‘ಶಾರುಖ್​ ಮಗನ ಸಮಸ್ಯೆಗೆ ನಾನೇನು ಮಾಡಲಿ?’: ಮುಖಕ್ಕೆ ಹೊಡೆದಂತೆ ಮಾತಾಡಿದ್ರಾ ಅಜಯ್​ ದೇವಗನ್​?

ಅಜಯ್​ ದೇವಗನ್​ ಮತ್ತು ಶಾರುಖ್​ ಖಾನ್​ ಅವರು ಪಾನ್​ ಮಸಾಲಾ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜಾಹೀರಾತಿನ ಹೊಸ ಆವೃತ್ತಿಯ ಶೂಟಿಂಗ್​ಗೆ ಶಾರುಖ್​ ಚಕ್ಕರ್​ ಹಾಕಿದ್ದಾರೆ. ಅದಕ್ಕೆ ಅಜಯ್​ ದೇವಗನ್​ ಖಡಕ್​ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.

‘ಶಾರುಖ್​ ಮಗನ ಸಮಸ್ಯೆಗೆ ನಾನೇನು ಮಾಡಲಿ?’: ಮುಖಕ್ಕೆ ಹೊಡೆದಂತೆ ಮಾತಾಡಿದ್ರಾ ಅಜಯ್​ ದೇವಗನ್​?
ಅಜಯ್​ ದೇವಗನ್​, ಶಾರುಖ್​ ಖಾನ್​

ನಟ ಶಾರುಖ್​ ಖಾನ್​ ಅವರು ಈಗ ಸಂಕಷ್ಟದಲ್ಲಿದ್ದಾರೆ. ಪುತ್ರ ಆರ್ಯನ್ ಖಾನ್​ ಅರೆಸ್ಟ್​ ಆದ ದಿನದಿಂದಲೂ ಅವರ ದಿನಚರಿ ಬದಲಾಗಿದೆ. ಯಾವುದೇ ಸಿನಿಮಾ ಶೂಟಿಂಗ್​ನಲ್ಲಿ ಶಾರುಖ್​ ಭಾಗಿ ಆಗುತ್ತಿಲ್ಲ. ಇದರಿಂದಾಗಿ ನಿರ್ಮಾಪಕರ ಲೆಕ್ಕಾಚಾರ ತಲೆಕೆಳಗಾಗುತ್ತಿದೆ. ಸಿನಿಮಾ ಮಾತ್ರವಲ್ಲದೇ ಹಲವು ಜಾಹೀರಾತುಗಳಲ್ಲೂ ಶಾರುಖ್​ ನಟಿಸಬೇಕಿದೆ. ಅವುಗಳ ಶೂಟಿಂಗ್​ ಕೂಡ ಸ್ಥಗಿತಗೊಂಡಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ಅಜಯ್​ ದೇವಗನ್​ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ನಟ ಕಮಾಲ್​ ಆರ್​. ಖಾನ್​ ಮಾಡಿರುವ ಟ್ವೀಟ್​ ವೈರಲ್​ ಆಗುತ್ತಿದೆ.

ಎಲ್ಲರಿಗೂ ತಿಳಿದಿರುವಂತೆ ಅಜಯ್​ ದೇವಗನ್​ ಮತ್ತು ಶಾರುಖ್​ ಖಾನ್​ ಅವರು ಪಾನ್​ ಮಸಾಲಾ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಈ ಜಾಹೀರಾತಿನ ಹೊಸ ಆವೃತ್ತಿಯ ಶೂಟಿಂಗ್​ಗೆ ಶಾರುಖ್​ ಚಕ್ಕರ್​ ಹಾಕಿದ್ದಾರೆ. ಆದರೆ ಅಜಯ್​ ದೇವಗನ್​ ಆ ರೀತಿ ಮಾಡಿಲ್ಲ. ಅಲ್ಲದೇ, ತಮ್ಮ ಪಾಲಿನ ಶೂಟಿಂಗ್​ ದಿನಾಂಕವನ್ನು ಮುಂದಕ್ಕೆ ಹಾಕಲು ಸಹ ಅವರು ಒಪ್ಪಿಕೊಂಡಿಲ್ಲವಂತೆ.

‘ಶಾರುಖ್​ ಮಗನ ಸಮಸ್ಯೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಅದು ಶಾರುಖ್​ ಖಾನ್​ ಅವರ ಪರ್ಸನಲ್​ ಸಮಸ್ಯೆ. ಆ ಕಾರಣದಿಂದ ನಾನು ನನ್ನ ಶೂಟಿಂಗ್​ ಕ್ಯಾನ್ಸಲ್​ ಮಾಡಿಕೊಂಡು ಬೇರೆ ಡೇಟ್ಸ್​ ನೀಡಲು ಸಾಧ್ಯವಿಲ್ಲ’ ಎಂದು ನಿರ್ಮಾಪಕರಿಗೆ ಅಜಯ್​ ದೇವಗನ್​ ಖಡಕ್​ ಆಗಿ ಹೇಳಿದ್ದಾರೆ ಅಂತ ಕಮಾಲ್​ ಆರ್​. ಖಾನ್​ ಟ್ವೀಟ್​​ ಮಾಡಿದ್ದಾರೆ. ಬಾಲಿವುಡ್​ ಮಂದಿಯ ಒಗ್ಗಟ್ಟು ಹೀಗಿದೆ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ತಮ್ಮ ಬಗ್ಗೆ ಕೇಳಿಬಂದ ಈ ಸುದ್ದಿ ಬಗ್ಗೆ ಅಜಯ್​ ದೇವಗನ್​ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅನೇಕ ಕಲಾವಿದರು ಈ ಪರಿಸ್ಥಿತಿಯಲ್ಲಿ ಶಾರುಖ್​ ಖಾನ್​ ಪರವಾಗಿ ಮಾತನಾಡುತ್ತಿದ್ದಾರೆ. ಶೇಖರ್​ ಸುಮನ್​, ವಿಶಾಲ್​ ದದ್ಲಾನಿ, ಹೃತಿಕ್​ ರೋಷನ್​, ಸ್ವರಾ ಭಾಸ್ಕರ್​, ಹನ್ಸಲ್​ ಮೆಹ್ತಾ, ಫರ್ಹಾ ಖಾನ್, ಸಲ್ಮಾನ್​ ಖಾನ್​​ ಸೇರಿದಂತೆ ಅನೇಕರು ಶಾರುಖ್​ ಪರವಾಗಿ ನಿಂತಿದ್ದಾರೆ. ಯಾರು ಎಷ್ಟೇ ಬೆಂಬಲ ತೋರಿದರೂ ಶಾರುಖ್​ ಪುತ್ರನಿಗೆ ಜಾಮೀನು ಸಿಗುವುದು ಮರೀಚಿಕೆ ಆಗಿದೆ. ವಿಶೇಷ ಎನ್​ಡಿಪಿಎಸ್​ ಕೋರ್ಟ್​ನಲ್ಲಿ ಅವರ ಜಾಮೀನು ಅರ್ಜಿ ರಿಜೆಕ್ಟ್​ ಆಗಿದೆ. ಹಾಗಾಗಿ ಆರ್ಯನ್​ ಪರ ವಕೀಲರು ಜಾಮೀನಿಗಾಗಿ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.​

ಇದನ್ನೂ ಓದಿ:

ಇಲ್ಲೊಬ್ಬ ಬಡಪಾಯಿ, ನಕಲಿ ಶಾರುಖ್​ ಖಾನ್​ಗೆ ಮಕ್ಕಳ ಶಾಲೆ ಫೀಸ್​ ಕಟ್ಟಲು ದುಡ್ಡಿಲ್ಲ; ಯಾರಿದು?

Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್​ ಖಾನ್​; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್​ ಮಗನ ವರ್ತನೆ

Click on your DTH Provider to Add TV9 Kannada