‘ಖಾಲಿ ಹಾಳೆಗೆ ಸಮೀರ್​ ವಾಂಖೆಡೆ ಸಹಿ ಮಾಡಿಸಿಕೊಂಡ್ರು’: ಆರ್ಯನ್​ ಬಂಧಿಸಿದ ಅಧಿಕಾರಿ ಮೇಲೆ ಗಂಭೀರ ಆರೋಪ

‘ಖಾಲಿ ಹಾಳೆಗೆ ಸಮೀರ್​ ವಾಂಖೆಡೆ ಸಹಿ ಮಾಡಿಸಿಕೊಂಡ್ರು’: ಆರ್ಯನ್​ ಬಂಧಿಸಿದ ಅಧಿಕಾರಿ ಮೇಲೆ ಗಂಭೀರ ಆರೋಪ
ಕೆಪಿ ಗೋಸಾವಿ, ಆರ್ಯನ್ ಖಾನ್

ಪ್ರಭಾಕರ್​ ಸೈಲ್​ ಅವರು ಕೆಪಿ ಗೋಸಾವಿಯ ಬಾಡಿಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದರು. ರೇವ್​ ಪಾರ್ಟಿ ಮೇಲೆ ದಾಳಿ ನಡೆದ ದಿನ ಅವರು ಕೂಡ ಸ್ಥಳದಲ್ಲಿ ಇದ್ದರು. ಅವರೀಗ ಸ್ಫೋಟಕ ಹೇಳಿಕೆ ನೀಡಿದ್ದಾರೆ.

TV9kannada Web Team

| Edited By: Madan Kumar

Oct 24, 2021 | 3:35 PM

ಶಾರುಖ್ ಖಾನ್​ ಮಗ ಆರ್ಯನ್​ ಖಾನ್​ ಅವರ ಬಂಧನದ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಲವು ಬಾಲಿವುಡ್​ ಸೆಲೆಬ್ರಿಟಿಗಳು ಶಾರುಖ್​ ಕುಟುಂಬದ ಪರವಾಗಿ ಮಾತನಾಡುತ್ತಿದ್ದಾರೆ. ಆರ್ಯನ್​ ಬಂಧನದ ಹಿಂದೆ ಬೇರೇನೋ ಪಿತೂರಿ ಇದೆ ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ. ಈಗ ಆ ಮಾತಿಗೆ ಪುಷ್ಟಿ ನೀಡುವಂತಹ ಘಟನೆ ನಡೆದಿದೆ. ಆರ್ಯನ್​ ಖಾನ್​ ರೇವ್​ ಪಾರ್ಟಿ ಮಾಡುತ್ತಿದ್ದರು ಎನ್ನಲಾದ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆದ ಬಳಿಕ ಕೆಲವು ಸಾಕ್ಷಿದಾರರಿಂದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಅವರು ಖಾಲಿ ಹಾಳೆ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆರ್ಯನ್​ ಖಾನ್​ ಅವರು ಎನ್​ಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ದಿನವೇ ವ್ಯಕ್ತಿಯೊಬ್ಬರು ಆರ್ಯನ್​ ಜೊತೆ ಸೆಲ್ಫಿ ತೆಗೆದುಕೊಂಡಿದ್ದು ವೈರಲ್​ ಆಗಿತ್ತು. ಆ ವ್ಯಕ್ತಿಯ ಹೆಸರು ಕೆಪಿ ಗೋಸಾವಿ. ಅವರು ಎನ್​ಸಿಬಿ ಸಿಬ್ಬಂದಿ ಅಲ್ಲ ಎಂಬುದು ನಂತರ ಗೊತ್ತಾಯಿತು. ಈಗ ಗೋಸಾವಿ ನಾಪತ್ತೆ ಆಗಿದ್ದಾರೆ. ಗೋಸಾವಿ ಆಪ್ತ ಎನ್ನಲಾದ ಪ್ರಭಾಕರ್​ ಸೈಲ್​ ಅವರು ಸಮೀರ್​ ವಾಂಖೆಡೆ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ತಮಗೆ ಜೀವ ಬೆದರಿಕೆ ಇದೆ ಎಂಬುದನ್ನೂ ಅವರು ತಿಳಿಸಿದ್ದಾರೆ.

ಪ್ರಭಾಕರ್​ ಸೈಲ್​ ಅವರು ಕೆಪಿ ಗೋಸಾವಿಯ ಬಾಡಿಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದರು. ರೇವ್​ ಪಾರ್ಟಿ ಮೇಲೆ ದಾಳಿ ನಡೆದ ದಿನ ಅವರು ಕೂಡ ಸ್ಥಳದಲ್ಲಿ ಇದ್ದರು. ಆದರೆ ದಾಳಿ ಬಗ್ಗೆ ತಮಗೇನೂ ಗೊತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ‘ಪಂಚನಾಮೆಯ ಖಾಲಿ ಹಾಳೆ ಮೇಲೆ ನಮ್ಮಿಂದ ಸಹಿ ಮಾಡಿಸಿಕೊಂಡರು. ಗೋಸಾವಿ ನಾಪತ್ತೆ ಆದ ಬಳಿಕ ಸಮೀರ್​ ವಾಂಖೆಡೆ ಅವರಿಂದ ನನಗೂ ಜೀವ ಬೆದರಿಕೆ ಇದೆ. 18 ಕೋಟಿ ರೂ. ಡೀಲ್​ ಬಗ್ಗೆ ನಾನು ಕೇಳಲ್ಪಟ್ಟಿದ್ದೇನೆ’ ಎಂದು ಪ್ರಭಾಕರ್​ ಸೈಲ್​ ಹೇಳಿದ್ದಾರೆ.

ಈ ಆರೋಪಕ್ಕೆ ಸಂಬಂಧ ಪಟ್ಟಂತೆ ಸಮೀರ್​ ವಾಂಖೆಡೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಭಾಕರ್​ ಸೈಲ್​ ಮಾಡಿದ ಎಲ್ಲ ಆರೋಪಗಳನ್ನು ಅವರು ತಳ್ಳಿ ಹಾಕಿದ್ದಾರೆ. ಶೀಘ್ರವೇ ಸೂಕ್ತ ಉತ್ತರ ನೀಡುವುದಾಗಿ ಅವರು ತಿಳಿಸಿದ್ದಾರೆ. ‘ದುಡ್ಡಿನ ವ್ಯವಹಾರ ನಡೆದಿದ್ದರೆ ಯಾರನ್ನಾದರೂ​ ಯಾಕೆ ಜೈಲಿಗೆ ಕಳಿಸಬೇಕಿತ್ತು?’ ಎಂದು ಅವರು ಪ್ರಶ್ನಿಸಿದ್ದಾರೆ. ಒಟ್ಟಾರೆ ಪ್ರಭಾಕರ್​ ಸೈಲ್​ ಹೇಳಿಕೆಯಿಂದ ಇಡೀ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಂತಾಗಿದೆ.

ಇದನ್ನೂ ಓದಿ:

ಜೈಲಲ್ಲಿ ರಾಮ-ಸೀತೆಯ ಪುಸ್ತಕ ಓದುತ್ತಿರುವ ಆರ್ಯನ್​ ಖಾನ್​; ಜಾಮೀನು ಸಿಗದೇ ಸ್ಟಾರ್​ ಪುತ್ರ ಕಂಗಾಲು

Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್​ ಖಾನ್​; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್​ ಮಗನ ವರ್ತನೆ

Follow us on

Related Stories

Most Read Stories

Click on your DTH Provider to Add TV9 Kannada