ಕನ್ನಡತಿ ಭುವಿಗೆ ಬಿಟ್ಟು ಬಿಡದೇ ಕಾಡುತ್ತಿದೆ ಈ ಪ್ರಶ್ನೆ; ಇದಕ್ಕೆ ಹರ್ಷನಿಂದ ಬರುತ್ತಾ ಉತ್ತರ?

ಭುವಿ ಜನ್ಮದಿನ ಬಂದಿದೆ. ಈ ವಿಶೇಷ ದಿನದಂದು ಹರ್ಷ ಪ್ರಪೋಸ್​ ಮಾಡಬೇಕು ಎಂದು ನಿರ್ಧರಿಸಿದ್ದಾನೆ. ಅಂತೆಯೇ, ಭುವಿ ತಂಗಿ ಬಿಂದು ಜತೆ ಸೇರಿ ಮನೆಯನ್ನೆಲ್ಲ ಅಲಂಕರಿಸಿದ್ದ. ಭುವಿ ಮನೆ ಒಳಗೆ ಬರುತ್ತಿದ್ದಂತೆ ಅವಳಿಗೆ ದೊಡ್ಡ ಸರ್​ಪ್ರೈಸ್​ ನೀಡಿದ್ದ.

ಕನ್ನಡತಿ ಭುವಿಗೆ ಬಿಟ್ಟು ಬಿಡದೇ ಕಾಡುತ್ತಿದೆ ಈ ಪ್ರಶ್ನೆ; ಇದಕ್ಕೆ ಹರ್ಷನಿಂದ ಬರುತ್ತಾ ಉತ್ತರ?
ಹರ್ಷ-ಭುವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 20, 2021 | 9:36 PM

‘ಕನ್ನಡತಿ’ ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ. ಧಾರಾವಾಹಿ ಹೀರೋ ಹರ್ಷ (ಕಿರಣ್​ ರಾಜ್​) ಭುವಿಗೆ (ರಂಜನಿ ರಾಘವನ್​) ಪ್ರಪೋಸ್​ ಮಾಡೋಕೆ ರೆಡಿ ಆಗಿದ್ದಾನೆ. ಕಳೆದ ಒಂದು ವಾರದಿಂದ ಇದೇ ಹೈಲೈಟ್​ ಆಗುತ್ತಿದೆ. ಈ ಮಧ್ಯೆ ಭುವಿಗೆ ಬಿಟ್ಟೂ ಬಿಡದೆ ಒಂದು ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಹರ್ಷನಿಂದ ಉತ್ತರ ಸಿಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.

ಭುವಿ ಜನ್ಮದಿನ ಬಂದಿದೆ. ಈ ವಿಶೇಷ ದಿನದಂದು ಹರ್ಷ ಪ್ರಪೋಸ್​ ಮಾಡಬೇಕು ಎಂದು ನಿರ್ಧರಿಸಿದ್ದಾನೆ. ಅಂತೆಯೇ, ಭುವಿ ತಂಗಿ ಬಿಂದು ಜತೆ ಸೇರಿ ಮನೆಯನ್ನೆಲ್ಲ ಅಲಂಕರಿಸಿದ್ದ. ಭುವಿ ಮನೆ ಒಳಗೆ ಬರುತ್ತಿದ್ದಂತೆ ಅವಳಿಗೆ ದೊಡ್ಡ ಸರ್​ಪ್ರೈಸ್​ ನೀಡಿದ್ದ. ಮನೆ ಒಳಗೆ ಮಾಡಲಾಗಿದ್ದ ಅಲಂಕಾರ ನೋಡಿ ಭುವನೇಶ್ವರಿಗೆ ನಿಜಕ್ಕೂ ಅಚ್ಚರಿ ಹಾಗೂ ಶಾಕ್​ ಎರಡೂ ಆಗಿತ್ತು. ಮರುದಿನ ಮಧ್ಯಾಹ್ನ ಭುವಿಯನ್ನು ಹರ್ಷ ಊಟಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಭುವಿ ಕೇಳಿದ ಪ್ರಶ್ನೆಯಿಂದ ಹರ್ಷನಿಗೆ ಏನು ಉತ್ತರಿಸಬೇಕು ಎಂಬುದು ಗೊತ್ತಾಗಲೇ ಇಲ್ಲ.

ಹರ್ಷ ತನ್ನ ಹುಡುಗಿಯನ್ನು ಪರಿಚಯಿಸುತ್ತೇನೆ ಎಂದು ಭುವಿಗೆ ಭರವಸೆ ನೀಡಿದ್ದಾನೆ. ಆದರೆ, ಹರ್ಷ ತನ್ನನ್ನೇ ಪ್ರೀತಿಸುತ್ತಿದ್ದಾನೆ ಎನ್ನುವ ವಿಚಾರ ಆಕೆಗೆ ಇನ್ನೂ ತಿಳಿದಿಲ್ಲ. ಹೋಟೆಲ್​ನಲ್ಲಿ ಕುಳಿತಾಗಲೂ ‘ನೀವು ಪ್ರೀತಿಸುತ್ತಿರುವು ಹುಡುಗಿ ಇಲ್ಲೇ ಇದ್ದಾಳಾ?’ ಎಂದು ಹರ್ಷನನ್ನು ಭುವಿ ಕೇಳಿದಳು. ಈ ವೇಳೆ ಹರ್ಷನಿಂದ ಇಲ್ಲ ಎನ್ನುವ ಉತ್ತರ ಬಂತು.

ಊಟದ ನಂತರ ಭುವಿಯನ್ನು ಹರ್ಷ ಕರೆದುಕೊಂಡು ಹೋಗಿದ್ದು ಚಿತ್ರಮಂದಿರಕ್ಕೆ. ಇಡೀ ಚಿತ್ರಮಂದಿರವನ್ನು ಹರ್ಷ ತಮ್ಮಿಬ್ಬರಿಗಾಗಿ ಕಾಯ್ದಿರಿಸಿದ್ದ. ಸಿನಿಮಾ ಕೂಡ ಪ್ರಸಾರವಾಗುತ್ತಿತ್ತು. ಇಡೀ ಚಿತ್ರಮಂದಿರ ಖಾಲಿ ಇರುವುದನ್ನು ನೋಡಿದ ಭುವಿಗೆ ಅಚ್ಚರಿ ಆಗಿತ್ತು. ಸಿನಿಮಾ ಪ್ರಸಾರದ ವೇಳೆ ಭುವಿ ಮತ್ತೆ ‘ನಿಮ್ಮ ಹುಡುಗಿ ಎಲ್ಲಿ? ನನಗೆ ಯಾವಾಗ ಪರಿಚಯ ಮಾಡಿಸುತ್ತೀರಿ’ ಎಂದು ಕೇಳಿದಳು. ಇದಕ್ಕೆ ಹರ್ಷನಿಂದ ‘ಪರಿಚಯ ಮಾಡಿಸುತ್ತೇನೆ. ಈಗ ಸಿನಿಮಾ ನೋಡಿ ಪ್ಲೀಸ್​’ ಎನ್ನುವ ಉತ್ತರ ಬಂತು.

ಭುವಿ ಪದೇಪದೇ ನಿಮ್ಮ ಹುಡುಗಿ ಯಾರು ಎಂದು ಹರ್ಷನ ಬಳಿ ಕೇಳುತ್ತಲೇ ಇದ್ದಾಳೆ. ಆದರೆ, ಇದಕ್ಕೆ ಹರ್ಷನಿಗೆ ಉತ್ತರ ಕೊಡೋಕೆ ಆಗುತ್ತಿಲ್ಲ. ಹರ್ಷ ಪ್ರಪೋಸ್​ ಮಾಡಿದರೆ ಅದನ್ನು ಭುವಿ ಒಪ್ಪಿಕೊಳ್ಳುತ್ತಾಳಾ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: ಜನ ಮೆಚ್ಚಿಕೊಂಡ ‘ಕನ್ನಡತಿ’ ಜೋಡಿಗೆ ಸಿಕ್ತು ಅವಾರ್ಡ್​; ಸಂಭ್ರಮಿಸಿದ ಕಿರಣ್​ ರಾಜ್​, ರಂಜನಿ ರಾಘವನ್​

‘ಕನ್ನಡತಿ’ ವರುಧಿನಿ ಪರವಾಗಿ ಧ್ವನಿ ಎತ್ತಿದ ವೀಕ್ಷಕರು; ಇದಕ್ಕೆ ಕಾರಣ ಶ್ವೇತಾ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ