ಪ್ರಿಯಕರನ​ ಬದಲು ಮರದ ಜತೆ ನಯನತಾರಾ ಮದುವೆ; ಏನಿದು ಸಮಾಚಾರ?

TV9 Digital Desk

| Edited By: Rajesh Duggumane

Updated on: Oct 20, 2021 | 8:51 PM

ವಿಘ್ನೇಶ್​ ಶಿವನ್​ ಮತ್ತು ನಯನತಾರಾ ನಡುವಿನ ಪ್ರೇಮ್​ ಕಹಾನಿ ಗುಟ್ಟಾಗಿ ಉಳಿದಿಲ್ಲ. ಪರಸ್ಪರ ಜೊತೆಯಾಗಿ ಕಾಲ ಕಳೆಯುತ್ತಿರುವ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲವನ್ನೂ ಬಹಿರಂಗ ಪಡಿಸಿದ್ದಾರೆ.

ಪ್ರಿಯಕರನ​ ಬದಲು ಮರದ ಜತೆ ನಯನತಾರಾ ಮದುವೆ; ಏನಿದು ಸಮಾಚಾರ?
ವಿಘ್ನೇಶ್​-ನಯನತಾರಾ

ಕನ್ನಡದ ‘ಸೂಪರ್​’ ಸಿನಿಮಾದಲ್ಲಿ ಉಪೇಂದ್ರ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಕನ್ನಡಿಗರಿಗೆ ಮನರಂಜನೆ ನೀಡಿದ್ದರು ನಟಿ ನಯನತಾರಾ. ಆ ಬಳಿಕ ಅವರು ಕನ್ನಡದ ಯಾವುದೇ ಸಿನಿಮಾದಲ್ಲೂ ನಟಿಸಲಿಲ್ಲ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ಅವರು ‘ಲೇಡಿ ಸೂಪರ್​ ಸ್ಟಾರ್’ ಎಂದೇ ಫೇಮಸ್​. ಸಿನಿಮಾ ಜೊತೆಜೊತೆಗೆ ಅವರು ಖಾಸಗಿ ಜೀವನದ ಕಾರಣದಿಂದ ಆಗಾಗ ಸುದ್ದಿ ಆಗುತ್ತಾರೆ. ನಿರ್ದೇಶಕ ವಿಘ್ನೇಶ್​ ಶಿವನ್​ ಜೊತೆ ಅವರು ಬಹುಕಾಲದಿಂದ ಡೇಟಿಂಗ್​ ಮಾಡುತ್ತಿದ್ದಾರೆ. ಶೀಘ್ರವೇ ಇವರ ಮದುವೆ ನಡೆಯಲಿದೆ. ಅಚ್ಚರಿ ಎಂದರೆ, ವಿಘ್ನೇಶ್​ ಜತೆ ಮದುವೆ ಆಗುವುದಕ್ಕೂ ಮೊದಲು ಅವರು ಮರವನ್ನು ಮದುವೆ ಆಗಲಿದ್ದಾರಂತೆ.

ವಿಘ್ನೇಶ್​ ಶಿವನ್​ ಮತ್ತು ನಯನತಾರಾ ನಡುವಿನ ಪ್ರೇಮ್​ ಕಹಾನಿ ಗುಟ್ಟಾಗಿ ಉಳಿದಿಲ್ಲ. ಪರಸ್ಪರ ಜೊತೆಯಾಗಿ ಕಾಲ ಕಳೆಯುತ್ತಿರುವ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲವನ್ನೂ ಬಹಿರಂಗ ಪಡಿಸಿದ್ದಾರೆ. ಅವರಿಬ್ಬರ ಮದುವೆ ಪ್ಲ್ಯಾನ್​ ಬಗ್ಗೆ ಪದೇಪದೇ ಸುದ್ದಿ ಕೇಳಿಬರುತ್ತಲೇ ಇರುತ್ತದೆ. ಈಗ ಮದುವೆ ಬಗ್ಗೆ ಅಚ್ಚರಿಯ ಸುದ್ದಿ ಕೇಳಿ ಬಂದಿದೆ.

ನಯನತಾರಾ ಹಾಗೂ ವಿಘ್ನೇಶ್​ ಜ್ಯೋತಿಷ್ಯವನ್ನು ಹೆಚ್ಚು ನಂಬುತ್ತಾರೆ. ಈ ಕಾರಣಕ್ಕೆ ಮದುವೆಗೂ ಮೊದಲು ತಮ್ಮ ಜಾತಕವನ್ನು ಅವರು ತೋರಿಸಿದ್ದಾರೆ. ಇದರಲ್ಲಿ ಕೆಲ ದೋಷಗಳು ಕಂಡಿವೆ. ಈ ಕಾರಣಕ್ಕೆ, ಮೊದಲು ಮರವನ್ನು ಮದುವೆ ಆಗಿ, ನಂತರ ವಿಘ್ನೇಶ್​ ಅವರನ್ನು ಮದುವೆ ಆಗುವಂತೆ ಜ್ಯೋತಿಷಿಗಳು ಸೂಚಿಸಿದ್ದಾರೆ.

ಹಿಂದೂ ಧರ್ಮದ ಪ್ರಕಾರ ಮರ ಅಥವಾ ಪ್ರಾಣಿಯನ್ನು ಮದುವೆ ಆದರೆ ದೋಷ ನಿವಾರಣೆ ಆಗುತ್ತದೆ. ಈ ಕೆಲವರು ಇದನ್ನು ನಂಬುತ್ತಾರೆ. ಅದೇ ರೀತಿ ನಯತಾರಾ ಮತ್ತು ಅವರ ಭಾವಿ ಪತಿ ಕೂಡ ಈ ಶಾಸ್ತ್ರದ ಮೇಲೆ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಅದನ್ನು ಆಚರಿಸೋಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಅವರ ಕಡೆಯಿಂದ ಈ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: Nayanthara: ಗುಟ್ಟಾಗಿ ಎಂಗೇಜ್​ಮೆಂಟ್ ಆದ ನಯನತಾರಾ ಮದುವೆಗೆ ಎಲ್ಲರನ್ನೂ ಕರೀತಾರಂತೆ

ಸೆಟ್ಟೇರಿತು ಶಾರುಖ್- ನಯನತಾರಾ ನಟನೆಯ ನೂತನ ಚಿತ್ರ; ಬಣ್ಣಹಚ್ಚಲಿದ್ದಾರಾ ಪ್ರಿಯಾಮಣಿ, ರಾಣಾ ದಗ್ಗುಬಾಟಿ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada