ಬಿಗ್​ ಬಾಸ್​ನಲ್ಲಿ ಶಮಿತಾ ಶೆಟ್ಟಿಗೆ ಕಾದಿದೆ ಬಿಗ್​ ಸರ್​ಪ್ರೈಸ್​; ವೈಲ್ಡ್​ ಕಾರ್ಡ್​ ಮೂಲಕ ದೊಡ್ಮನೆ ಸೇರುವವರು ಯಾರು?

ಬಿಗ್​ ಬಾಸ್ ಪ್ರತಿ ಸೀಸನ್​ನಲ್ಲೂ ಕೆಲವರನ್ನು ವೈಲ್ಡ್​ ಕಾರ್ಡ್​ ಮೂಲಕ ತರಲಾಗುತ್ತದೆ. ಈ ರೀತಿ ಅರ್ಧದಲ್ಲಿ ಬಿಗ್​ ಬಾಸ್​ ಪ್ರವೇಶಿಸುವವರು ಮೊದಲೇ ಖ್ಯಾತಿ ಪಡೆದುಕೊಂಡಿದ್ದರೆ ವೀಕ್ಷಕರಿಗೆ ಹೆಚ್ಚು ಕನೆಕ್ಟ್ ಆಗುತ್ತಾರೆ.

ಬಿಗ್​ ಬಾಸ್​ನಲ್ಲಿ ಶಮಿತಾ ಶೆಟ್ಟಿಗೆ ಕಾದಿದೆ ಬಿಗ್​ ಸರ್​ಪ್ರೈಸ್​; ವೈಲ್ಡ್​ ಕಾರ್ಡ್​ ಮೂಲಕ ದೊಡ್ಮನೆ ಸೇರುವವರು ಯಾರು?
ಶಮಿತಾ ಶೆಟ್ಟಿ, ಶಿಲ್ಪಾ ಶೆಟ್ಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 20, 2021 | 6:22 PM

‘ಬಿಗ್​ ಬಾಸ್​ ಸೀಸನ್​ 15’ ಆರಂಭವಾಗಿ ಕೆಲವು ವಾರಗಳು ಕಳೆದಿವೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಸೇರಿ ಸಾಕಷ್ಟು ಮಂದಿ ಇಲ್ಲಿ ಹೈಲೈಟ್​ ಆಗುತ್ತಿದ್ದಾರೆ. ಇದರ ಜತೆಗೆ ಮನೆಯಲ್ಲಿ ಕಿತ್ತಾಟಗಳು ಕೂಡ ಹೈಲೈಟ್​ ಆಗುತ್ತಿವೆ. ಈ ಮಧ್ಯೆ ಬಿಗ್​​ ಬಾಸ್​ನಲ್ಲಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿಗೆ ಸರ್​ಪ್ರೈಸ್​ ಒಂದು ಕಾದಿದೆ ಎನ್ನಲಾಗಿದೆ. ಈ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಹಾಗಾದರೆ, ವೈಲ್ಡ್​ ಕಾರ್ಡ್​ ಮೂಲಕ ಬಿಗ್​ ಬಾಸ್​ ಮನೆ ಸೇರುವ ಸ್ಪರ್ಧಿ ಯಾರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್​ ಬಾಸ್​ ಒಟಿಟಿಯಲ್ಲಿ ರಾಕೇಶ್​ ಬಾಪಟ್​ ಮತ್ತು ಶಮಿತಾ ಶೆಟ್ಟಿ ತುಂಬ ಆಪ್ತವಾಗಿದ್ದರು. ಪರಸ್ಪರ ಕಿಸ್​ ಮಾಡಿಕೊಳ್ಳುವ ಮಟ್ಟಕ್ಕೆ ಅವರ ನಡುವೆ ಆಪ್ತತೆ ಬೆಳೆದಿತ್ತು. ಬಿಗ್​ ಬಾಸ್​ ಶೋ ಮುಗಿದ ಬಳಿಕವೂ ಅವರು ತಮ್ಮ ಲವ್ವಿ-ಡವ್ವಿ ಮುಂದುವರಿಸಿದ್ದರು. ರಾಕೇಶ್​ ಮತ್ತು ಶಮಿತಾ ಜೊತೆಯಾಗಿ ಸುತ್ತಾಡಿದ್ದರು. ಆದರೆ, ಬಿಗ್​ ಬಾಸ್​ 15ರಲ್ಲಿ ಶಮಿತಾ ಮಾತ್ರ ಎಂಟ್ರಿ ಕೊಟ್ಟಿದ್ದರು. ರಾಕೇಶ್​ ಮಿಸ್​ ಆಗಿದ್ದರು. ಈಗ ರಾಕೇಶ್​ ವೈಲ್ಡ್​ ಕಾರ್ಡ್​​ ಮೂಲಕ ಬಿಗ್​ ಬಾಸ್​ ಪ್ರವೇಶಿಸಲಿದ್ದಾರೆ. ಈ ಮೂಲಕ ಶಮಿತಾ ಅವರನ್ನು ಸೇರಲಿದ್ದಾರೆ.

ಬಿಗ್​ ಬಾಸ್ ಪ್ರತಿ ಸೀಸನ್​ನಲ್ಲೂ ಕೆಲವರನ್ನು ವೈಲ್ಡ್​ ಕಾರ್ಡ್​ ಮೂಲಕ ತರಲಾಗುತ್ತದೆ. ಈ ರೀತಿ ಅರ್ಧದಲ್ಲಿ ಬಿಗ್​ ಬಾಸ್​ ಪ್ರವೇಶಿಸುವವರು ಮೊದಲೇ ಖ್ಯಾತಿ ಪಡೆದುಕೊಂಡಿದ್ದರೆ ವೀಕ್ಷಕರಿಗೆ ಹೆಚ್ಚು ಕನೆಕ್ಟ್ ಆಗುತ್ತಾರೆ. ಈ ಕಾರಣಕ್ಕೆ ರಾಕೇಶ್​ ಅವರನ್ನು ಕರೆತರಲು ವಾಹಿನಿ ನಿರ್ಧರಿಸಿದೆ.

ರಾಕೇಶ್​ ಅವರು ಬಿಗ್​ ಬಾಸ್​ ಒಟಿಟಿ ಮೂಲಕ ಹೆಸರು ಮಾಡಿದ್ದಾರೆ. ಅವರನ್ನು ವೈಲ್ಡ್​ ಕಾರ್ಡ್​ ಮೂಲಕ ಕರೆ ತರಬೇಕು ಎಂಬ ಆಲೋಚನೆ ವಾಹಿನಿಯದ್ದಾಗಿತ್ತು. ಈ ಕಾರಣಕ್ಕೆ ಆರಂಭದಲ್ಲಿ ಅವರನ್ನು ಮನೆ ಒಳಗೆ ಕಳುಹಿಸಿರಲಿಲ್ಲ. ಈ ವಾರಾಂತ್ಯದಲ್ಲಿ ಅವರು ದೊಡ್ಮನೆ ಸೇರಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: Shamita Shetty: ಇಂಗ್ಲೀಷ್​ನಲ್ಲಿ ಮಾತನಾಡಿದ್ದಕ್ಕೆ ನಾಮಿನೇಟ್ ಆದ ಶಮಿತಾ; ಇದೆಂಥಾ ಕಾರಣ ಎಂದು ಕಿಡಿಕಾರಿದ ನೆಟ್ಟಿಗರು

ಬಿಗ್​ ಬಾಸ್​​​ನಲ್ಲಿ ರಾಜ್​ ಕುಂದ್ರಾ ಬಗ್ಗೆ ಜೋಕ್​ ಮಾಡಿದ ಸಲ್ಮಾನ್​; ಮುಜುಗರಕ್ಕೊಳಗಾದ ಶಮಿತಾ ಶೆಟ್ಟಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ