ದಳಪತಿ ವಿಜಯ್​ ಸಿನಿಮಾದಿಂದ ಅನನ್ಯಾ ಪಾಂಡೆ ಔಟ್​? ಡ್ರಗ್ಸ್​ ಕೇಸ್​ ಬೆನ್ನಲ್ಲೇ ಇನ್ನೊಂದು ಗಾಸಿಪ್​

ದಳಪತಿ ವಿಜಯ್​ ಸಿನಿಮಾದಿಂದ ಅನನ್ಯಾ ಪಾಂಡೆ ಔಟ್​? ಡ್ರಗ್ಸ್​ ಕೇಸ್​ ಬೆನ್ನಲ್ಲೇ ಇನ್ನೊಂದು ಗಾಸಿಪ್​
ಅನನ್ಯಾ ಪಾಂಡೆ, ವಿಜಯ್​

Ananya Panday: ದಳಪತಿ ವಿಜಯ್​ ಅವರು ಸದ್ಯ ‘ಬೀಸ್ಟ್​’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಬಳಿಕ ಅವರ 66ನೇ ಸಿನಿಮಾ ಸೆಟ್ಟೇರಲಿದೆ. ಆ ಚಿತ್ರಕ್ಕೆ ಅನನ್ಯಾ ಪಾಂಡೆ ನಾಯಕಿ ಎಂಬ ಮಾತು ಕೇಳಿಬಂದಿತ್ತು.

TV9kannada Web Team

| Edited By: Madan Kumar

Oct 24, 2021 | 8:31 AM

ನಟಿ ಅನನ್ಯಾ ಪಾಂಡೆಗೆ ಈಗ ಸಂಕಷ್ಟ ಶುರುವಾಗಿದೆ. ಡ್ರಗ್ಸ್​ ಕೇಸ್​ನಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿದೆ. ಐಷಾರಾಮಿ ಹಡಗಿನಲ್ಲಿ ರೇವ್​ ಪಾರ್ಟಿ ಮಾಡಿದ ಆರೋಪದ ಮೇಲೆ ಜೈಲು ಸೇರಿರುವ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಜೊತೆ ಅನನ್ಯಾ ಪಾಂಡೆ ಸ್ನೇಹ ಹೊಂದಿದ್ದಾರೆ. ಡ್ರಗ್ಸ್​ ಪೂರೈಕೆ ಕುರಿತಂತೆ ಇವರಿಬ್ಬರ ನಡುವೆ ವಾಟ್ಸಾಪ್​ ಚಾಟ್​ ನಡೆದಿದೆ ಎನ್ನಲಾಗಿದೆ. ಇದರ ಬೆನ್ನಲೇ ಈಗ ಅನನ್ಯಾ ಮತ್ತು ದಳಪತಿ ವಿಜಯ್​ಗೆ ಸಂಬಂಧಿಸಿದ ಹೊಸ ಗಾಸಿಪ್​ ಹರಿದಾಡುತ್ತಿದೆ.

ದಳಪತಿ ವಿಜಯ್​ ಅವರು ಸದ್ಯ ‘ಬೀಸ್ಟ್​’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಬಳಿಕ ಅವರ 66ನೇ ಸಿನಿಮಾ ಸೆಟ್ಟೇರಲಿದೆ. ಆ ಚಿತ್ರಕ್ಕೆ ಅನನ್ಯಾ ಪಾಂಡೆ ನಾಯಕಿ ಎಂಬ ಮಾತು ಕೇಳಿಬಂದಿತ್ತು. ತಮಿಳಿನ ಜೊತೆಗೆ ಹಿಂದಿಗೆ ಡಬ್​ ಆಗಿ ತೆರೆಕಾಣಲಿರುವ ಆ ಚಿತ್ರಕ್ಕೆ ಬಾಲಿವುಡ್​ ಬೆಡಗಿಯೇ ನಾಯಕಿಯಾದರೆ ಒಳಿತು ಎಂದು ಚಿತ್ರತಂಡ ತೀರ್ಮಾನಿಸಿದ್ದು, ಅನನ್ಯಾ ಪಾಂಡೆಗೆ ಆಫರ್​ ನೀಡಲಾಗಿತ್ತು ಎಂಬ ಸುದ್ದಿ ಹರಡಿತ್ತು. ಆದರೆ ಈಗ ಡ್ರಗ್ಸ್​ ಕೇಸ್​ನಲ್ಲಿ ಅನನ್ಯಾ ಹೆಸರು ಕೇಳಿಬಂದಿರುವುದರಿಂದ ಅವರನ್ನು ಈ ಸಿನಿಮಾದಿಂದ ಕೈ ಬಿಡಲಾಗಿದೆ ಎಂಬ ಗಾಸಿಪ್​ ಹಬ್ಬಿದೆ.

ಈ ಕುರಿತಾಗಿ ಅನನ್ಯಾ ಪಾಂಡೆ ಅವರ ಆಪ್ತರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಅನನ್ಯಾಗೆ ವಿಜಯ್​ ಅವರ 66ನೇ ಸಿನಿಮಾದ ಆಫರ್​ ಬಂದಿರಲಿಲ್ಲ. ಆ ಚಿತ್ರಕ್ಕೆ ಸಂಬಂಧಿಸಿದಂತೆ ಅವರನ್ನು ಯಾರೂ ಭೇಟಿ ಮಾಡಿಲ್ಲ. ಹೀಗಿರುವಾಗ ಅವರನ್ನು ಕೈ ಬಿಡುವುದು ಎಲ್ಲಿಂದ ಬಂತು?’ ಎಂದು ಅನನ್ಯಾ ಆಪ್ತರು ಹೇಳಿದ್ದಾರೆ. ಎನ್​ಸಿಬಿ ಅಧಿಕಾರಿಗಳು ಅನನ್ಯಾರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಒಂದು ವೇಳೆ ಅವರ ವಿರುದ್ಧ ಬಲವಾದ ಸಾಕ್ಷಿಗಳು ಸಿಕ್ಕರೆ ಬಂಧಿಸುವ ಸಾಧ್ಯತೆ ಕೂಡ ಇದೆ. ಪ್ರಸ್ತುತ ವಿಜಯ್​ ದೇವರಕೊಂಡ ನಾಯಕತ್ವದ ‘ಲೈಗರ್’ ಚಿತ್ರಕ್ಕೆ ಅನನ್ಯಾ ಹೀರೋಯಿನ್​ ಆಗಿದ್ದಾರೆ. ಆ ಚಿತ್ರದ ಶೂಟಿಂಗ್​ಗೂ ತೊಂದರೆ ಆಗಿದೆ.​

ಇದನ್ನೂ ಓದಿ:

Ananya Panday: ‘ಶಾರುಖ್​ ಖಾನ್​ ನನ್ನ 2ನೇ ಅಪ್ಪ’ ಎಂದಿದ್ದ ಅನನ್ಯಾ ಪಾಂಡೆ; ಡ್ರಗ್ಸ್​ ಸುಳಿಯಲ್ಲಿ ನಟಿ

Ananya Panday: ‘ಇದು ಫಿಲ್ಮ್​ ಪ್ರೊಡಕ್ಷನ್​ ಹೌಸ್​ ಅಲ್ಲ’: ವಿಚಾರಣೆಗೆ ತಡವಾಗಿ ಬಂದ ಅನನ್ಯಾಗೆ ಸಮೀರ್​ ವಾಂಖೆಡೆ ಕ್ಲಾಸ್

Follow us on

Related Stories

Most Read Stories

Click on your DTH Provider to Add TV9 Kannada