AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shamita Shetty: ಇಂಗ್ಲೀಷ್​ನಲ್ಲಿ ಮಾತನಾಡಿದ್ದಕ್ಕೆ ನಾಮಿನೇಟ್ ಆದ ಶಮಿತಾ; ಇದೆಂಥಾ ಕಾರಣ ಎಂದು ಕಿಡಿಕಾರಿದ ನೆಟ್ಟಿಗರು

Nishant Bhat: ಬಿಗ್ ಬಾಸ್ 15ರಲ್ಲಿ ನಟಿ ಶಮಿತಾ ಶೆಟ್ಟಿ ಸೇರಿದಂತೆ ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಈ ವೇಳೆ ನಾಯಕ ನಿಶಾಂತ್ ಭಟ್ ಶಮಿತಾರ ನಾಮಿನೇಟ್​ಗೆ ನೀಡಿರುವ ಕಾರಣ ಸಖತ್ ಚರ್ಚೆಯಾಗುತ್ತಿದೆ.

Shamita Shetty: ಇಂಗ್ಲೀಷ್​ನಲ್ಲಿ ಮಾತನಾಡಿದ್ದಕ್ಕೆ ನಾಮಿನೇಟ್ ಆದ ಶಮಿತಾ; ಇದೆಂಥಾ ಕಾರಣ ಎಂದು ಕಿಡಿಕಾರಿದ ನೆಟ್ಟಿಗರು
ಶಮಿತಾ ಶೆಟ್ಟಿ
TV9 Web
| Updated By: shivaprasad.hs|

Updated on: Oct 20, 2021 | 3:38 PM

Share

Big Boss 15: ಬಿಗ್​ ಬಾಸ್ ಮನೆಯಲ್ಲಿ ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ಜಗಳಗಳು ಹುಟ್ಟಿಕೊಂಡರೆ, ಕೆಲವೊಮ್ಮೆ ಗಂಭೀರ ಕಾರಣಕ್ಕೆ ಅಸಮಾಧಾನ ಭುಗಿಲೇಳುತ್ತದೆ. ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ನಾಯಕನಾಗಿರುವ ನಿಶಾಂತ್ ಭಟ್ ಕ್ಷುಲ್ಲಕ ಕಾರಣಕ್ಕೆ 8 ಮಂದಿ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದು, ಇತರ ಸ್ಪರ್ಧಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ನಾಮಿನೇಟ್ ಮಾಡಲು ನಿಶಾಂತ್ ನೀಡಿರುವ ಕಾರಣ ಹಾಸ್ಯಾಸ್ಪದವಾಗಿದೆ ಎಂದು ವೀಕ್ಷಕರೂ ಕಿಡಿಕಾರುತ್ತಿದ್ದಾರೆ. ಅದರಲ್ಲೂ ನಟಿ ಶಮಿತಾ ಶೆಟ್ಟಿಯನ್ನು ಕ್ಷುಲ್ಲಕ ಕಾರಣಕ್ಕೆ ನಾಮಿನೇಟ್ ಮಾಡಲಾಗಿದೆ ಎಂಬ ಗಂಭೀರ ಆರೋಪ ನಿಶಾಂತ್ ಮೇಲೆ ಬಂದಿದೆ. ಅಷ್ಟಕ್ಕೂ ಬಿಗ್​ ಬಾಸ್ ಮನೆಯಲ್ಲಿ ನಡೆದಿದ್ದೇನು? ಮುಂದೆ ಓದಿ.

ಪ್ರಸ್ತುತ ಬಿಗ್​ಬಾಸ್ ಮನೆಯಲ್ಲಿ ನಾಯಕನಾಗಿರುವ ನಿಶಾಂತ್​ ಭಟ್​ಗೆ ಬಿಗ್ ಬಾಸ್ ವಿಶೇಷ ಅಧಿಕಾರವೊಂದನ್ನು ನೀಡಿತ್ತು. ಅದರ ಪ್ರಕಾರ ಮನೆಯಲ್ಲಿರುವ 15 ಜನರಲ್ಲಿ 8 ಜನರನ್ನು ಅವರು ನಾಮಿನೇಟ್ ಮಾಡಬಹುದಾಗಿತ್ತು. ಈಶಾನ್ ಸೆಹಗಲ್, ಮೀಶಾ ಅಯ್ಯರ್, ಸಿಂಬಾ ನಾಗ್ಪಾಲ್, ಅಫ್ಸನಾ ಖಾನ್, ಉಮರ್ ರಿಯಾಜ್, ಕರಣ್ ಕುಂದ್ರಾ, ಶಮಿತಾ ಶೆಟ್ಟಿ ಹಾಗೂ ವಿಶಾಲ್ ಕೋಟ್ಯಾನ್​ರನ್ನು ನಿಶಾಂತ್ ನಾಮಿನೇಟ್ ಮಾಡಿದರು. ಇದರಲ್ಲಿ ನಿಶಾಂತ್ ಸ್ನೇಹಿತರಾಗಿರುವ ಕರಣ್ ಹಾಗೂ ಶಮಿತಾರನ್ನು ಕೂಡ ನಾಮಿನೇಟ್ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಕೆಲ ಸಮಯದ ಹಿಂದೆ ಕರಣ್ ಕುಂದ್ರಾ, ನಾಯಕನ ಸ್ಥಾನಕ್ಕೆ ವೋಟ್ ಮಾಡುವಾಗ ನಿಶಾಂತ್ ಭಟ್​ಗೆ ವೋಟ್ ಮಾಡಿದ್ದರು. ಇದರಿಂದಾಗಿ ಮುಂದೆ ಸಹಾಯವಾಗಬಹುದು ಎಂಬ ಅವರ ನಿರೀಕ್ಷೆ ಫಲಕೊಡಲಿಲ್ಲ. ಎಲ್ಲವುಗಳಿಗಿಂತ ಹೆಚ್ಚಾಗಿ ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿರುವುದು ನಟಿ ಶಮಿತಾ ಶೆಟ್ಟಿಯನ್ನು ನಾಮಿನೇಟ್ ಮಾಡಿದ ಕುರಿತು. ಕೇವಲ ನಾಮಿನೇಟ್ ಮಾಡಿದ್ದರೆ ಇಷ್ಟು ಆಕ್ರೋಶ ವ್ಯಕ್ತವಾಗುತ್ತಿರಲಿಲ್ಲವೇನೋ, ಆದರೆ ನಾಮಿನೇಟ್ ಮಾಡಿ ನಿಶಾಂತ್ ನೀಡಿರುವ ಕಾರಣ ಮಾತ್ರ ತೀವ್ರ ಟೀಕೆಗೆ ಗುರಿಯಾಗಿದೆ.

ಶಮಿತಾ ಅವರನ್ನು ನಾಮಿನೇಟ್ ಮಾಡುತ್ತಾ ನಿಶಾಂತ್, ‘ಅವರು ಮೇಲಿಂದ ಮೇಲೆ ಇಂಗ್ಲೀಷ್ ಮಾತನಾಡುತ್ತಾರೆ’ ಎಂಬ ಕಾರಣ ನೀಡಿದ್ದಾರೆ. ಶಮಿತಾರನ್ನು ನಾಮಿನೇಟ್ ಮಾಡಲು ಅವರು ಮಾತನಾಡುವ ಭಾಷೆ ಕಾರಣವಾಯ್ತೇ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ನಿಶಾಂತ್ಬ ಮನಸ್ಥಿತಿಯನ್ನು ಟೀಕಿಸುತ್ತಿದ್ದಾರೆ. ಇದು ಬಹಳ ಅನ್ಯಾಯಕರ ನಿರ್ಧಾರ ಎಂದು ಹಲವು ನೆಟ್ಟಿಗರು ದನಿಗೂಡಿಸಿದ್ದಾರೆ. ಒಟ್ಟಿನಲ್ಲಿ ನಿಶಾಂತ್ ನಿರ್ಧಾರ ಬಿಗ್ ಬಾಸ್ ಮನೆಯಲ್ಲಿ ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿದೆ.

ಈ ಹಿಂದೆ ಬಿಗ್​ ಬಾಸ್ ಒಟಿಟಿಯಲ್ಲಿ ಶಮಿತಾ ಮಾತನಾಡುತ್ತಾ, ನಿಶಾಂತ್ ಭಟ್ ಒಮ್ಮೆ ತಮ್ಮೊಂದಿಗೆ ಲೈನ್ ಕ್ರಾಸ್ ಮಾಡಿದ್ದ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು. ಆ ಘಟನೆಯ ನಂತರ ನಿಶಾಂತ್​ರಿಂದ ಅಂತರ ಕಾಯ್ದುಕೊಳ್ಳುತ್ತಿದ್ದೇನೆ ಎಂದೂ ಅವರು ಹೇಳಿದ್ದರು. ಪ್ರಸ್ತುತ ಬಿಗ್ ಬಾಸ್ ಒಟಿಟಿಯಲ್ಲಿ ಹಾಗೂ ಬಿಗ್ ಬಾಸ್ 15ರಲ್ಲಿ ಈರ್ವರೂ ಒಟ್ಟಿಗಿದ್ದರೂ ಬಹಳ ಆಪ್ತರಾಗೇನೂ ಉಳಿದಿಲ್ಲ. ಪ್ರಸ್ತುತ ನಿಶಾಂತ್ ಶಮಿತಾರನ್ನು ನಾಮಿನೇಟ್ ಮಾಡಿರುವುದು ಈ ಎಲ್ಲಾ ಹಿನ್ನೆಲೆಯನ್ನು ಮತ್ತೆ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:

ಯಶ್​ 19ನೇ ಸಿನಿಮಾ ಬಗ್ಗೆ ಹರಿದಾಡುತ್ತಿರುವ ಸುದ್ದಿಯ ಅಸಲಿಯತ್ತೇನು?

ಆರ್ಯನ್​ಗೆ ಜಾಮೀನು ನೀಡೋಕೆ ಸಾಧ್ಯವೇ ಇಲ್ಲ ಎಂದ ಎನ್​ಡಿಪಿಎಸ್​ ಕೋರ್ಟ್​

Kichcha Sudeep: ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ‘ಕೋಟಿಗೊಬ್ಬ 3’; ನಾಲ್ಕು ದಿನದ ಕಲೆಕ್ಷನ್ ಎಷ್ಟು ಗೊತ್ತಾ?