ ಅಭಿನಯಿಸುತ್ತಿದ್ದಾರೆ. ಇದಲ್ಲದೇ, ಪ್ರಭಾಸ್​ ನಟಿಸಿರುವ ‘ರಾಧೆ ಶ್ಯಾಮ್​’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 2022ರ ಜನವರಿ 14ರಂದು ಈ ಚಿತ್ರ ರಿಲೀಸ್​ ಆಗಲಿದೆ. ‘ಆದಿಪುರುಷ್​’ ಚಿತ್ರದ ಕೆಲಸಗಳು ಕೂಡ ಭರದಿಂದ ಸಾಗಿವೆ.

ಇತ್ತೀಚೆಗೆ ಪ್ರಭಾಸ್​ ಅವರು ಟ್ರೋಲ್​ ಕಾಟಕ್ಕೆ ಒಳಗಾಗಿದ್ದರು. ಅವರು ಫಿಟ್ನೆಸ್​ ಕಳೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ‘ಅಂಕಲ್​’ ಎಂದು ಹೀಯಾಳಿಸಲಾಗಿತ್ತು. ಈ ಎಲ್ಲ ವಿಚಾರಗಳು ಪ್ರಭಾಸ್​ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಇದನ್ನೂ ಓದಿ:

ಯಶ್​, ಪ್ರಭಾಸ್​, ಸಮಂತಾರನ್ನೂ ಹಿಂದಿಕ್ಕಿ ರಶ್ಮಿಕಾ ನಂ.1, ದೇವರಕೊಂಡ ನಂ.2: ಇಲ್ಲಿದೆ ಫೋರ್ಬ್ಸ್​ ಪಟ್ಟಿ

ಪ್ರಭಾಸ್​ ಬಗ್ಗೆ ಹಬ್ಬಿದೆ 150 ಕೋಟಿ ರೂ. ಗಾಸಿಪ್​; ಸಂಬಳದ ವಿಷಯ ಕೇಳಿ ಹುಬ್ಬೇರಿಸಿದ ಫ್ಯಾನ್ಸ್​

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ