ಹೀಗೆ ಆದ್ರೆ ಆರ್ಯನ್​ ಖಾನ್​ಗೆ ಸದ್ಯಕ್ಕೆ ಸಿಗಲ್ಲ ಜಾಮೀನು; ಸಮೀರ್​ ವಾಂಖೆಡೆ ಸಿದ್ಧಪಡಿಸಿದ್ದಾರೆ ದೊಡ್ಡ ತಂತ್ರ

ಎನ್​ಡಿಪಿಎಸ್​ ವಿಶೇಷ ಕೋರ್ಟ್​ನಲ್ಲಿ ಆರ್ಯನ್​ ಅವರ ಜಾಮೀನು ಅರ್ಜಿ ರಿಜೆಕ್ಟ್​ ಆಗಿದೆ. ಈ ಬೆನ್ನಲ್ಲೇ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಶೀಘ್ರವೇ ಅವರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಹೀಗೆ ಆದ್ರೆ ಆರ್ಯನ್​ ಖಾನ್​ಗೆ ಸದ್ಯಕ್ಕೆ ಸಿಗಲ್ಲ ಜಾಮೀನು; ಸಮೀರ್​ ವಾಂಖೆಡೆ ಸಿದ್ಧಪಡಿಸಿದ್ದಾರೆ ದೊಡ್ಡ ತಂತ್ರ
ಸಮೀರ್​ ವಾಂಖೆಡೆ, ಆರ್ಯನ್​ ಖಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 23, 2021 | 3:45 PM

ಆರ್ಯನ್​ ಖಾನ್​ ಅವರು ಜೈಲು ಸೇರಿ 20 ದಿನಗಳ ಮೇಲಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಅವರಿಗೆ ಜಾಮೀನು ಸಿಗುತ್ತಿಲ್ಲ. ಜೈಲಿನಲ್ಲಿ ಕೊಡುವ ಊಟ ಅವರಿಗೆ ಹೊಂದುತ್ತಿಲ್ಲ. ಅವರಿಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ಇದು ಶಾರುಖ್​ ಖಾನ್​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರ್ಯನ್​ಗೆ ಜಾಮೀನು ಕೊಡಿಸಬೇಕು ಎನ್ನುವ ಪ್ರಯತ್ನದಲ್ಲಿ ಶಾರುಖ್ ಇದ್ದಾರೆ. ಈ ಮಧ್ಯೆ, ಆರ್ಯನ್​ಗೆ ಸದ್ಯಕ್ಕೆ ಜಾಮೀನು ಸಿಗುವ ಲಕ್ಷಣ ಗೋಚರವಾಗುತ್ತಿಲ್ಲ. ಆರ್ಯನ್​ಗೆ ಬಾಂಬೆ ಹೈಕೋರ್ಟ್​ನಲ್ಲಿ ಜಾಮೀನು ಸಿಗಬಾರದು ಎಂದು ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ತಂತ್ರ ಒಂದನ್ನು ರೂಪಿಸಿದ್ದಾರೆ.

ಎನ್​ಡಿಪಿಎಸ್​ ವಿಶೇಷ ಕೋರ್ಟ್​ನಲ್ಲಿ ಆರ್ಯನ್​ ಅವರ ಜಾಮೀನು ಅರ್ಜಿ ರಿಜೆಕ್ಟ್​ ಆಗಿದೆ. ಈ ಬೆನ್ನಲ್ಲೇ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಶೀಘ್ರವೇ ಅವರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಆದರೆ, ಆರ್ಯನ್​ಗೆ ಜಾಮೀನು ಸಿಗದಂತೆ ನೋಡಿಕೊಳ್ಳಲು ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಪ್ರಯತ್ನಿಸುತ್ತಿದ್ದಾರೆ.

ಆರ್ಯನ್​ ಸ್ಟಾರ್​ ಕಿಡ್​. ಅವರು ಕೋರ್ಟ್​ನಿಂದ ಹೊರ ಬಂದರೆ ಸಾಕ್ಷ್ಯಗಳನ್ನು ನಾಶ ಮಾಡಬಹುದು ಎನ್ನುವ ವಾದವನ್ನು ಎನ್​ಸಿಬಿ ವಕೀಲರು ಬಾಂಬೆ ಹೈಕೋರ್ಟ್​ನಲ್ಲಿಡಲು ಮುಂದಾಗಿದ್ದಾರೆ. ಇದಲ್ಲದೆ, ಈ ಪ್ರಕರಣದಲ್ಲಿ ಒಬ್ಬೊಬ್ಬರಾಗಿ ವಿಚಾರಣೆಗೆ ಹಾಜರುಪಡಿಸಲಾಗುತ್ತಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಎನ್​ಸಿಬಿ ಜಾಮೀನಿಗೆ ವಿರೋಧ ವ್ಯಕ್ತಪಡಿಸಲು ನಿರ್ಧರಿಸಿದೆ. ಇದು ಆರ್ಯನ್​ಗೆ ಜಾಮೀನು ಸಿಗದಿರಲು ಪ್ರಮುಖ ಕಾರಣವಾಗಬಹುದು.

ಬಾಂಬೆ ಹೈಕೋರ್ಟ್​ನಲ್ಲೂ ಜಾಮೀನು ಸಿಗದಿದ್ದರೆ ಆರ್ಯನ್​ ಖಾನ್​ ಪರ ವಕೀಲರು ಸುಪ್ರೀಂಕೋರ್ಟ್​ಗೆ ಹೋಗಲು ಅವಕಾಶವಿದೆ. ಅಲ್ಲಿಯೂ ಜಾಮೀನು ರಿಜೆಕ್ಟ್​ ಆದರೆ, ಜೈಲಿನಲ್ಲೇಯೇ ಉಳಿಯಬೇಕಾಗುತ್ತದೆ. ಸದ್ಯ, ಹೈಕೋರ್ಟ್​ನಲ್ಲಿ ನಡೆಯುವ ವಿಚಾರಣೆ ಮೇಲೆ ಎಲ್ಲರ ಚಿತ್ತ ಇದೆ. ಆರ್ಯನ್​ ಬಳಿ ಡ್ರಗ್ಸ್​ ಸಿಕ್ಕಿಲ್ಲ ಎಂಬ ವಾದವನ್ನು ಅವರ ವಕೀಲರು ಮುಂದಿಡುತ್ತಿದ್ದಾರೆ. ಆದರೆ, ಅದು ವರ್ಕೌಟ್​ ಆಗುತ್ತಿಲ್ಲ. ಹೀಗಾಗಿ, ಬೇರೆ ರೀತಿಯ ವಾದ ಮಂಡಿಸುವ ಸಾಧಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಆರ್ಯನ್ ಖಾನ್ ಪ್ರಕರಣದ ತನಿಖಾಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ‘ವಸೂಲಿ’ ಆರೋಪ ಮಾಡಿದ ಮಹಾರಾಷ್ಟ್ರ ಸಚಿವ

ಆರ್ಯನ್​ ಖಾನ್​ಗೆ ಡ್ರಗ್​ ಸಪ್ಲೈ ಮಾಡಿದ್ದು ಅನನ್ಯಾ ಪಾಂಡೆ? ವಾಟ್ಸಾಪ್ ಚಾಟ್​​​ನಿಂದ ಹೊರ ಬಿತ್ತು ರಹಸ್ಯ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ